ಬೆಂಗಳೂರು: ಹುಟ್ಟುಹಬ್ಬದ ಪಾರ್ಟಿ ಬಳಿಕ ಅರೆಬೆತ್ತಲಾಗಿ ಕೆರೆ ಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವ ಘಟನೆ ಹುಳಿ ಮಾವು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೆಂಬತ್ತಹಳ್ಳಿ ನಿವಾಸಿ ಸೋಲೋ ಮನ್(28) ಹಾಗೂ ಆತನ ಸ್ನೇಹಿತ ಜ್ಞಾನಭಾರತಿ ನಿವಾಸಿ ಅಭಿಷೇಕ್(27) ಮೃತರು. ಸೋಲೋಮನ್ ಸೆಕೆಂಡ್ ಹ್ಯಾಂಡ್ ಶೋರೂಮ್‌ನಲ್ಲಿ ಸೇಲ್ಸ್ ಮ್ಯಾನ್ ಆಗಿದ್ದ. ಅಭಿಷೇಕ್ ಜೆ.ಪಿ.ನಗರದಲ್ಲಿ ಕಾಲ್ ಸೆಂಟರ್ ಕಂಪನಿಯಲ್ಲಿ ಕೆಲಸ ಮಾಡಿ ಕೊಂಡಿದ್ದ. ಇಬ್ಬರು ಎರ ಡೂ¾ರು ವರ್ಷಗಳಿಂದ ಸ್ನೇಹಿತ ರಾಗಿ ದ್ದರು. ವಾರಕ್ಕೊಮ್ಮೆ ಪಾರ್ಟಿ ಮಾಡುತ್ತಿದ್ದರು.
ಚಿಕ್ಕಕಮ್ಮನಹಳ್ಳಿಯ ಕೆರೆ ಪಕ್ಕದಲ್ಲೇ ಸೋಲೋಮನ್ ಇತ್ತೀಚೆಗಷ್ಟೇ ಬಾಡಿಗೆ ಮನೆ ಮಾಡಿಕೊಂಡಿದ್ದ. ಆ.26ರಂದು ತನ್ನ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ತನ್ನ ಮನೆಯಲ್ಲಿ ರಾತ್ರಿ ಸ್ನೇಹಿತ ಅಭಿಷೇಕ್ ಜತೆ ಪಾರ್ಟಿ ಮಾಡಿದ್ದಾರೆ. ಕಂಠಪೂರ್ತಿ ಮದ್ಯ ಸೇವಿಸಿದ ಬಳಿಕ ಇಬ್ಬರು ಅರೆಬೆತ್ತಲಾಗಿ ಈಜಲು ಹೋಗಿದ್ದಾರೆ. ಕೆರೆಗೆ ಕಲುಷಿತ ನೀರು ಸೇರಿಕೊಂಡಿದ್ದು, ಇಬ್ಬರು ಕೆರೆಗೆ ಇಳಿದು ಈಜಲು ಆರಂಭಿಸುತ್ತಿದ್ದಂತೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಮರು ದಿನ ವಿಷಯ ತಿಳಿದ ಪೊಲೀಸರು ಮೃತದೇಹಗಳನ್ನು ಹೊರತೆಗೆದು ಕಾನೂನು ಪ್ರಕ್ರಿಯೆ ಮುಗಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಹುಳಿಮಾವು ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಮದುವೆ ತಯಾರಿಯಲ್ಲಿದ್ದ ಸೋಲೋಮನ್:
ಮಾನಸಿಕ ಖನ್ನತೆಗೊಳಗಾಗಿದ್ದ ಸೋಲೋಮನ್‌ಗೆ ಆತನ ಪೋಷಕರು ಎರಡು ತಿಂಗಳ ಹಿಂದಷ್ಟೇ ಯುವತಿಯೊಬ್ಬಳ ಜತೆ ನಿಶ್ಚಿತಾರ್ಥ ನೆರವೇರಿಸಿದ್ದರು. ಅಲ್ಲದೆ, ಬದಲಾಗಲಿ ಎಂಬ ಆಸೆಯಿಂದ ಚಿಕ್ಕಕಮ್ಮನಹಳ್ಳಿಯ ಕೆರೆ ಪಕ್ಕದಲ್ಲೇ ಹೊಸದಾಗಿ ಬಾಡಿಗೆ ಮನೆ ಮಾಡಿಕೊಟ್ಟಿದ್ದರು. ಇನ್ನು ಅಭಿಷೇಕ್ ಪೋಷಕರು ಜ್ಞಾನಭಾರತಿಯಲ್ಲಿ ವಾಸವಾಗಿದ್ದು, ಈತ ಮನೆಗೆ ಹೋಗದೆ, ಪಿಜಿಯಲ್ಲಿ ವಾಸವಾಗಿದ್ದ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.