Advertisement
ಲಾಕ್‌ಡೌನ್ ಬಿಗಿಯಾಗಿದ್ದಾಗ ರಸ್ತೆ ಅಪಘಾತಗಳ ಸಂಖ್ಯೆ ಇಳಿಮುಖವಾಗಿತ್ತು. ಪ್ರಸ್ತುತ ವಾಹನಗಳ ದಟ್ಟಣೆ ಹೆಚ್ಚುತ್ತಿರುವಂತೆ ಅಪಘಾತಗಳೂ ಹೆಚ್ಚುತ್ತಿವೆ. ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ನಿಯಮಗಳನ್ನು ಪಾಲಿಸದಿರುವುದು, ದ್ವಿಚಕ್ರ ವಾಹನಗಳ ಸವಾರರು ನಿರ್ದಿಷ್ಟ ಪಥದಲ್ಲಿ ಸಂಚರಿಸದೆ ವಿರುದ್ಧ ದಿಕ್ಕಿನಿಂದ ಅತಿ ವೇಗದಲ್ಲಿ ಸಾಗುವುದು, ಮಿತಿಗಿಂತ ಹೆಚ್ಚು ಜನರನ್ನು ಕರೆದೊಯ್ಯುವುದು, ಹೆಲ್ಮೆಟ್ ಧರಿಸದಿರುವುದು ಇತ್ಯಾದಿ ಕಂಡುಬರುತ್ತಿದೆ. ಇಂತಹ ಅತಿರೇಕಗಳಿಂದಾಗಿ ಅಪಘಾತ ಹೆಚ್ಚುತ್ತಿರುವುದು ಕಳವಳಕಾರಿ. ಮಳೆಗಾಲದ ಪ್ರಾರಂಭದಲ್ಲಿ ಗ್ರೀಸ್, ಆಯಿಲ್ ರಸ್ತೆಗೆ ಬಿದ್ದಿರುವುದರಿಂದಾಗಿ ರಸ್ತೆ ಜಾರುತ್ತಿರುವುದೂ ಅಪಘಾತಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ಜಾಗರೂಕತೆಯಿಂದ ವಾಹನ ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Advertisement
ಸಂಚಾರ ನಿಯಮ ಪಾಲಿಸಿ: ಡಿಸಿ
12:35 AM Jun 03, 2020 | Sriram |
Advertisement
Udayavani is now on Telegram. Click here to join our channel and stay updated with the latest news.