Advertisement

ಲೈಪರವಾನಿಗೆಯಲ್ಲಿ ಲೆಕ್ಕವಿದ್ದರೂ ಸಂಚಾರದ ವೇಳೆ ನಗಣ್ಯ! ನಿಯಮ ಉಲ್ಲಂಘಿಸಿದರೆ ದಂಡ

01:55 AM Jan 12, 2021 | Team Udayavani |

ಪುತ್ತೂರು: ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಾಟ ಸಾಮರ್ಥ್ಯ ಎಷ್ಟು ಎಂಬುದು ಅದರ ಪರವಾನಿಗೆಯಲ್ಲಿ ನಮೂದಾಗಿದ್ದರೂ ಸಂಚಾರದ ವೇಳೆ ಅದು ಲೆಕ್ಕಕ್ಕೆ ಸಿಗುತ್ತಿಲ್ಲ.

Advertisement

ನಿಗದಿಗಿಂತ ಹೆಚ್ಚು ಜನರನ್ನು ಹೇರಿಕೊಂಡು ಹೋಗುವ ವಾಹನಗಳ ವಿರುದ್ಧ ಕಾನೂನು ಕ್ರಮಕ್ಕೆ ಸಾರಿಗೆ ಇಲಾಖೆಗೆ ಅವಕಾಶವಿದ್ದರೂ ಅದರ ಅನುಷ್ಠಾನವೂ ಸಮರ್ಪಕವಾಗಿ ಆಗಿಲ್ಲ.

ಸಾಮರ್ಥ್ಯ 50;ಸಂಚಾರ 89 ! :

ದುಪ್ಪಟ್ಟು ಸಂಖ್ಯೆಯಲ್ಲಿ ಜನರನ್ನು ಹೇರಿದ್ದ ದಿಬ್ಬಣ ಬಸ್‌ ಪಾಣತ್ತೂರಿನಲ್ಲಿ ಅಪಘಾತಕ್ಕೀಡಾದ ಬೆನ್ನಲ್ಲೇ ಈ ಅಂಶ ಬೆಳಕಿಗೆ ಬಂದಿದೆ. ಮಂಗಳೂರು ಆರ್‌ಟಿಒದಲ್ಲಿ ನೋಂದಣಿ ಆಗಿರುವ ಈ ಖಾಸಗಿ ಬಸ್‌ನ ಆಸನ ಸಾಮರ್ಥ್ಯ 48+2 ಆಗಿದ್ದರೂ 89 ಮಂದಿಯನ್ನು ತುಂಬಲಾಗಿತ್ತು. ಇದು ಮೋಟಾರು ಕಾಯಿದೆಯ ಸಂಪೂರ್ಣ ಉಲ್ಲಂಘನೆಯಾಗಿದ್ದು, ಕೇರಳ ವ್ಯಾಪ್ತಿಯ ಸಾರಿಗೆ ಇಲಾಖೆ ತನಿಖೆ ಕೈಗೆತ್ತಿಕೊಂಡಿದೆ.

ಆರ್‌ಟಿಒ, ಪೊಲೀಸ್‌ ಕಣ್ಣು :

Advertisement

ಲೆಕ್ಕಕ್ಕಿಂತ ಹೆಚ್ಚು ಜನರನ್ನು ಸಾಗಿಸುವ ಹಲವು ಪ್ರಕರಣಗಳನ್ನು ಸಾರಿಗೆ ಇಲಾಖೆ ಪತ್ತೆಹಚ್ಚಿ ದಂಡ ವಿಧಿಸಿದೆ. ಆದರೆ ಕೊರೊನಾ ಅನಂತರ ವಾಹನಗಳ ಓಡಾಟ ಕಡಿಮೆಯಾದ ಕಾರಣ ತಪಾಸಣೆ ಕೂಡ ಕಡಿಮೆಯಾಗಿತ್ತು. ಪಾಣತ್ತೂರು ಘಟನೆಯ ಬಳಿಕ ಎಚ್ಚೆತ್ತಿರುವ ಆರ್‌ಟಿಒ ಅಧಿಕಾರಿಗಳು, ಸಂಚಾರ ಪೊಲೀಸರು ಟೂರಿಸ್ಟ್‌ ಬಸ್‌ ಸೇರಿದಂತೆ ಪ್ರಯಾಣಿಕ ವಾಹನಗಳ ಮೇಲೆ ಕಣ್ಣಿಟ್ಟಿದ್ದಾರೆ.

ಶಿಕ್ಷೆ ಏನು :

ಮೋಟಾರು ವಾಹನ ಕಾಯಿದೆ ಪ್ರಕಾರ ಸಾಮರ್ಥ್ಯಕ್ಕಿಂತ ಹೆಚ್ಚುವರಿ ಪ್ರಯಾಣಿಕರನ್ನು ಹೇರಿಕೊಂಡು ಹೋಗುವ ಬಸ್ಸಿನ ಮಾಲಕ, ಚಾಲಕನ ವಿರುದ್ಧ ಮೊಕದ್ದಮೆ ದಾಖಲಿಸಲು ಮತ್ತು ಚಾಲನಾ ಪರವಾನಿಗೆ ರದ್ದತಿಗೆ ಅವಕಾಶವಿದೆ.

ನಿಂತು ಪ್ರಯಾಣಕ್ಕೂ ಅನುಮತಿ ಅಗತ್ಯ :

ಬಸ್ಸಿನ ನಿಗದಿತ ಸಾಮರ್ಥ್ಯ ಭರ್ತಿಯಾದಲ್ಲಿ 10 ಪ್ರಯಾಣಿಕರು ನಿಂತುಕೊಂಡು ಪ್ರಯಾಣಿಸಲು ಅವಕಾಶವಿದೆ. ಆದರೆ ಅದಕ್ಕೂ ಪೂರ್ವಾನುಮತಿ ಅಗತ್ಯ ಎನ್ನುತ್ತಾರೆ ಸಾರಿಗೆ ಅಧಿಕಾರಿಗಳು.

ಹೆಚ್ಚುವರಿಯಾಗಿ ಪ್ರಯಾಣಿಕರನ್ನು ತುಂಬಿರುವ ವಾಹನಗಳನ್ನು ಪತ್ತೆ ಹಚ್ಚಿ ಹೆಚ್ಚುವರಿ ಪ್ರತಿ ಸೀಟಿಗೆ ವಾಹನಕ್ಕೆ ತಕ್ಕಂತೆ ದಂಡ ವಿಧಿಸಲಾಗುತ್ತಿದೆ. ಹಾಗೂ ಮೊಕದ್ದಮೆ ದಾಖಲಿಸಲಾಗುತ್ತಿದೆ. ತಪಾಸಣೆ ಮತ್ತಷ್ಟು ಬಿಗಿಗೊಳಿಸ ಲಾಗುವುದು.ಆನಂದ ಗೌಡ,  ಪ್ರಾದೇಶಿಕ ಸಾರಿಗೆ ಅಧಿಕಾರಿ, ಪುತ್ತೂರು.

 

Advertisement

Udayavani is now on Telegram. Click here to join our channel and stay updated with the latest news.

Next