Advertisement

Subramanyaದಲ್ಲಿ ಸಂಚಾರ, ಪಾರ್ಕಿಂಗ್‌ ಸುಗಮ

02:56 PM Aug 12, 2024 | Team Udayavani |

ಸುಬ್ರಹ್ಮಣ್ಯ: ರಾಜ್ಯದ ಶ್ರೀಮಂತ ದೇಗುಲಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದಿನವೂ ಸಾವಿರಾರು ಭಕ್ತರು ಆಗಮಿಸುತ್ತಾರೆ. ವಾರಾಂತ್ಯದಲ್ಲಿ 1,000ಕ್ಕೂ ಅಧಿಕ ವಾಹನಗಳ ದಾಂಗುಡಿಯಿಂದ ವಾಹನ ದಟ್ಟಣೆ ಹೆಚ್ಚಾಗಿ ಸುಗಮ ಸಂಚಾರಕ್ಕೆ ತೊಡಕಾಗಿತ್ತು. ಇದೀಗ ಕ್ಷೇತ್ರದಲ್ಲಿ ಜಾರಿಗೆ ತಂದಿರುವ ಹೊಸ ಸಂಚಾರ ನಿಯಮಗಳಿಂದ ಸುಗಮ ಸಂಚಾರ ವ್ಯವಸ್ಥೆ ರೂಪುಗೊಂಡಿದೆ.

Advertisement

ಸುಬ್ರಹ್ಮಣ್ಯ ಪೇಟೆಯಲ್ಲಿ ಸುಸಜ್ಜಿತ ಕಾಂಕ್ರೀಟ್‌ ರಸ್ತೆಗಳಿದ್ದರೂ ವ್ಯವಸ್ಥಿತ ಸಂಚಾರ ನಿಯಮಗಳಿಲ್ಲದೆ ಇದುವರೆಗೆ ಅಸಮರ್ಪಕ ಪಾರ್ಕಿಂಗ್‌, ಸಂಚಾರ ನಿಯಮ ಉಲ್ಲಂಘನೆ ನಡೆಯು ತ್ತಿತ್ತು. ಹೊಸ ಸಂಚಾರ ಹಾಗೂ ಪಾರ್ಕಿಂಗ್‌ ನಿಯಮಗಳು ವಾಹನಗಳ ಸುಗಮ ಸಂಚಾರಕ್ಕೆ ಪೂರಕವಾಗಿವೆ.

ಕ್ಷೇತ್ರದಲ್ಲಿ ವ್ಯವಸ್ಥಿತ ಸಂಚಾರ ನಿಯಮ ಅಳವಡಿಸಬೇಕು ಎಂದು ಹಲವು ವರ್ಷಗಳಿಂದ ಬೇಡಿಕೆ ಇತ್ತು. 2015ರಲ್ಲಿ ಅಂದಿನ ಜಿಲ್ಲಾಧಿಕಾರಿ ಅವರು ವ್ಯವಸ್ಥಿತ ಸಂಚಾರ ಹಾಗೂ ಪಾರ್ಕಿಂಗ್‌ಗೆ ಮಾರ್ಗಸೂಚಿ ಹೊರಡಿಸಿ ಆದೇಶಿಸಿದ್ದರು. ಇತ್ತೀಚೆಗೆ ಸುಬ್ರಹ್ಮಣ್ಯ ಪೊಲೀಸ್‌ ಠಾಣೆ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಸಾರ್ವಜನಿಕರ ವತಿಯಿಂದ ವಿಶೇಷ ಸಭೆ ನಡೆಸಿ ಈ ಹಿಂದೆ ಜಿಲ್ಲಾಧಿಕಾರಿ ಅವರು ನಿರ್ದೇಶಿಸಿದ್ದ ಪಾರ್ಕಿಂಗ್‌ ಹಾಗೂ ಸಂಚಾರಿ ನಿಮಯಕ್ಕೆ ಪ್ರಸ್ತುತ ದಿನಕ್ಕೆ ಸ್ಥಳೀಯ ಬದಲಾವಣೆಗಳನ್ನು ಮಾಡಿ ನಿರ್ಣಯಿಸಲಾಗಿತ್ತು. ಸಹಾಯಕ ಕಮಿಷನರ್‌ ಅವರಿಂದ ಒಪ್ಪಿಗೆ ಪಡೆದು ಪ್ರಾಯೋಗಿಕವಾಗಿ ನಿಯಮ ಜಾರಿಗೆ ತರಲಾಗಿತ್ತು. ಪ್ರಾಯೋಗಿಕ ಹಂತದಲ್ಲಿ ಇದು ಯಶಸ್ವಿಯಾಗಿದ್ದು ಅದನ್ನೀಗ ಜಾರಿ ಮಾಡಲಾಗಿದೆ.

ಹೊಸ ಸಂಚಾರ ನಿಯಮ ಉಲ್ಲಂಘಿಸಿದಲ್ಲಿ ದಂಡ ವಿಧಿಸುವ, ವಾಹನ ಲಾಕ್‌ ಮಾಡುವ ಕ್ರಮಗಳ ಬಗ್ಗೆಯೂ ಚಿಂತನೆ ನಡೆಸಲಾಗಿದೆ.

Advertisement

ಎಲ್ಲೆಲ್ಲಿ ಪಾರ್ಕಿಂಗ್‌; ಎಲ್ಲೆಲ್ಲಿ ನೋ-ಪಾರ್ಕಿಂಗ್‌

ಕಾಶಿಕಟ್ಟೆಯಿಂದ ಸುಬ್ರಹ್ಮಣ್ಯ ಜಂಕ್ಷನ್‌ವರೆಗಿನ ಎರಡೂ ಬದಿಯಲ್ಲೂ ವಾಹನ ಪಾರ್ಕಿಂಗ್‌ ನಿಷೇಧ

ಸವಾರಿ ಮಂಟಪದಿಂದ ಕಾಶಿ ಕಟ್ಟೆವರೆಗೆ ಒಂದು ಬದಿಯ ಪಾಕಿಂಗ್‌ ನಿಷೇಧ

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿಯಲ್ಲಿ ಎರಡು ಆಟೋರಿಕ್ಷಾ ಹಾಗೂ ಎರಡು ಟ್ಯಾಕ್ಸಿಗಳಿಗೆ ಹಾಗೂ ರಥಬೀದಿ ಜಂಕ್ಷನ್‌ ಬಳಿ ಎರಡು ಆಟೋರಿಕ್ಷಾಗಳಿಗೆ ಬಾಡಿಗೆಗೆ ನಿಲ್ಲಿಸಲು ಅವಕಾಶ.

ಉಳಿದ ಅಟೋರಿಕ್ಷಾಗಳು ಹಾಗೂ ಟ್ಯಾಕ್ಸಿಗಳಿಗೆ ಅಕ್ಷರ ವಸತಿ ಗೃಹದ ಪಾರ್ಕಿಂಗ್‌ ಪ್ರದೇಶದಲ್ಲಿ, ರಥಬೀದಿ ಜಂಕ್ಷನ್‌ ಪಕ್ಕದ ಖಾಲಿ ಜಾಗದಲ್ಲಿ ಪಾರ್ಕಿಂಗ್‌ ಅವಕಾಶ.

ಪ್ರವಾಸಿಗರ/ಯಾತ್ರಿಕರ/ಭಕ್ತರ ವಾಹನಗಳನ್ನು ಅಭಯ ಆಂಜನೇಯ ಗುಡಿ ಬಳಿ, ಇಂಜಾಡಿ ಬಳಿಯ ಗ್ರೌಂಡ್‌ನ‌ಲ್ಲಿ ಪಾರ್ಕ್‌ ಮಾಡಬಹುದು.

ಸ್ಥಳೀಯರ ಹಾಗೂ ವ್ಯಾಪಾರಸ್ಥರ ವಾಹನಗಳನ್ನು ಮೈಸೂರು ನಿಯೋ ಮುಂಭಾಗದ ಪಾರ್ಕಿಂಗ್‌ ಪ್ರದೇಶದಲ್ಲಿ ನಿಲ್ಲಿಸಬಹುದು.

ಪೊಲೀಸರಿಂದ ತರಬೇತಿ

ಸುಬ್ರಹ್ಮಣ್ಯದಲ್ಲಿ ಜಾರಿಗೆ ತರಲು ಉದ್ದೇಶಿಸಿದ್ದ ಹೊಸ ಸಂಚಾರಿ ನಿಯಮ ಹಾಗೂ ಪಾರ್ಕಿಂಗ್‌ ಬಗ್ಗೆ ಪ್ರಾಯೋಗಿಕ ಹಂತ ಯಶಸ್ವಿಯಾಗಿದ್ದು, ಮುಂದೆ ಅದನ್ನು ಕಡ್ಡಾಯ ಜಾರಿಗೊಳಿಸಲಾಗುತ್ತಿದೆ. ಇಲ್ಲಿಗೆ ನಿಯೋಜಿಸಲಾಗುವ ಸಿಬಂದಿಗೆ ಸಂಚಾರಿ ಪೊಲೀಸರಿಂದ ತರಬೇತಿ ನೀಡಲಿದ್ದಾರೆ. -ಜುಬಿನ್‌ ಮೊಹಾಪಾತ್ರ, ಸಹಾಯಕ ಆಯುಕ್ತರು ಪುತ್ತೂರು

ಉತ್ತಮ ಸ್ಪಂದನೆ

ಗ್ರಾ.ಪಂ., ದೇವಸ್ಥಾನದ ಇಒ, ಪಿಡಬ್ಲ್ಯುಡಿ, ಸಾರ್ವಜನಿಕರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಸಲಹೆ-ಸೂಚನೆಗಳನ್ನು ಪಡೆದು ಹೊಸ ನಿಯಮ ರೂಪಿಸಲಾಗಿದೆ. ಎಸಿ ಅವರ ಅನುಮತಿ ಪಡೆದು ಆದೇಶ ಮಾಡಲಾಗಿದೆ. ಎಲ್ಲರಿಂದ ಉತ್ತಮ ಸ್ಪಂದನೆ ದೊರೆತಿದೆ. -ಕಾರ್ತಿಕ್‌ ಉಪನಿರೀಕ್ಷಕರು,ಸುಬ್ರಹ್ಮಣ್ಯ ಪೊಲೀಸ್‌ ಠಾಣೆ

ಒನ್‌ವೇ, ಪ್ರವೇಶ ನಿಯಮ ಹೀಗಿದೆ

ಕಾಶಿಕಟ್ಟೆಯಿಂದ ಸುಬ್ರಹ್ಮಣ್ಯ ರಥಬೀದಿ ಜಂಕ್ಷನ್‌ವರೆಗೆ ಒನ್‌ ವೇ ಪ್ರವೇಶ, ಸವಾರಿ ಮಂಟಪದಿಂದ ಕಾಶೀಕಟ್ಟೆವರೆಗೆ ಒನ್‌ವೇ ನಿರ್ಗಮನ.

ಕೆಎಸ್‌ಆರ್‌ಟಿಸಿ ಬಸ್‌ಗಳು ಕಾಶಿಕಟ್ಟೆಯಿಂದ ಬಸ್‌ ನಿಲ್ದಾಣಕ್ಕೆ ಅಥವಾ ನೂಜಿಲ, ಆದಿಸುಬ್ರಹ್ಮಣ್ಯ ಮೂಲಕ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಪ್ರವೇಶ

ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಿಂದ ಹೊರಡುವ ಬಸ್‌ಗಳು ಸವಾರಿ ಮಂಟಪ ಮೂಲಕ ನಿರ್ಗಮನಕ್ಕೆ ಸೂಚನೆ

ನಿಯಮ ಪಾಲನೆಗೆ 8 ಸಿಬಂದಿ

ಪೇಟೆಯ ಹೊಸ ಪಾರ್ಕಿಂಗ್‌, ಸಂಚಾರ ನಿಯಮಗಳ ಬಗ್ಗೆ ಬ್ಯಾರಿಕೇಡ್‌ ಹಾಗೂ ಸೂಚನಾ ಫಲಕಗಳನ್ನು ಅಲ್ಲಲ್ಲಿ ಅಳವಡಿಸಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿಯ ರಸ್ತೆಯಲ್ಲಿ ಸಂಚಾರಿ ನಿಯಂತ್ರಣ ಕೇಂದ್ರ ತೆರೆದು ಸಂಚಾರ ನಿಯಂತ್ರಿಸಲಾಗುತ್ತಿದೆ. ಪಾರ್ಕಿಂಗ್‌ ಹಾಗೂ ಸಂಚಾರ ನಿಯಂತ್ರಣಕ್ಕೆ ದೇವಸ್ಥಾನದಿಂದ ಏಳು ಗೃಹ ರಕ್ಷಕದಳ, ಒರ್ವ ಪೊಲೀಸ್‌ ಸಿಬಂದಿ ನಿಯೋಜಿಸ ಲಾಗುತ್ತದೆ. ದೇವಸ್ಥಾನದ ವತಿಯಿಂದ ಸಿಬಂದಿ ನಿಯೋಜನೆಗೆ ಒಪ್ಪಿಗೆ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next