ಚಿಕ್ಕಮಗಳೂರು: ಕೋವಿಡ್ ಎಂಬ ಮೂರಕ್ಷರ ಈಗ ಎಂತವರ ಮೈ ಜುಮ್ಮೆನಿಸುತ್ತಿದೆ. ಕೋವಿಡ್ ಆರ್ಭಟಕ್ಕೆ ಅನೇಕ ಮನೆಗಳಲ್ಲಿ ಸೂತಕದ ಛಾಯೆ ಆವರಿಸಿದೆ. ಮನೆಯ ಆಧಾರ ಸ್ತಂಭಗಳನ್ನೇ ಕಿತ್ತುಕೊಂಡು ಕುಟುಂಬವೇ ಬೀದಿಪಾಲಾಗಿವೆ.
ಮಕ್ಕಳ ಆಸರೆಯಲ್ಲಿ ಬೆಳೆಯಬೇಕಾದ ಮಕ್ಕಳನ್ನು ದೂರಮಾಡಿದೆ. ಅನೇಕ ತಂದೆ ತಾಯಿಯರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಇಂತಹ ಧಾರುಣ ಕಥೆಗಳು ನಮ್ಮ ಮಧ್ಯೆ ದಿನನಿತ್ಯ ನಡೆಯುತ್ತಿದೆ.ಇಂತಹ ಮನಕಲಕುವ ಘಟನೆಗೆ ಚಿಕ್ಕಮಗಳೂರು ಸಾಕ್ಷಿಯಾಗಿದೆ.
ಚಿಕ್ಕಮಗಳೂರು ನಗರದ ಬಾರ್ ಲೈನ್ ರಸ್ತೆಯ ಮದೀನ್ ಕುಟುಂಬ ಶೋಕ ಸಾಗರದಲದಲ್ಲಿ ಮುಳುಗಿದೆ. ಒಂದು ವಾರದ ಹಿಂದೇ ಮದೀನ್ ತಾಯಿ ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು ಚಿಕಿತ್ಸೆ ಫಲಕಾರಿಯಾಗದೇ ಉಸಿರು ಚಲ್ಲಿದ್ದಾರೆ.
ತಾಯಿ ಮೃತಪಟ್ಟು ಒಂದು ವಾರ ಕಳೆಯುವಷ್ಟರಲ್ಲಿ ಮದೀನ್ ಸೋಂಕಿಗೆ ಬಲಿಯಾಗಿದ್ದಾರೆ. ಅದು ರಂಜಾನ್ ಹಬ್ಬದ ದಿನವೇ ಎಲ್ಲರೂ ಹಬ್ಬದ ಸಂಭ್ರಮದಲ್ಲಿದ್ದರೇ ಮದೀನ್ ಮನೆಯಲ್ಲಿ ಶೋಕ ಮಡುಗಟ್ಟಿದೆ.
ಇನ್ನೂ ಮದೀನ್ ಪತ್ನಿ 8 ತಿಂಗಳ ಗರ್ಭಿಣಿಯಾಗಿದ್ದು ಒಂದು ವಾರದ ಅಂತರದಲ್ಲಿ ಇತ್ತ ಗಂಡನನ್ನು ಕಳೆದುಕೊಂಡಿದ್ದಾರೆ. ಅತ್ತ ಅತ್ತೆಯನ್ನು ಕಳೆದುಕೊಂಡಿದ್ದು ಇಡೀ ಕುಟುಂಬವೇ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಕೋವಿಡ್ ಎಂಬ ಮಹಾಮಾರಿಯ ಕೆಂಗಣ್ಣಿಗೆ ತುತ್ತಾದ ಅನೇಕ ಕುಟುಂಬಗಳು ಆಧಾರಸ್ತಂಭವನ್ನು ಕಳೆದುಕೊಂದು ಸಂತೋಷ, ನೆಮ್ಮದಿಯನ್ನೇ ಕಳೆದುಕೊಂಡಿವೆ.