Advertisement

ಮಡಿಕೇರಿ: ಪುತ್ರಿಯ ವಿವಾಹ ಮುಗಿದ ಕೆಲವೇ ಹೊತ್ತಿನಲ್ಲಿ ಸಾವನ್ನಪ್ಪಿದ ಅಪ್ಪ 

10:53 PM May 12, 2022 | Team Udayavani |

ಮಡಿಕೇರಿ: ಪುತ್ರಿಯ ವಿವಾಹ ಮುಗಿಸಿ ಪತಿಯ ಮನೆಗೆ ಕಳುಹಿಸಿದ ಕೆಲವು ಹೊತ್ತಿನಲ್ಲೇ ತಂದೆ ಹೃದಯಾಘಾತದಿಂದ ಮೃತಪಟ್ಟ ಘಟನೆ ಸೋಮವಾರ ಪೇಟೆ ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದಿದೆ.

Advertisement

ಕಿಬ್ಬೆಟ್ಟ ಗ್ರಾಮದ ಕೃಷಿಕ ಚಿನ್ನಪ್ಪ (60) ಮೃತ ವ್ಯಕ್ತಿ.  ದ್ವಿತೀಯ ಪುತ್ರಿಯ ವಿವಾಹ ಸಮಾರಂಭವನ್ನು ಮುಗಿಸಿ ವಧೂವರರನ್ನು ಗೋಕಾಕ್‌ಗೆ ಕಳುಹಿಸಿದ ಅನಂತರ ಘಟನೆ ನಡೆದಿದೆ. ತತ್‌ಕ್ಷಣವೇ ಇಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಚಿಕಿತ್ಸೆ ಫ‌ಲಕಾರಿಯಾಗದೆ ಸಾವನ್ನಪ್ಪಿದರು.

Advertisement

Udayavani is now on Telegram. Click here to join our channel and stay updated with the latest news.

Next