ಉಡುಪಿ: ವೃದ್ಧೆಯೊರ್ವರು ವಸತಿಸಂಕೀರ್ಣದ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಬೆಳಗ್ಗಿನ ಜಾವ ನಡೆದಿದೆ.
ಮೃತ ವೃದ್ಧೆ ಗಂಗಮ್ಮ (70) ಚಿತ್ರದುರ್ಗ ಮೂಲದವರು ಎಂದು ತಿಳಿದು ಬಂದಿದೆ.
ನಗರದ ಬಿಗ್ ಬಜಾರ್ ಸನಿಹದಲ್ಲಿರುವ ವಸತಿಸಂಕೀರ್ಣದಲ್ಲಿಯ ಮಗನ ಮನೆಯಲ್ಲಿ ಕೆಲವು ತಿಂಗಳುಗಳಿಂದ ವಾಸವಾಗಿದ್ದರು. ಕೆಲವು ದಿನಗಳ ಹಿಂದೆ ಕೋವಿಡ್ ಸೋಂಕಿಗೆ ಬಾಧಿತರಾಗಿ ಗುಣಮುಖರಾಗಿದ್ದರು. ಇವರ ಪತಿಯು ಕೋವಿಡ್ ಪಾಸಿಟಿವ್ ಇರುವುದರಿಂದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಪತಿಯ ಅನಾರೋಗ್ಯದ ಕಾರಣ ಮನನೊಂದ ಗಂಗಮ್ಮ ಅವರು ಆತ್ಮಹತ್ಯೆಕೊಂಡಿರ ಬಹುದೆಂದು ಶಂಕಿಸಲಾಗಿದೆ.
ಇದನ್ನೂ ಓದಿ: ಸ್ಥಳೀಯ ಉದ್ಯೋಗಿಗೆ ಹಿಂಸೆ: MRPL ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕ ಡಾ.ಭರತ್ ಶೆಟ್ಟಿ ವೈ
ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಶವಪರೀಕ್ಷೆಗೆ ಶವಸಾಗಿಸಲು ಇಲಾಖೆಗೆ ಸಹಕರಿಸಿದರು. ಘಟನ ಸ್ಥಳದಲ್ಲಿದ್ದು ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು, ಸಿಬ್ಬಂದಿ ಅರುಣ್ ಯು. ಕಾನೂನು ಪ್ರಕ್ರಿಯೆ ನಡೆಸಿದರು. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.