Advertisement

ಕಾರ್ಕಳದಲ್ಲಿ ಟ್ರಾಫಿಕ್‌ ನಿಯಮ ಉಲ್ಲಂಘನೆ: ಎಸ್‌ಪಿಗೆ ದೂರು

10:20 PM May 31, 2019 | Sriram |

ಉಡುಪಿ: ಕಾರ್ಕಳ ನಗರ ಭಾಗದಲ್ಲಿ ಮಾರುಕಟ್ಟೆ ಬಳಿಯ ರಸ್ತೆಯ ಮೇಲೆಯೇ ಆಟೋ ರಿಕ್ಷಾ ಪಾರ್ಕಿಂಗ್‌ ಮಾಡಲಾಗುತ್ತಿದೆ. ಹಾಗೆಯೇ ಮೂರು ಮಾರ್ಗ, ಅನಂತಶಯನ ಮೊದಲಾದೆಡೆ ರಿಕ್ಷಾ ಪಾರ್ಕಿಂಗ್‌ ಇಲ್ಲದಿದ್ದರೂ ಪಾರ್ಕಿಂಗ್‌ ಮಾಡಲಾಗುತ್ತಿದೆ. ಇದರಿಂದ ನಡೆದಾಡಲು ತೊಂದರೆಯಾಗುತ್ತಿದೆ ಎಂಬ ದೂರುಗಳು ಜಿಲ್ಲಾ ಎಸ್‌ಪಿ ನಿಶಾ ಜೇಮ್ಸ್‌ ಅವರು ನಡೆಸಿದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಕೇಳಿಬಂತು.

Advertisement

ಶುಕ್ರವಾರ ಎಸ್‌ಪಿ ಅವರು ನಡೆಸಿದ ಫೋನ್‌ ಇನ್‌ನಲ್ಲಿ ಕಾರ್ಕಳ ಭಾಗದಿಂದ ಅತ್ಯಧಿಕ ದೂರುಗಳು ಬಂದವು. ಕಾರ್ಕಳದಲ್ಲಿ ರೂಟ್ ಬಸ್ಸುಗಳು ಖಾಸಗಿ ಕಾರ್ಯಕ್ರಮಗಳಿಗೆ ಸಂಚರಿ ಸುತ್ತವೆ. ಕಾರ್ಕಳ ಪೇಟೆ ಯಲ್ಲಿ ಶಾಲಾ ಬಸ್‌ವೊಂದು ಸಾರ್ವಜನಿಕ ಶುಭ ಸಮಾರಂಭ ಗಳಿಗೆ ಟ್ರಿಪ್‌ ಮಾಡುತ್ತಿವೆ. ಇದರಿಂದ ತೊಂದರೆ ಯುಂಟಾಗುತ್ತಿದೆ ಎಂಬುದರೊಂದಿಗೆ ಟ್ರಾಫಿಕ್‌ ವಿಚಾರಕ್ಕೆ ಸಂಬಂಧಿಸಿ, ಅನಧಿಕೃತ ವಾಹನ ಪಾರ್ಕಿಂಗ್‌ ಬಗ್ಗೆ ಫೋನ್‌ ಇನ್‌ನಲ್ಲಿ ಅಧಿಕ ಕರೆಗಳು ದಾಖಲಾದವು. ಈ ವಿಚಾರದ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಅವರು ಈ ವೇಳೆ ತಿಳಿಸಿದರು.

ಹೆಲ್ಮೆಟ್ ಧರಿಸದೆ ಸಂಚಾರ
ಹೆಬ್ರಿ ಪೇಟೆಯಲ್ಲಿ ಹಲವಾರು ಮಂದಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದಾರೆ. ಬಸ್‌ಗಳು ಕೂಡ ತುಂಬಾ ವೇಗವಾಗಿ ಸಂಚರಿಸುತ್ತಿವೆ ಈ ಬಗ್ಗೆ ಗಮನಹರಿಸಬೇಕು ಎಂದು ನಾಗರಿಕರೊಬ್ಬರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿಯವರು ಈ ಬಗ್ಗೆ ಪರಿಶೀಲನೆ ನಡೆಸಿ ಈ ಭಾಗದಲ್ಲಿ ಪೊಲೀಸ್‌ ಸಿಬಂದಿ ನಿಯೋಜಿಸಲು ಯತ್ನಿಸಲಾಗುವುದು ಎಂದರು.

ದುಬಾರಿ ಆಟೋ ದರ
ಉಡುಪಿ ನಗರ ಪ್ರದೇಶದಲ್ಲಿ ಆಟೋ ಚಾಲಕರು ನಿಗದಿತ ದರಕ್ಕಿಂತ ಹೆಚ್ಚಿನ ಬಾಡಿಗೆ ಹೆಚ್ಚು ವಸೂಲಿ ಮಾಡುತ್ತಿದ್ದಾರೆ. ಮೀಟರ್‌ ಕೂಡ ಅಳವಡಿಸುತ್ತಿಲ್ಲ ಎಂದು ನಾಗರಿಕರೊಬ್ಬರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿಯವರು ಈ ಬಗ್ಗೆ ಪ್ರಯಾಣಿಕರು ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಆಟೋ ಚಾಲಕರ ದರ ಪರಿಶೀಲನೆಯ ಬಗ್ಗೆಯೂ ಗಮನಹರಿಸಲಾಗುವುದು ಎಂದರು.

ಉಡುಪಿ ಡಿವೈಎಸ್‌ಪಿ ಜೈಶಂಕರ್‌, ಉಡುಪಿ ಸರ್ಕಲ್ ಇನ್‌ಸ್ಪೆಕ್ಟರ್‌ ಮಂಜುನಾಥ್‌, ಟ್ರಾಫಿಕ್‌ ಎಸ್‌ಐ ನಿತ್ಯಾನಂದ ಗೌಡ, ಕುಂದಾಪುರ ಡಿವೈಎಸ್‌ಪಿ ದಿನೇಶ್‌, ಕಾಪು ಸರ್ಕಲ್ ಇನ್‌ಸ್ಪೆಕ್ಟರ್‌ ಶಾಂತಾರಾಮ್‌ ಉಪಸ್ಥಿತರಿದ್ದರು.

Advertisement

ಗಂಗೊಳ್ಳಿಯಲ್ಲಿ ಬೆಳಗ್ಗಿನಿಂದ ರಾತ್ರಿತನಕ ಮರಳುಗಾರಿಕೆ ಅಕ್ರಮವಾಗಿ ನಡೆಯುತ್ತಿದೆ. ಈ ಬಗ್ಗೆ ಗಮನಹರಿಸುವಂತೆ ನಾಗರಿಕ‌ರೊಬ್ಬರು ತಿಳಿಸಿದರು. ಈ ಬಗ್ಗೆ ಗಮನಹರಿಸಲಾಗುವುದು ಎಂದರು. ಮರಳುಗಾರಿಕೆ ಸಂಬಂಧಿಸಿದಂತೆ ಮಾರ್ಚ್‌ ನಲ್ಲಿ 17, ಎಪ್ರಿಲ್ನಲ್ಲಿ 8 ಹಾಗೂ ಮೇ ತಿಂಗಳಲ್ಲಿ 19 ಸಹಿತ ಒಟ್ಟು 44 ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿವೆ ಎಂದು ಎಸ್‌ಪಿಯವರು ತಿಳಿಸಿದರು.

ಮರಳುಗಾರಿಕೆ ಅಕ್ರಮ

ಗಂಗೊಳ್ಳಿಯಲ್ಲಿ ಬೆಳಗ್ಗಿನಿಂದ ರಾತ್ರಿತನಕ ಮರಳುಗಾರಿಕೆ ಅಕ್ರಮವಾಗಿ ನಡೆಯುತ್ತಿದೆ. ಈ ಬಗ್ಗೆ ಗಮನಹರಿಸುವಂತೆ ನಾಗರಿಕ‌ರೊಬ್ಬರು ತಿಳಿಸಿದರು. ಈ ಬಗ್ಗೆ ಗಮನಹರಿಸಲಾಗುವುದು ಎಂದರು. ಮರಳುಗಾರಿಕೆ ಸಂಬಂಧಿಸಿದಂತೆ ಮಾರ್ಚ್‌ ನಲ್ಲಿ 17, ಎಪ್ರಿಲ್‌ನಲ್ಲಿ 8 ಹಾಗೂ ಮೇ ತಿಂಗಳಲ್ಲಿ 19 ಸಹಿತ ಒಟ್ಟು 44 ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿವೆ ಎಂದು ಎಸ್‌ಪಿಯವರು ತಿಳಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next