Advertisement
ನಿಯಮಾವಳಿ ಉಲ್ಲಂಘನೆಗೆ ಸಂಬಂಧಿಸಿದಂತೆ ನಗರದಲ್ಲಿ ಜನವರಿಯಿಂದ ಅಕ್ಟೋಬರ್ 30ರ ವರೆಗೆ ಒಟ್ಟು 7,756 ಪ್ರಕರಣ ದಾಖಲಾಗಿದ್ದು, 44,54,000 ರೂ. ದಂಡವನ್ನು ಸ್ಥಳದಲ್ಲೇ ವಿಧಿಸಲಾಗಿದೆ. ಮದ್ಯಸೇವಿಸಿ ವಾಹನ ಚಲಾವಣೆ ಹಾಗೂ ಸ್ಥಳದಲ್ಲಿ ದಂಡ ಪಾವತಿಸದವರ ವಾಹನದಾಖಲೆ ನಿಷ್ಕ್ರಿಯಗೊಳಿಸಿ ಕೋರ್ಟ್‌ಗೆ ಹಾಜರು ಪಡಿಸಲಾಗಿದೆ. ಈಗಾಗಲೇ 229 ಪ್ರಕರಣಗಳನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಅದರಲ್ಲಿ 13 ಪ್ರಕರಣಗಳು ಇತ್ಯರ್ಥಗೊಂಡು 69,500 ರೂ. ದಂಡ ಸಂಗ್ರಹಿಸಲಾಗಿದೆ. ಕೊರೊನಾ ಕಾರಣ ದಿಂದಾಗಿ ಉಳಿದ ಪ್ರಕರಣಗಳು ವಿಚಾರಣೆಗೆ ಬಾಕಿಯಿದ್ದು, ಶೀಘ್ರದಲ್ಲಿ ಇತ್ಯರ್ಥವಾಗಲಿದೆ.
ಟ್ರಾಫಿಕ್ ಪೊಲೀಸರ ಕಣ್ತಪ್ಪಿಸಿಕೊಂಡು ಮಾರ್ಗ ಬದಲಿಸಿ ಸಂಚಾರ ಮಾಡುವವರ ಮೇಲೆಯೂ ಟ್ರಾಫಿಕ್ ಪೊಲೀಸರು ನಿಗಾ ಇರಿಸಿದ್ದಾರೆ. ನಗರದ ಕಲ್ಸಂಕ ವೃತ್ತ, ಸಿಟಿ ಬಸ್ ನಿಲ್ದಾಣ, ಕೆಎಂ ಮಾರ್ಗ, ಕರಾವಳಿ ಬೈಪಾಸ್, ಸಂತೆಕಟ್ಟೆ ಜಂಕ್ಷನ್, ಕ್ಲಾಕ್ ಟವರ್ ಭಾಗದಲ್ಲಿ ದಿನಂಪ್ರತಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾರೆ. ಇದನ್ನು ಹೊರತುಪಡಿಸಿ ಇತರ ಪ್ರದೇಶಗಳಲ್ಲಿಯೂ ಪೊಲೀಸರು ದಿಢೀರ್ ಕಾರ್ಯಾಚರಣೆ ಮಾಡಿ ನಿಯಮಾವಳಿ ಉಲ್ಲಂ ಸುವವರ ಮೇಲೆ ಕ್ರಮ ಜರಗಿಸುತ್ತಿದ್ದಾರೆ. ನಗರಸಭೆಯಿಂದ ಶೀಘ್ರ ಮಾರ್ಕಿಂಗ್
ನಗರದ ಆಯಾಕಟ್ಟಿನ ಭಾಗದಲ್ಲಿ ಸುಗಮ ವಾಹನ ನಿಲುಗಡೆ ದೃಷ್ಟಿಯಿಂದ ನಗರಸಭೆಯ ವತಿಯಿಂದ ಮಾರ್ಕಿಂಗ್ ಮಾಡುವಂತೆ ತಿಳಿಸಲಾಗಿದೆ. ಇತ್ತೀಚೆಗಷ್ಟೇ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದಿದ್ದು, ಮುಂದಿನ ದಿನದಲ್ಲಿ ಮಾರ್ಕಿಂಗ್ ನಡೆಸಲಿ ದ್ದಾರೆ. ಆ ವ್ಯಾಪ್ತಿ ಬಿಟ್ಟು ಹೊರಭಾಗದಲ್ಲಿ ವಾಹನಗಳನ್ನು ನಿಲ್ಲಿಸಿದರೆ ಲಾಕ್ ಮಾಡಿ ಮಾಲಕರಿಗೆ ದಂಡ ವಿಧಿಸಲಾಗುವುದು ಎನ್ನುತ್ತಾರೆ ಟ್ರಾಫಿಕ್ ಪೊಲೀಸರು.
Related Articles
ದ್ವಿಚಕ್ರ ವಾಹನ ಸವಾರರು ಕಡ್ಡಾಯ ವಾಗಿ ಹೆಲ್ಮೆಟ್ ಧರಿಸಬೇಕು ಎಂಬ ನಿಯಮ ವಿದ್ದರೂ ಹಲವು ಮಂದಿ ನಿಯಮ ಉಲ್ಲಂ ಸಿ
ದಂಡ ಪಾವತಿಸುತ್ತಿದ್ದಾರೆ. ವಾಹನಗಳಲ್ಲಿ ಇಂಡಿಕೇಟರ್ ಇಲ್ಲದಿರುವುದು, ವಾಯು ಮಾಲಿನ್ಯ ತಪಾಸಣೆ ಮಾಡಿಸದಿರುವುದು, ಅವಧಿ ಮುಗಿದ ಇನ್ಶೂರೆನ್ಸ್ ಸಹಿತ ದ್ವಿಚಕ್ರ ವಾಹನ ಸವಾರರು ಅತ್ಯಧಿಕ ಪ್ರಮಾಣದಲ್ಲಿ ದಂಡ ಪಾವತಿಸುತ್ತಿದ್ದಾರೆ.
Advertisement
ನಿಯಮಾವಳಿ ಪಾಲಿಸಿಪೊಲೀಸರು ತಪಾಸಣೆ ಮಾಡುತ್ತಾರೆ ಎಂದು ತಿಳಿದಿದ್ದರೂ ಹಲವಾರು ಮಂದಿ ಟ್ರಾಫಿಕ್ ನಿಯಮಾವಳಿಗಳನ್ನು ಉಲ್ಲಂಘಿಸುತ್ತಿದ್ದಾರೆ. ಲಾಕ್‌ಡೌನ್ ಬಳಿಕ ಪ್ರಕರಣಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ. ಸ್ಥಳದಲ್ಲಿಯೇ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ವಾಹನ ಮಾಲಕರು ಸೂಕ್ತ ದಾಖಲೆಗಳನ್ನು ಇಟ್ಟುಕೊಂಡು ಸಂಚಾರ ನಿಯಮ ಪಾಲಿಸಿದರೆ ಒಳ್ಳೆಯದು.
-ಅಬ್ದುಲ್ ಖಾದರ್, ಪೊಲೀಸ್ ನಿರೀಕ್ಷಕರು, ಉಡುಪಿ ಸಂಚಾರ ಠಾಣೆ