Advertisement

ಒಟಿಟಿ ಸೇವೆಗಳ ಮೇಲೆ ನಿಯಂತ್ರಣ?

11:01 AM Sep 02, 2022 | Team Udayavani |

ನವದೆಹಲಿ:  ಇಂಟರ್ನೆಟ್‌ ಮೆಸೇಜಿಂಗ್‌ ಮತ್ತು ವಾಯ್ಸ ಕಾಲಿಂಗ್‌ ಅಪ್ಲಿಕೇಷನ್ಸ್‌ಗಳ ಮೇಲೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ನಿಬಂಧನೆಗಳು ಮತ್ತು ನಿಯಮಗಳನ್ನು ರೂಪಿಸಲು ತನ್ನ ಅಭಿಪ್ರಾಯ ತಿಳಿಸುವಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್‌)ಕ್ಕೆ ದೂರಸಂಪರ್ಕ ಸಚಿವಾಲಯ ಸೂಚಿಸಿದೆ.

Advertisement

ಒಟಿಟಿ ಸೇವೆಗಳಾದ ವಾಟ್ಸ್‌ಆ್ಯಪ್‌, ಸಿಗ್ನಲ್‌, ಗೂಗಲ್‌ ಮೀಟ್‌ ಹಾಗೂ ಇತರೆ ಆ್ಯಪ್‌ಗ್ಳು ಮತ್ತು ಸೇವೆಗಳ ಮೇಲೆ ನಿಬಂಧನೆಗಳು ಜಾರಿಯಾಗಲಿವೆ. “ಒಟಿಟಿ ಸೇವೆಗಳ ನಿಯಂತ್ರಣ ಅಗತ್ಯವಿಲ್ಲ’ ಎಂದು ಈ ಹಿಂದೆ ಟ್ರಾಯ್‌ ಶಿಫಾರಸು ಮಾಡಿತ್ತು. ಆದರೆ ನೂತನ ತಂತ್ರಜ್ಞಾನದೊಂದಿಗೆ ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಹೊಸದಾಗಿ ವರದಿ ನೀಡುವಂತೆ ದೂರಸಂಪರ್ಕ ಸಚಿವಾಲಯ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next