Advertisement

ಜೋಯಿಡಾ: ಬುಡಕಟ್ಟು ಜನರಿಂದ ಸಾಂಪ್ರದಾಯಿಕ ಗಡ್ಡೆ ಗೆಣಸು ಮೇಳ

04:12 PM Jan 14, 2021 | Team Udayavani |

ಜೋಯಿಡಾ: ತಾಲೂಕಿನ ಬುಡಕಟ್ಟುಗಳ ಸಾಂಪ್ರದಾಯಿಕ ಬೆಳೆ ಗಡ್ಡೆಗೆಣಸುಗಳ ಮೇಳ ಬುಧವಾರ ಜೋಯಿಡಾ ಕುಣಬಿ ಭವನದಲ್ಲಿ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಬಂದ ಗಡ್ಡೆ ಗೆಣಸು ಪ್ರಿಯರು ಹಾಗೂ ಪ್ರವಾಸಿಗರು ನೆಚ್ಚಿನ ಗಡ್ಡೆ ಗೆಣಸನ್ನು
ಖರೀದಿಸಿದರು.

Advertisement

ಕೊಲ್ಲಾಪುರ ವಿವಿ ವನಸ್ಪತಿ ವಿಭಾಗದ ಶ್ರೀರಂಗ ಯಾವದ, ಹಿಂದೆ ಜಗತ್ತಿನಲ್ಲಿ ಜನ, ಜಾನುವಾರುಗಳ ಮೂಲ ಆಹಾರವೇ
ಗೆಡ್ಡೆ ಗೆಣಸಾಗಿತ್ತು. ಈ ಬೆಳೆ ಈಗಿನ ಬೆಳೆಗಳಂತೆ ಅಕಾಲಿಕ ಮಳೆಗೆ ಹಾಳಾಗುವುದಿಲ್ಲ. ಇಂದು ನಿಜವಾಗಿಯೂ ಜನರ ಮೂಲ ಆಹಾರವಾಗಿತ್ತು ಎಂದರು. ಬೆಂಗಳೂರು ವಿಜ್ಞಾನಿ ಸುಭಾಷಚಂದ್ರ ಮಾತನಾಡಿ, ಈ ಗಡ್ಡೆಗೆಣಸನ್ನು ಜೀವವೈವಿಧ್ಯದ ದಾಖಲಾತಿಯಲ್ಲಿ ಸೇರಿಸಲಾಗುತ್ತಿದೆ ಎಂದರು. ನಾಣಿಜದ ವಿ.ವಿ. ವೆರ್ಣೇಕರ್‌, ಶಿರಸಿಯ ಪರಿಸರವಾದಿ ಬಾಲಚಂದ್ರ ಹೆಗಡೆ ಮೇಳದ ಕುರಿತು ಮಾತನಾಡಿದರು. ಡಾ| ಜಯಾನಂದ ಡೆರೆಕರ್‌ ಮೇಳ ಆರಂಭದಿಂದ ಸಮಾಪ್ತಿಯವರೆಗೂ ನಡೆದು ಬಂದ
ಹಾದಿಯ ಕುರಿತು ವಿವರಿಸಿದರು.

ತಾಲೂಕಿನಾದ್ಯಂತ 150ಕ್ಕೂ ಹೆಚ್ಚು ಕೃಷಿಕರು ಗಡ್ಡೆ ಗೆಣಸುಗಳೊಂದಿಗೆ ಮೇಳದಲ್ಲಿ ಭಾಗವಹಿಸಿದ್ದರು. 20ಕ್ಕೂ ಹೆಚ್ಚು ವಿವಿಧ ಜಾತಿಯ ಗಡ್ಡೆಗೆಣಸುಗಳು ಈ ಮೇಳದಲ್ಲಿ ಕಂಡು ಬಂದಿದ್ದು, ಜಿಲ್ಲೆಯಾದ್ಯಂತ ಸಾವಿರಾರು ಆಸಕ್ತರು ಭಾಗವಹಿಸಿದ್ದರು.

ಇದನ್ನೂ ಓದಿ:ಯೋಗೇಶ್ವರ್ ಒಂಬತ್ತು ಕೋಟಿ ರೂ. ಸಾಲ ಮಾಡಿಕೊಂಡು ನಮ್ಮನ್ನು ಒಗ್ಗೂಡಿಸಿದ್ದರು: ಜಾರಕಿಹೊಳಿ

ಕೆಸುಗಡ್ಡೆ, ಪಂಜರಗಡ್ಡೆ, ನೆಗಲಗೊಣ್ಣೆ, ಬೀಳುಕೆಸು, ಗಿಡಗೊಣ್ಣೆ, ಅಂಬೆಕೊಂಬು, ಬೆಳಗಣಗೆಂಡೆ, ಅರಶಿಣ ಗಡ್ಡೆ, ಆಳೆಕೋನ, ನಾಗರಕೋನ, ದಯೇಕೋನ, ಚಿರ್ಕೆ, ಚೆನ್ನಿ, ದಯೆಆಳು, ಕಾಸರಾಳು, ಸಾವರಕೋನ, ಮುಡ್ಲಿ, ಕಾಟೆ ಕಣಂಗ, ಜಾಡ್‌ ಕಣಂಗ, ಮುಂತಾದ ವಿವಿದ ತಳಿಯ ರಸಾಯನಿಕ ರಹಿತ ಸಾವಯವ ಕೃಷಿಯ ಗಡ್ಡೆ ಗೆಣಸುಗಳು ಈ ಮೇಳದಲ್ಲಿ ಇದ್ದಿದ್ದು ಕಂಡುಬಂದಿತ್ತು.

Advertisement

ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಘೋಕ್ಲೃಕರ್‌ ಉದ್ಘಾಟಿಸಿದರು. ಜಿಪಂ ಸದಸ್ಯ ರಮೇಶ ನಾಯ್ಕ, ತಾಪಂ ಅಧ್ಯಕ್ಷೆ ನರ್ಮದಾ ಪಾಕ್ಲೃಕರ್‌, ಧಾರವಾಡ ಕೃಷಿ ವಿವಿ ಮಲ್ಲಿಕ, ಶಿರಸಿ ಕೃಷಿ ವಿಜ್ಞಾನಿ ಬಾಲಚಂದ್ರ ಹೆಗಡೆ, ಊರಿನ ಗಣ್ಯರಾದ ವಿನೋದ ಮಿರಾಶಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next