Advertisement

ರಸ್ತೆ ನಿಯಮ ಉಲ್ಲಂಘನೆ: ಬೆಂಗಳೂರಲ್ಲೇ 30 ಲಕ್ಷ ರೂ. ಸಂಗ್ರಹ!

09:22 AM Sep 06, 2019 | mahesh |

ಬೆಂಗಳೂರು: ಸಂಚಾರ ನಿಯಮ ಕುರಿತ ಹೊಸ ಕಾಯ್ದೆ ಜಾರಿಗೆ ಬಂದ ಬಳಿಕ ದೇಶಾದ್ಯಂತ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತಿದ್ದು, ರಾಜಧಾನಿ ಬೆಂಗಳೂರಿನಲ್ಲೂ ಈ ಪ್ರಕ್ರಿಯೆ ನಡೆದಿದೆ. ಅದರಂತೆ ಸೆ.4ರ ಬಳಿಕ ಕೇವಲ 1.5 ದಿನಗಳಲ್ಲಿ ಪೊಲೀಸರು ಭರ್ಜರಿ 30,11,400 ರೂ. ದಂಡ ಸಂಗ್ರಹಿಸಿದ್ದಾರೆ.

Advertisement

ಈ ದಂಡದಲ್ಲಿ ಹೆಲ್ಮೆಟ್‌ ರಹಿತ ಚಾಲನೆಗೆಂದು ಅತಿ ಹೆಚ್ಚಿನ ದಂಡ ವಿಧಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಸೆ.4ರಿಂದ ಸೆ.5ರವರೆಗೆ 1518 ವಾಹನ ಸವಾರರ ವಿರುದ್ಧ ಕೇಸು ದಾಖಲಾಗಿದೆ. 15,18,000 ರೂ. ದಂಡ ಹೆಲ್ಮೆಟ್‌ ರಹಿತ ಚಾಲನೆಯಿಂದ ಸಂಗ್ರಹಿಸಲಾಗಿದೆ. ಇನ್ನು ಹಿಂಬದಿ ಸವಾರರು ಹೆಲ್ಮೆಟ್‌ ಹಾಕದ್ದಕ್ಕೆ 1121 ಮಂದಿ ವಿರುದ್ಧ ಕೇಸು ಹಾಕಲಾಗಿದ್ದು 11,21,000 ರೂ. ದಂಡ ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next