Advertisement

ಆಲೂರಿನಲ್ಲಿ ಧರೆಗಳಿದ ಯಮರಾಯ; ಜಾಗೃತಿ

08:08 PM Feb 14, 2021 | Team Udayavani |

ಆಲೂರು: ಎಲ್ಲರೂ ಎಂದಿನಂತೆ ತಮ್ಮ ಕೆಲಸದ ಅವಸರದಲ್ಲಿ ಇದ್ದರು. ಹೀಗೆ ಗಡಿಬಿಡಿಯಿಂದ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಪಟ್ಟಣದ ಪೊಲೀಸ್‌ ಠಾಣೆ, ಬಸ್‌ ನಿಲ್ದಾಣ ಎದುರು ಎಮ್ಮೆಯೊಂದಿಗೆ ನಿಂತಿದ್ದ ಯಮನ ವೇಷಧಾರಿಯನ್ನು ಕಂಡು ಅಚ್ಚರಿಗೊಂಡರು. ಯಮನೇ ಧರೆಗೆ ಇಳಿದುಬಂದಂತೆ ವೇಷ ಭೂಷಣದ ತೊಟ್ಟಿದ್ದ ವ್ಯಕ್ತಿಯನ್ನು ಕುತೂಹಲದಿಂದ ವೀಕ್ಷಿಸಿದರು.

Advertisement

ಹೌದು, ರಸ್ತೆ ಸುರಕ್ಷತಾ ಸಪ್ತಾಹದ ಅಂಗ ವಾಗಿ ಪಟ್ಟಣ ಠಾಣೆಯ ಪೊಲೀಸರು ಶನಿ ವಾರ ಹೆಲ್ಮೆಟ್‌ ಹಾಕದೇ ವಾಹನ ಚಲಾಯಿ ಸುವವರಿಗೆ ದಂಡ ಹಾಕುವುದನ್ನು ಬಿಟ್ಟು, ಯಮನ ವೇಷಧಾರಿ ಮೂಲಕ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು. ಪಟ್ಟಣದ ಹೃದಯ ಭಾಗವಾದ ಪೊಲೀಸ್‌ ಠಾಣೆ, ಬಸ್‌ ನಿಲ್ದಾಣದ ಎದುರಿನ ರಸ್ತೆಯಲ್ಲಿ ವ್ಯಕ್ತಿಯೊಬ್ಬರಿಗೆ ಯಮನ ವೇಷ ಹಾಕಿಸಿ ಬೈಕ್‌ ಚಾಲಕರಿಗೆ ಸಂಚಾರ ನಿಯಮ ಪಾಲಿಸುವಂತೆ ಜಾಗೃತಿ ಮೂಡಿಸಿದರು.

ಹಾಸನದ ವಿದ್ಯುತ್‌ ಗುತ್ತಿಗೆದಾರ ಶಿವಣ್ಣ ಯಮಧರ್ಮರಾಯನ ವೇಷ ಧರಿಸಿದ್ದು, ವಿಶೇಷವಾಗಿ ಗಮನ ಸೆಳೆದರು. ಹೆಲ್ಮೆಟ್‌ ಹಾಕದೇ ಇರುವ ಸವಾರರ ಕುತ್ತಿಗೆಗೆ ಹಗ್ಗ ಹಾಕಿ “ಹೆಲ್ಮೇಟ್‌ ಧರಿಸುವೆಯೋ ಇಲ್ಲವೇ ನಾನು ನಿನ್ನನ್ನು ಯಮ ಲೋಕಕ್ಕೆ ಕರೆ ದೊಯ್ಯಲೇ’ ಎಂದು ಏರುಧ್ವನಿಯಲ್ಲಿ ಸಂಭಾ ಷಣೆ ಮೂಲಕ ಜಾಗೃತಿ ಮೂಡಿಸಿದರು. ಮಾತು ಕೇಳದವರಿಗೆ ವಾರ್ನಿಂಗ್‌ ಕೊಡು ತ್ತಿದ್ದರು. ಆಲೂರು ಪೊಲೀಸರಿಂದ ನಡೆದ ಈ ಅಭಿಯಾನ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

ಈ ವೇಳೆ ಸರ್ಕಲ್‌ ಇನ್ಸ್‌ಪೆಕ್ಟರ್‌ ವೆಂಕಟೇಶ್‌ ಮಾತನಾಡಿ, ವಾಹನ ಸವಾರರು ರಸ್ತೆ ನಿಯಮ ಕಡ್ಡಾಯವಾಗಿ ಪಾಲನೆ ಮಾಡ ಬೇಕು. ಹೆಲ್ಮೆಟ್‌ ಇಲ್ಲದೆಯೇ, ಹಲವು ಸಾವು- ನೋವು ಸಂಭವಿಸಿವೆ. ಸೀಟ್‌ ಬೆಲ್ಟ್  ಧರಿಸದೇ ವಾಹನ ಚಲಾಯಿಸಿದ್ದಕ್ಕೆ ಹಲವು ಅಪಘಾತ ಗಳು ನಡೆದಿವೆ. ಆದ್ದರಿಂದ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು, ನಿಯಮ ಪಾಲನೆ ಮಾಡದಿದ್ದರೆ ಹೆಚ್ಚು ದಂಡ ಭರಿಸಬೇಕೆಂದು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next