Advertisement

ಮಠಪತಿ ಹಳ್ಳದ ನೀರಿನಿಂದ ಸಂಚಾರಕ್ಕೆ ಸಂಚಕಾರ

12:43 PM Jan 25, 2020 | Suhan S |

ಲಕ್ಷ್ಮೇಶ್ವರ: ಬಾಲೇಹೊಸೂರ-ಇಚ್ಚಂಗಿ ರಸ್ತೆ ಮಧ್ಯ ಹರಿದಿರುವ ಮಠಪತಿ ಹಳ್ಳದ ನೀರು ಕಳೆದ ನಾಲ್ಕೈದು ತಿಂಗಳಿಂದ ನಿಂತು ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ.

Advertisement

ಬಾಲೇಹೊಸೂರಿನಿಂದ ಇಚ್ಚಂಗಿ ಮಾರ್ಗವಾಗಿ ಹಾವೇರಿ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಜಿಲ್ಲಾ ಪಂಚಾಯತಿಯ ಈ ರಸ್ತೆಯಮೇಲೆ ಕಳೆದ ನಾಲ್ಕೈದು ತಿಂಗಳಿಂದಲೂ ನೀರು ನಿಂತು ಈ ಭಾಗದ ಜನರು, ರೈತರು, ವಾಹನ ಸವಾರರು, ಜಾನುವಾರುಗಳು ಪರದಾಡುತ್ತಿದ್ದಾರೆ. ಇದಕ್ಕೆ ಕಾರಣ ಪ್ರಸಕ್ತ ವರ್ಷ ಮುಂಗಾರಿನಲ್ಲಿ ಸುರಿದ ವಿಪರೀತ ಮಳೆಯಿಂದಾಗಿ ರಸ್ತೆ ಮೇಲೆ ಹರಿದಿರುವ ಹಳ್ಳ ಜವುಳು ಬಿದ್ದಿದೆ. ಅಲ್ಲದೇ ಇದೇ ಹಳ್ಳಕ್ಕೆ ರಸ್ತೆ ಸಮೀಪದ ಹಳ್ಳಕ್ಕೆ ಬಾಂದಾರ ನಿರ್ಮಿಸಲಾಗಿದೆ.

ಹಳ್ಳದ ಮೇಲ್ಮಟ್ಟದಿಂದ ಹರಿದು ಬರುವ ನೀರನ್ನು ಬಾಂದಾರ ತಡೆ ಹಿಡಿಯುವುದರಿಂದ ರಸ್ತೆ ಮೇಲೆಯೇ ನೀರು ನಿಲ್ಲುತ್ತಿದೆ. ಬಾಂದಾರ ಹಳೆಯದಾಗಿದ್ದರೂ ಕಳೆದ ಎಳೆಂಟು ವರ್ಷಗಳಿಂದ ಮಳೆಯ ಪ್ರಮಾಣ ಅಷ್ಟಕ್ಕಷ್ಟೇ ಇದ್ದುದರಿಂದ ಈ ಸಮಸ್ಯೆ ಇರಲಿಲ್ಲ. ಈಗ ಈ ರಸ್ತೆಯ ಮೇಲೆ ಬಾಂದಾರದ ಹಿನ್ನೀರು ಮತ್ತು ಹಳ್ಳದ ನೀರು ನಿಲ್ಲುವುದರಿಂದ ಸಮಸ್ಯೆ ಉಲ್ಬಣಗೊಂಡಿದೆ. ಅಲ್ಲದೇ ರಸ್ತೆ ಮೇಲೆ ನೀರು ನಿಂತು ತಗ್ಗು ಗುಂಡಿಗಳು ನಿರ್ಮಾಣವಾಗಿತ್ತು. ನಿತ್ಯ ಈ ಭಾಗದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ.

ಬಾಲೆಹೊಸೂರ- ಇಚ್ಚಂಗಿ ರಸ್ತೆ ಮೇಲೆ ನಿಲ್ಲುವ ಹಳ್ಳದ ನೀರಿನಿಂದಾಗುವ ಸಮಸ್ಯೆ ಪರಿಹಾರ ಕಂಡು ಕೊಳ್ಳಲು ಪ್ರಯತ್ನಿಸಲಾಗುವುದು ಮತ್ತು ಶಾಸ್ವತ ಪರಿಹಾರಕ್ಕಾಗಿ ಕಿರು ಸೇತುವೆ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು. ಅಲ್ಲದೇ ಶಾಸಕರು, ಜಿಪಂ ಸದಸ್ಯರು ಮತ್ತು ತಾಪಂ ಸದಸ್ಯರ ಗಮನಕ್ಕೆ ತಂದು ಅವರ ಅನುದಾನಕ್ಕೆ ಕೋರಲಾಗುದು.ನಾಗರತ್ನಾ ಟಿ.ಎಂ., ಜಿಪಂ ಎಇಇ

Advertisement

Udayavani is now on Telegram. Click here to join our channel and stay updated with the latest news.

Next