Advertisement
ಹೆದ್ದಾರಿಯ ಅವ್ಯವಸ್ಥೆಗೆ ಕೊಂಚ ಮುಕ್ತಿ ನೀಡುವ ಹಿನ್ನೆಲೆಯಲ್ಲಿ ಅ. 1ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ವು ತೇಪೆ ಕಾರ್ಯ ಆರಂಭಿಸಿತ್ತು. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ಅದು ಕೂಡ ಸ್ಥಗಿತಗೊಂಡಿದೆ. ಮಳೆ ಹೀಗೇ ಮುಂದುವರಿದರೆ ತೇಪೆ ಕಾರ್ಯ ಮತ್ತಷ್ಟು ವಿಳಂಬ ವಾಗಲಿದೆ. ತೇಪೆ ಕಾರ್ಯದ ಬಳಿ ಸಂಪೂರ್ಣ ಡಾಮ ರೀಕರಣ ಯೋಜನೆ ಇದ್ದರೂ ಮಳೆಯನ್ನು ಅವಲಂಬಿಸಿದೆ ಎಂದು ಅಧಿಕಾರಿಗಳು ಅಭಿಪ್ರಾಯಿಸುತ್ತಿದ್ದಾರೆ.
ಹೆದ್ದಾರಿ ಪ್ರಾಧಿಕಾರ ಕೆಲವು ವರ್ಷಗಳ ಹಿಂದೆ ಬಿ.ಸಿ.ರೋಡ್- ಅಡ್ಡಹೊಳೆ ನಡುವಿನ 63 ಕಿ.ಮೀ.ಯನ್ನು ಚತುಷ್ಪಥಗೊಳಿಸಲಾರಂಭಿಸಿದ್ದು, ಹೆದ್ದಾರಿ ಯನ್ನು ಅಗೆದು ಮೋರಿಗಳನ್ನು ಅಳವಡಿಸ ಲಾಗಿದೆ. ಅಲ್ಲೆಲ್ಲಾ ಬೃಹತ್ ಹೊಂಡಗಳು ಕಾಣಿಸಿಕೊಂಡಿವೆ. ಪ್ರಸ್ತುತ ಹಿಂದಿನ ಕಾಮಗಾರಿ ಸ್ಥಗಿತಗೊಂಡಿದೆ. ಹೊಸ ಕಾಮಗಾರಿ ಆರಂಭಗೊಂಡಿಲ್ಲ. ಆರಂಭಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದರೂ ಪ್ರಕ್ರಿಯೆಗಳೆಲ್ಲ ನಡೆದು ಆರಂಭವಾಗಬೇಕಾದರೆ ಮತ್ತಷ್ಟು ವಿಳಂಬ ಖಚಿತ. ಈನಡುವೆ ಭೂಸ್ವಾಧೀನ ಪ್ರಕ್ರಿಯೆಯೂ ನಡೆಯಬೇಕಿದೆ.
Related Articles
ದ.ಕ. ಜಿಲ್ಲೆಯ ವಾತಾವರಣದಲ್ಲಿ ರಸ್ತೆಗೆ ಡಾಮರು ಅಥವಾ ತೇಪೆ ಕಾರ್ಯ ನಡೆದು ಒಂದು ತಿಂಗಳು ಬಿಸಿಲು ಬಿದ್ದರೆ ಮಾತ್ರ ಗಟ್ಟಿಯಾಗಿ ನಿಲ್ಲುತ್ತದೆ. ಬಿಸಿಲಿನ ತಾಪಕ್ಕೆ ಡಾಮರು ಕರಗಿ ಜಲ್ಲಿಗಳ ಮಧ್ಯೆ ಸೀಲ್ ಆದಾಗ ಮಾತ್ರ ರಸ್ತೆ ಸದೃಢ ವಾಗುತ್ತದೆ. ಆದರೆ ಇಲ್ಲಿ ಆಗಾಗ ಸುರಿಯುವ ಮಳೆಯಿಂದಾಗಿ ಜಲ್ಲಿಗಳ ಮಧ್ಯೆ ನೀರು ಸೇರಿಕೊಂಡು ಕೆಲವೇ ದಿನಗಳಲ್ಲಿ ಡಾಮರು ಎದ್ದುಹೋಗುತ್ತದೆ. ಆದರೆ ಇದನ್ನು ಅರಿಯದ ಜನಸಾಮಾನ್ಯರು ಕಳಪೆ ಕಾಮಗಾರಿಯಿಂದಾಗಿ ಹೀಗಾಗಿದೆ ಎಂದುಕೊಳ್ಳುತ್ತಾರೆ.
– ರಮೇಶ್‌ಬಾಬು ತಾಂತ್ರಿಕ ವ್ಯವಸ್ಥಾಪಕರು, ಎನ್‌ಎಚ್‌ಎಐ, ಮಂಗಳೂರು
Advertisement