Advertisement

ಸವಾರರಿಂದ ಸಂಚಾರ ಪೊಲೀಸರಿಗೇ ಟಾಂಗ್‌!

01:19 PM Apr 11, 2021 | Team Udayavani |

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿ ಸಿಕ್ಕಿಬೀಳುವವರು ಹಲವರು,ಸಂಚಾರ ನಿಯಮ ಉಲ್ಲಂಘಿಸಿ ತಪ್ಪಿಸಿಕೊಳ್ಳುವವರು ಇನ್ನು ಕೆಲವರು. ಈ ಮಧ್ಯೆ ತಪ್ಪಿಸಿಕೊಂಡರೂ ತಮ್ಮ ವಾಹನಗಳ ನಂಬರ್‌ ಗೊತ್ತಾಗದಂತೆ ಮರೆ ಮಾಚಿಕೊಂಡು ಪರಾರಿಯಾಗುವ ಪ್ರಚಂಚರೂ ಇದ್ದಾರೆ.

Advertisement

ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೂ ಅಂಥವರ ವಾಹನ ನೋಂದಣಿ ಸಂಖ್ಯೆ ಮೂಲಕ ಗುರುತಿಸಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ನೋಟಿಸ್‌ ಕೊಡುತ್ತಿದ್ದಾರೆ. ಅದಕ್ಕಾಗಿಯೇ ಪೊಲೀಸರು ನಗರದ ಸಾಕಷ್ಟು ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಜತೆಗೆ ಪೊಲೀಸರು ಖುದ್ದು ಕ್ಯಾಮೆರಾ ಹಿಡಿದು ಫೋಟೋ ಕ್ಲಿಕ್ಕಿಸಿ ನಂಬರ್‌ ನಮೂದಿಸಿ ಪ್ರಕರಣ ದಾಖಲಿಸುತ್ತಿದ್ದಾರೆ.

ಕೈ, ಕಾಲು, ವಸ್ತುಗಳು ಅಡ್ಡ ಇಡುವ ಸವಾರರು: ಆದರೆ, ಹೆಲ್ಮೆಟ್‌ ಧರಿಸದೆ,ತ್ರಿಬಲ್‌ ರೈಡಿಂಗ್‌, ವಾಹನ ದಾಖಲಾತಿಗಳನ್ನು ತೆಗೆದುಕೊಂಡು ಹೋಗದೆ ಸಂಚಾರನಿಯಮ ಉಲ್ಲಂಘಿಸುತ್ತಾರೆ. ಹೀಗೆ ತಮ್ಮ ವಾಹನಗಳಲ್ಲಿ ಹೋಗುವಾಗ ವಾಹನದ ನಂಬರ್‌ ಪ್ಲೇಟ್‌ ಸಿಸಿ ಕ್ಯಾಮೆರಾ ಮತ್ತು ಪೊಲೀಸರಿಗೆ ಕಾಣಬಾರದು ಎಂದು,ಅಂತಹ ವಾಹನಗಳಲ್ಲಿನ ಹಿಂಬದಿ ಸವಾರರು ನಂಬರ್‌ ಪ್ಲೇಟ್‌ ಕಾಣದಂತೆ ಮರೆಮಾಚುವಂತೆ ಮಾಡುವ ಸರ್ಕಸ್‌ ಕೂಡ ಪೊಲೀಸರು ಮತ್ತು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಹಿಂಬದಿ ಕೂರುವ ಮಹಿಳೆಯರು, ಕಾಲು ಅಥವಾ ಸೀರೆ ಸೆರಗು ಅಥವಾ ವಸ್ತುಗಳನ್ನು ನಂಬರ್‌ ಪ್ಲೇಟ್‌ ಮೇಲೆ ಹಾಕಿದರೆ.ಯುವಕರು ಕೈ ಅಥವಾ ನಂಬರ್‌ ಪ್ಲೇಟ್‌ಗೆ ಸೋಪ್ಪು ಹಾಗೂ ಕವರ್‌ಗಳನ್ನು ಕಟ್ಟಿರುವ ದೃಶ್ಯಗಳು ಸಂಚಾರ ಪೊಲೀಸರ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಆದರೂ ಅಂತಹ ವಾಹನಗಳ ಯಾವ ಮಾರ್ಗದಲ್ಲಿ ಹೋಗಿವೆ ಎಂಬುದನ್ನು ಪತ್ತೆ ಹಚ್ಚಿ ನೋಟಿಸ್‌ ಕೊಟ್ಟು ದಂಡ ವಿಧಿಸಲಾಗುತ್ತದೆ ಎಂದು ಸಂಚಾರ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next