Advertisement

ಜೋರಾದ ಗಾಳಿ-ಮಳೆಗೆ ಗೋಡೆ ಕುಸಿದು ಅಜ್ಜಿ-ಮೊಮ್ಮಗ ಸಾವು

01:46 PM May 16, 2021 | Team Udayavani |

ಬೆಳಗಾವಿ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಜೋರಾಗಿ ಬೀಸುತ್ತಿರುವ ಗಾಳಿಗೆ ಗೋಡೆ ಕುಸಿದು ಬಿದ್ದು ಅಜ್ಜಿ ಹಾಗೂ ಮೊಮ್ಮಗ ಮೃತಪಟ್ಟ ಘಟನೆ ಖಾನಾಪೂರ ತಾಲೂಕಿನ ಇಟಗಿ ಗ್ರಾಮದಲ್ಲಿ ರವಿವಾರ ಬೆಳಗ್ಗೆ ಸಂಭವಿಸಿದೆ.

Advertisement

ದೊಡ್ಡವ್ವ ಪಟ್ಟೇದ(60) ಹಾಗೂ ಮೊಮ್ಮಗ ಅಭಿಷೇಕ(3) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ದಂಪತಿಗಳಾದ ಸುರೇಶ ಪಟ್ಟೇದ ಹಾಗೂ ಮಂಗಳಾ ಪಟ್ಟೇದ ಗಾಯಗೊಂಡಿದ್ದಾರೆ.

ಇದನ್ನೂ ಓದಿ : ಕೋವಿಡ್‌ನಿಂದ ಮೃತಪಟ್ಟ ಕುಟುಂಬಕ್ಕೆ ವೈಯಕ್ತಿಕವಾಗಿ 50ಸಾವಿರ ರೂ.ಪರಿಹಾರ:ಸಚಿವ ಬಿ.ಸಿ.ಪಾಟೀಲ್

ತೌಕ್ತೆ ಚಂಡಮಾರುತದ ಮಳೆ ಬಿರುಗಾಳಿಯ ಹೊಡೆತ ಜಿಲ್ಲೆಗೂ ವ್ಯಾಪಿಸಿದ್ದು, ಮನೆಯಲ್ಕಿ ಇದ್ದಾಗ ಗೋಡೆ ಕುಸಿದು ಬಿದ್ದಿದ್ದು, ಅಜ್ಜಿ ಹಾಗೂ ಮೊಮ್ಮಗ ಅಸುನೀಗಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ನಂದಗಡ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next