Advertisement

ಸಂಚಾರ ಉಲ್ಲಂಘನೆ ಪ್ರಕರಣಗಳು: 2.33 ಕೋಟಿ ಕೇಸ್‌, 473 ಕೋಟಿ ರೂ. ದಂಡ 

01:25 PM Jul 01, 2023 | Team Udayavani |

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಸಂಚಾರ ವಿಭಾಗವು ಡಿಜಿಟಲ್‌ ತಂತ್ರಜ್ಞಾನದ ಮೊರೆ ಹೋದ ಬೆನ್ನಲ್ಲೇ ಕಳೆದ ಎರಡೂವರೆ ವರ್ಷಗಳಲ್ಲಿ 2.33 ಕೋಟಿ ಸಂಚಾರ ಉಲ್ಲಂಘನೆ ಪ್ರಕರಣಗಳು ದಾಖಲಾಗಿ, 473 ಕೋಟಿ ರೂ. ದಂಡ ಸಂಗ್ರಹವಾಗಿದೆ.

Advertisement

ಹೌದು, ಸಿಲಿಕಾನ್‌ ಸಿಟಿಯಲ್ಲಿ ಸಂಚಾರ ದಟ್ಟಣೆ ನಿರ್ವಹಣೆ ಸಮಸ್ಯೆಯ ಜತೆಗೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಕ್ಕೆ ಕಡಿವಾಣ ಹಾಕುವುದೇ ಪೊಲೀಸ್‌ ವಿಭಾಗಕ್ಕೆ ದೊಡ್ಡ ತಲೆನೋವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರು ಸಂಚಾರ ಪೊಲೀಸ್‌ ವಿಭಾಗವು ಆಧುನಿಕ ತಂತ್ರಜ್ಞಾನದ ಮೊರೆ ಹೋಗಿದ್ದರು. ಪರಿಣಾಮ 2021ರಿಂದ 2023ರ ವರೆಗೆ ಸಂಚಾರ ನಿಯಮ ಉಲ್ಲಂ ಸಿದ ಬರೋಬ್ಬರಿ 2.33 ಕೋಟಿ ಪ್ರಕರಣಗಳು ದಾಖಲಾದರೆ, 473 ದಂಡ ಸಂಗ್ರಹಿಸಲಾಗಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಕಡಿಮೆ ಅವಧಿಯಲ್ಲಿ ಅತ್ಯಧಿಕ ಕೇಸ್‌ ಹಾಗೂ ದಂಡದ ಪ್ರಮಾಣ ಏರಿಕೆಯಾಗಿದೆ.

ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳ ಸಂಖ್ಯೆ ಸೆರೆ ಹಿಡಿಯುವ ಕ್ಯಾಮೆರಾಗಳು, ಕ್ಷಣ ಮಾತ್ರದಲ್ಲಿ ಕಂಟ್ರೋಲ್‌ ರೂಂಗೆ ಮಾಹಿತಿ ರವಾನಿಸುತ್ತವೆ. ನಿಯಮ ಉಲ್ಲಂಘನೆಗೆ ಅನುಗುಣವಾಗಿ ಸ್ವಯಂಚಾಲಿತವಾಗಿ ದಂಡ ಬೀಳುತ್ತದೆ. ಹೀಗಾಗಿ ಪೊಲೀಸರಿಗೂ ವಾಹನಗಳ ಮೇಲೆ ಕಣ್ಣಿಡುವ ಹೊರೆ ತಪ್ಪಿದೆ.

ಯಾವೆಲ್ಲಾ ಆಧುನಿಕ ತಂತ್ರಜ್ಞಾನ?: ಸುರಕ್ಷತೆ, ವಾಹನ ಸಂಖ್ಯೆ ಪರಿಶೀಲಿಸುವ, ವಾಹನ ಸಾಮರ್ಥ್ಯ ಪರಿಶೀಲಿಸುವ ಆಧುನಿಕ ಕ್ಯಾಮೆರಾ ಅಳವಡಿಸಲಾಗಿದೆ. ಸಂಚಾರ ಪೊಲೀಸರಿಗೆ ಬಾಡಿ ವೋರ್ನ್ ಕ್ಯಾಮೆರಾ, ನಿಯಮ ಉಲ್ಲಂಘಿಸುವ ವಾಹನಗಳ ಸಂಖ್ಯೆ ಮೊಬೈಲ್‌ನಲ್ಲೇ ಸೆರೆಹಿಡಿದು ಕಳುಹಿಸುವ ವ್ಯವಸ್ಥೆ, ಬೆಂಗಳೂರಿನ 160ಕ್ಕೂ ಹೆಚ್ಚಿನ ಸಿಗ್ನಲ್‌ಗ‌ಳಲ್ಲಿ ಕೃತಕ ಬುದ್ದಿಮತ್ತೆ ಸಂಚಾರ ನಿಯಂ ತ್ರಣ ವ್ಯವಸ್ಥೆ ಅಳವಡಿಸಲು ಕ್ರಮ ಕೈಗೊಂಡಿದೆ. ವೇಗಮಿತಿ ಪರಿಶೀಲನೆ ಯಂತ್ರ, ಡ್ರಂಕ್‌ ಆ್ಯಂಡ್‌ ಡ್ರೈವ್‌ ತಪಾಸಣೆಗೆ ಆಧುನಿಕ ಆಲ್ಕೋಮೀಟರ್‌ ಬಳಕೆ, ಅಲ್ಲಲ್ಲಿ ವಾಹನ ತಪಾಸಣೆ ನಡೆಸಿ ಡಿಜಿಟಲ್‌ ರೂಪದಲ್ಲಿ ದಂಡ ವಿಧಿಸುವುದು ಸೇರಿದಂತೆ ಇನ್ನಿತರ ಹೊಸ ತಂತ್ರಜ್ಞಾನ ಅಳವಡಿಸಲಾಗಿದೆ. ಅಡ್ಡಾದಿಡ್ಡಿ ವಾಹನ ಚಾಲನೆ, ಸಂಚಾರ ದಟ್ಟಣೆಗೆ ಕಡಿವಾಣ ಹಾಕಲು “ಲೋಕಲ್‌ ಏರಿಯಾ ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌’ ವ್ಯವಸ್ಥೆ ಇದೆ.

ಇನ್ನು ಶೀಘ್ರದಲ್ಲೇ ಡ್ರೋನ್‌ ಕ್ಯಾಮೆರಾ ಬಳಸಲು ಸಂಚಾರ ಪೊಲೀಸರು ಮುಂದಾಗಿದ್ದಾರೆ. ಇಂತಹ ಹೈಟೆಕ್‌ ತಂತ್ರಜ್ಞಾನದಿಂದ ಕೇಸ್‌ಗಳ ಸಂಖ್ಯೆ ಗಣನೀಯ ಏರಿಕೆಯಾಗಿದೆ. ಈ ಹಿಂದೆ ಸಂಚಾರ ಪೊಲೀಸರು ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ರಸ್ತೆಯಲ್ಲಿ ಸಂಚಾರ ನಿಯಮ ಉಲ್ಲಂ ಸುವ ವಾಹನಗಳ ನಂಬರ್‌ಗಳನ್ನು ಪುಸ್ತಕದಲ್ಲಿ ಬರೆದು ದಂಡ ವಿಧಿಸುತ್ತಿದ್ದರು. ಇದು ಪೊಲೀಸರಿಗೂ ಕಿರಿ-ಕಿರಿ ಉಂಟಾಗುತ್ತಿತ್ತು.

Advertisement

5 ತಿಂಗಳಲ್ಲಿ 154 ಕೋಟಿ ದಂಡ ಸಂಗ್ರಹ : ರಾಜ್ಯ ರಾಜಧಾನಿ ದೇಶದಲ್ಲೇ 2ನೇ ಅತೀ ಹೆಚ್ಚಿನ ವಾಹನ ಹೊಂದಿರುವ ನಗರವಾಗಿದೆ. 1.9 ಕೋಟಿ ವಾಹನಗಳು ಬೆಂಗಳೂರಿನಲ್ಲಿವೆ. ಈ ಪೈಕಿ 73.32 ಲಕ್ಷ ಬೈಕ್‌ಗಳಿದ್ದರೆ, 22.33 ಲಕ್ಷ ಕಾರುಗಳಿವೆ. ಪ್ರತಿದಿನ 65 ಲಕ್ಷಕ್ಕೂ ಹೆಚ್ಚಿನ ವಾಹನಗಳು ರಸ್ತೆಗಿಳಿಯುತ್ತಿವೆ. 2021ರಲ್ಲಿ ದಾಖಲಾಗಿದ್ದ 93 ಲಕ್ಷ ಸಂಚಾರ ನಿಯಮ ಉಲ್ಲಂಘನೆ ಕೇಸ್‌, 2022ಕ್ಕೆ 1.4 ಕೋಟಿಗೆ ಏರಿಕೆಯಾಗಿದೆ.

ಇನ್ನು 2023 ಮೇ ತಿಂಗಳವರೆಗೆ 35.73 ಲಕ್ಷ ಪ್ರಕರಣ ದಾಖಲಾಗಿವೆ. 2021ರಲ್ಲಿ 140 ಕೋಟಿ ರೂ., 2022ರಲ್ಲಿ 179 ಕೋಟಿ ರೂ. ಹಾಗೂ 2023ರಲ್ಲಿ 5 ತಿಂಗಳಲ್ಲಿ ಬರೋಬ್ಬರಿ 154 ಕೋಟಿ ರೂ. ದಂಡ ಟ್ರಾಫಿಕ್‌ ಫೋಲಿಸ್‌ ಖಜಾನೆ ಸೇರಿದೆ.

2021-2023ರ ವರೆಗೆ ನಿಯಮ ಉಲ್ಲಂಘಿಸಿದ ಅಂಕಿ-ಅಂಶ: 

1,00,45,885 ಹೆಲ್ಮೆಟ್‌ ಧರಿಸದೆ ಚಾಲನೆ 52,60,665

ಹಿಂಬದಿ ಸವಾರ ಹೆಲ್ಮೆಟ್‌ ಧರಿಸದಿರುವುದು 3,16,636

ಮೊಬೈಲ್‌ ಬಳಸಿ ವಾಹನ ಚಾಲನೆ 24,27,310

ನಿಷೇಧಿತ ಪ್ರದೇಶದಲ್ಲಿ ವಾಹನ ನಿಲುಗಡೆ 16,57,531

ಸಿಗ್ನಲ್‌ ಜಂಪ್‌ 6,05,312 ಸೇಫ್ಟಿ ಬೆಲ್ಟ್ ಧರಿಸದಿರುವುದು

8,81074 ತಪ್ಪು ನೋಂದಣಿ ಸಂಖ್ಯೆ ಅಳವಡಿಕೆ

ಸಾರ್ವಜನಿಕರ ಸುಗಮ ಸಂಚಾರಕ್ಕಾಗಿಯೇ ಸಂಚಾರ ನಿಯಮ ರೂಪಿಸಲಾಗಿದೆ. ಇದನ್ನು ಪ್ರತಿಯೊಬ್ಬರೂ ಪಾಲಿಸಬೇಕು. ತಂತ್ರಜ್ಞಾನ ಬಳಕೆಯಿಂದ ದಾಖಲಾದ ಕೇಸ್‌, ಸಂಗ್ರಹಿಸಿದ ದಂಡವೂ ಹೆಚ್ಚಿದೆ. ● ಸಚಿನ್‌ ಘೋರ್ಪಡೆ, ಡಿಸಿಪಿ, ಉತ್ತರ ಸಂಚಾರ ವಿಭಾಗ

-ಅವಿನಾಶ್‌ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next