Advertisement

ಮುಳ್ಳಯ್ಯನಗಿರಿಯಲ್ಲಿ ‌ಪ್ರವಾಸಿಗರ ದಂಡು: ಟ್ರಾಫಿಕ್ ಜಾಮ್

06:48 PM Jan 01, 2022 | Team Udayavani |

ಚಿಕ್ಕಮಗಳೂರು : ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮುಳ್ಳಯ್ಯನಗಿರಿಗೆ ಹೊಸವರ್ಷದ ಸಂಭ್ರಮಾಚರಣೆಗೆ ಶನಿವಾರ ಭಾರಿ ಸಂಖ್ಯೆಯಲ್ಲಿ ‌ಪ್ರವಾಸಿಗರು ಆಗಮಿಸಿದ ಕಾರಣ ರಸ್ತೆಯಲ್ಲಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಯಿತು.

Advertisement

ರಾಜ್ಯದ ಅತಿ ಎತ್ತರದ ಪ್ರದೇಶದಲ್ಲಿ ಜನಜಾತ್ರೆ ಕಂಡು ಬಂದಿತು.ರಾಜ್ಯ, ಹೊರ ರಾಜ್ಯಗಳಿಂದ ಒಮ್ಮೆಲೇ ನೂರಾರು ಜನರು ಆಗಮಿಸಿದ್ದರಿಂದ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡು ಪ್ರವಾಸಿಗರು ಹೈರಾಣಾದರು.

ಕೊರೊನ ಮಾರಾಗದರ್ಶಿಗಳು ಮಂಗಮಾಯವಾಗಿದ್ದವು.ಹೆಚ್ಚಿನ ಪ್ರವಾಸಿಗರು ಎಂಜಾಯ್ ಮಾಡುವ ವೇಳೆ ನಿಯಮ ಗಳನ್ನು ಪಾಲಿಸಲು ಮರೆತರು.

Advertisement

Udayavani is now on Telegram. Click here to join our channel and stay updated with the latest news.

Next