Advertisement

ಬರಿ ಗೈನಲ್ಲಿ ಮ್ಯಾನ್ ಹೋಲ್ ಶುಚಿಗೊಳಿಸುತ್ತಿದ್ದ ಪೌರ ಕಾರ್ಮಿಕ ಸಾವು

07:38 PM Dec 20, 2021 | Team Udayavani |

ಪಿರಿಯಾಪಟ್ಟಣ: ಮಲ ಮೂತ್ರ ಶುಚಿಗೊಳಿಸಲು ಬರಿ ಗೈನಲ್ಲಿ ಮ್ಯಾನ್ ಹೋಲ್ ಒಳಗೆ ಇಳಿದಿದ್ದ ಪೌರ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಪಟ್ಟಣದ ಪೌರ ಕಾರ್ಮಿಕರ ಕಾಲೋನಿಯಲ್ಲಿ ಸೋಮವಾರ ನಡೆದಿದೆ.

Advertisement

ಕಾರ್ಮಿಕ ಮಧು (27) ಮೃತ ಪೌರ ಕಾರ್ಮಿಕ.

ಪಟ್ಟಣದ ಕೃಷ್ಣಾಪುರ ರಸ್ತೆಯ ಬಳಿ ಇರುವ ಅಂಗನವಾಡಿ ಶಿಕ್ಷಕಿ ನಾಗರತ್ನ ಎಂಬುವವರು ಮೂವರು ಪೌರ ಕಾರ್ಮಿಕ ಯುವಕರನ್ನು ಪಟ್ಟಣದ ವಿಜಯೇಂದ್ರ ಎಂಬುವರ ಮನೆಯ ಮಲ ಮೂತ್ರ ಶುಚಿಗೊಳಿಸಲು ಕರೆತಂದಿದ್ದರು. ಕಳೆದ ಮೂರು ದಿನಗಳ ಹಿಂದೆ ವಿಜಯೇಂದ್ರ ಎಂಬುವವರ ಮನೆ ಮುಂದಿನ ಮ್ಯಾನ್ ಹೋಲ್ ಒಳಗೆ ಇಳಿದು ಶುಚಿ ಮಾಡಿದ್ದ ಮಧು ಬಳಿಕ ಮನೆಗೆ ತೆರಳಿದ್ದ. ಇದಾದ ಮರು ದಿನವೇ ಮಧು ತೀವ್ರ ಉಸಿರಾಟದ ತೊಂದರೆಗೆ ಈಡಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಸೋಮವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮಧು ಎಂಬುವ ಪೌರ ಕಾರ್ಮಿಕ ಯುವಕ ಸಾವನ್ನಪ್ಪಿದಾನೆ. ಈ ಸಂಭಂದ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ನಡೆದಿದ್ದು ಹೇಗೆ : ಪುರಸಭೆ ಅಧಿಕಾರಿಗಳ ಗಮನಕ್ಕೆ ಬಾರದಂತೆ ಮಲ ತುಂಬಿದ ಗುಂಡಿಯನ್ನು ಬರಿಗೈಯಲ್ಲಿ ಶುದ್ದಿಗಳಿಸುತ್ತಿದ್ದ ಸ್ಥಳಕ್ಕೆ ಆರೋಗ್ಯ ನಿರೀಕ್ಷಕ ಆದರ್ಶ ಮತ್ತು ಸದಸ್ಯ ಎಚ್.ಕೆ.ಮಹೇಶ್ ಆಗಮಿಸಿ ಸ್ಥಗಿತಗೊಳಿಸಿದರು.

ಪುರಸಭೆ ವ್ಯಾಪ್ತಿಗೆ ಸೇರಿದ ವಿಜೇಂದ್ರ ಎಂಬುವವರ ಖಾಸಗಿ ಮನೆಯಲ್ಲಿ ಯಾವುದೇ ರಕ್ಷಣೆ ಇಲ್ಲದೆ ಪೌರಕಾರ್ಮಿಕರ ಯುವಕರಿಗೆ ಇಲ್ಲಸಲ್ಲದ ಆಮಿಷವೊಡ್ಡಿ ಕತ್ತಲಲ್ಲಿ ಮಲದ ಗುಂಡಿಗೆ ಇಳಿಸಿ ಶುಕ್ರವಾರ ಸಂಜೆ ಕೆಲಸ ಮಾಡಿಸುತ್ತಿದ್ದರು. ತಕ್ಷಣ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಸಪಾಯಿಕರ್ಮಚಾರಿ ಜಾಗೃತ ಸಮಿತಿ ಸದಸ್ಯೆ ಎಚ್.ಕೆ.ಮಹೇಶ್ ಮತ್ತು ಪುರಸಭೆ ಆರೋಗ್ಯ ನಿರೀಕ್ಷಕ ಆದರ್ಶ್ ರವರು ಪುರಸಭೆಯ ಅಧಿಕಾರಿಗಳ ಗಮನಕ್ಕೆ ಬಾರದಂತೆ ಈ ಕೆಲಸ ಮಾಡಿಸುತ್ತಿರುವುದು ಸರಿಯಲ್ಲ ಎಂದು ಮಾಲೀಕರಿಗೆ ತರಾಟೆಗೆ ತೆಗೆದುಕೊಂಡರು.

Advertisement

ಕೆಲಸ ನಿರ್ವಹಿಸುತ್ತಿರುವ ಯುವಕರಿಗೆ ಯಾವುದೇ ರಕ್ಷಣೆ ಇಲ್ಲದೆ ಬರಿಕೈಯಲ್ಲಿ ಕೆಲಸ ಮಾಡುತ್ತಿರುವ ರಾಜೇಶ್. ಮಧು. ವಿಶ್ವ ಎಂಬುವವರಿಂದ ವಿಜೇಂದ್ರ ಎಂಬುವವರಿಗೆ ಸೇರಿದ ಮನೆಯ ಜಾಗದಲ್ಲಿ ಅಂಗನವಾಡಿ ಶಿಕ್ಷಕಿ ಈ ಕೆಲಸವನ್ನು ಯಾರ ಗಮನಕ್ಕೂ ಬಾರದಂತೆ ಮಾಡುತ್ತಿರುವದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು. ಕುಡಿಯುವ ನೀರಿನ ಪೈಪು ಇದೆ ಜಗದಲ್ಲಿ ಹಾದುಹೋಗಿರುವುದರಿಂದ ಈ ಗುಂಡಿಯನ್ನು ಶುದ್ದಿ ಗೊಳಿಸಬೇಕಾಗಿದೆ ಆದ್ದರಿಂದ ಇದನ್ನು ಯುವಕರಿಂದ ಸುದ್ದಿ ಗೊಳಿಸುತ್ತಿರುವ ದ್ದಾಗಿ ಒಪ್ಪಿಕೊಂಡರು.ಈ ರೀತಿಯ ಕೆಲಸವನ್ನು ಮಾಡಿಸುತ್ತಿರುವುದು ಅಮಾನವಿಯ ಕೃತ್ಯವಾಗಿದ್ದು ಇದರ ಬಗ್ಗೆ ಶನಿವಾರ ಕಾನೂನು ಕ್ರಮ ಜರುಗಿಸುವುದಾಗಿ ಆದರ್ಶ ಮತ್ತು ಹೆಚ್.ಕೆ.ಮಹೇಶ್ ತಿಳಿಸಿ ನಡೆಯುತ್ತಿರುವ ಕೆಲಸವನ್ನು ಸ್ಥಗಿತಗೊಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next