ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೆಳಿಗ್ಗೆ ಸುರಿದ ಭಾರಿ ಗಾಳಿ ಮಳೆಗೆ ದೆಹಲಿ ಜನ ತತ್ತರಿಸಿ ಹೋಗಿದ್ದು ನಗರದ ಹಲವು ಭಾಗಗಳ ರಸ್ತೆಗಳು ಜಲಾವೃತಗೊಂಡು ವಾಹನಗಳು ಸಂಚರಿಸಲಾಗದೆ ಟ್ರಾಫಿಕ್ ಜಾಮ್ ಉಂಟಾಗಿದೆ.
ರಾಷ್ಟ್ರ ರಾಜಧಾನಿಯ ಹಲವು ಭಾಗಗಳಲ್ಲಿ ಜಲಾವೃತವಾಗಿದ್ದು, ಮುಂಜಾನೆ ವಾಹನಗಳ ಸಂಚಾರವನ್ನು ನಿಧಾನಗೊಳಿಸಿತು. ಅಕ್ಷರಧಾಮ ದೇವಾಲಯದ ಮೆಟ್ರೋ ನಿಲ್ದಾಣದ ಹೊರಗೆ ಮತ್ತು ವಿಕಾಸ್ ಮಾರ್ಗ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಕಂಡುಬಂದಿದೆ.
ಸಂಗಮ್ ವಿಹಾರ್ ಸೇರಿದಂತೆ ಹಲವು ಪ್ರದೇಶಗಳು ಜಲಾವೃತಗೊಂಡು ಸ್ಥಳೀಯರು ತೊಂದರೆ ಅನುಭವಿಸಿದರು.
ರಾಜಧಾನಿ ಪಾರ್ಕ್‌ನಿಂದ ಟಿಕ್ರಿ ಬಾರ್ಡರ್ ಕಡೆಗೆ ರೋಹ್ಟಕ್ ರಸ್ತೆಯ ಎರಡೂ ಮಾರ್ಗಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ ಎಂದು ದೆಹಲಿ ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ಹವಾಮಾನ ಮುನ್ಸೂಚನೆಯ ಪ್ರಕಾರ, ದೆಹಲಿಯಲ್ಲಿ ಮುಂದಿನ ಐದು ದಿನಗಳ ಕಾಲ ಮೋಡ ಕವಿದ ವಾತಾವರಣವಿದ್ದು ಮಳೆಯಾಗುವ ಸಾಧ್ಯತೆ ಎಂದಿದೆ.
ಇದನ್ನೂ ಓದಿ: Anantnag Encounter; ಮೂವರು ಯೋಧರು ಹುತಾತ್ಮರಾಧ ಬೆನ್ನಲ್ಲೇ ಮತ್ತೋರ್ವ ನಾಪತ್ತೆ!