Advertisement

ಕರಕುಶಲ ವಸ್ತುಗಳಿಂದ ಮನೆಗೆ ಸಾಂಪ್ರದಾಯಿಕ ಮೆರುಗು

04:23 PM Jun 23, 2018 | |

ಮನೆಯ ವಿನ್ಯಾಸ, ಬಣ್ಣಗಳು ಹಾಗೂ ಕಟ್ಟಡ ಸಾಮಗ್ರಿಗಳು ಹೊರಗಿನಿಂದ ಮನಸೆಳೆಯುತ್ತವೆ. ಮನೆಯೊಳಗಿನ ಅಲಂಕಾರಕ್ಕೆ ಕರಕುಶಲ ವಸ್ತುಗಳನ್ನು ಬಳಸಿದರೆ ಅವುಗಳು ಸಾಂಪ್ರದಾಯಿಕ ಮೆರುಗು ನೀಡುತ್ತವೆ. ಸಾಂಝಿ ಒಂದು ಸಾಂಪ್ರದಾಯಿಕ ಕಲೆ. ಪೇಪರ್‌ನಲ್ಲಿ ಬಿಡಿಸುವ ಈ ಕಲಾ ಪ್ರಕಾರ ಕೊಠಡಿಯೊಂದರಲ್ಲಿರುವ ಜಾಗವನ್ನು ಸುಲಭವಾಗಿ ಬೆಳಗಿಸುವ ಸಾಮರ್ಥ್ಯ ಹೊಂದಿದೆ. ಖಾಲಿಯಾದ ಬಿಳಿ ಗೋಡೆಗೆ ಹೊಸ ಅಂದವನ್ನು ತುಂಬುವಲ್ಲಿ ಸಾಂಝಿ ಸಂಶಯವಿಲ್ಲ. 

Advertisement

ಕಲಾತ್ಮಕ ಪೀಠೊಪಕರಣ
ನಮಗೆ ಸರಿ ಹೊಂದುವ ಗಾಜು, ಲೋಹ ಅಥವಾ ಮರದಿಂದ ತಯಾರಿಸಲಾದ ಕಲಾಕೃತಿಗಳನ್ನು ಗೋಡೆಗಳ ಅಲಂಕಾರಕ್ಕೆ ಬಳಸುವುದರಿಂದ ಅಂದ ವೃದ್ಧಿಯಾಗುತ್ತದೆ. ಕಲಾತ್ಮಕ ಪೀಠೊಪಕರಣಗಳನ್ನು ಬಳಕೆ ಇಂದು ಹೆಚ್ಚಾಗಿದ್ದು, ಅದು ಮನೆಗೆ ವಿಶೇಷ ಲುಕ್‌ ನೀಡುತ್ತವೆ. ಮುತ್ತಿನ ಮಣಿಗಳು, ಉಣ್ಣೆ ವಸ್ತುಗಳು, ಗಾಜಿನಿಂದ ತಯಾರಿಸಿದ ವಾಲ್‌ ಪೀಸ್‌, ಚಿಕ್ಕ ಚಿಕ್ಕ ಮಣಿಗಳಿಂದ ತಯಾರಿಸಿದ ತೊಟ್ಟಿಲು, ಅಲಂಕಾರಿಕ ಬೆಣ್ಣೆ ಗಡಿಗೆ, ಮಣಿಸರ, ಉಣ್ಣೆಯಿಂದ ತಯಾರಿಸಿದ ಬಾಗಿಲು ಪರದೆ, ಬಾಗಿಲಿನ ತೋರಣ, ವಿವಿಧ ಪಕ್ಷಿಗಳ ಗರಿ, ಓಲೆ, ಭತ್ತದ ತೆನೆ, ಹುಲ್ಲು ಕಡ್ಡಿಗಳಿಂದ ತಯಾರಿಸಿದ ತೋರಣಗಳ ಬಳಕೆ ಆಕರ್ಷವಾಗಿ ಕಾಣಿಸುತ್ತದೆ. ಮನೆಯ ಅಲಂಕಾರ ಪರಿಪೂರ್ಣವಾಗಲು ಸೂಕ್ತ ಬೆಳಕಿನ ವ್ಯವಸ್ಥೆ ಅಗತ್ಯ. ಆದ್ದರಿಂದ ವಿವಿಧ ವಿನ್ಯಾಸಗಳ ದೀಪಗಳನ್ನು ಅಳವಡಿಸಿ. ಇದರಿಂದ ಕೋಣೆಯ ಸೌಂದರ್ಯ ವೃದ್ಧಿಸುತ್ತದೆ. 

ಕಲಾತ್ಮಕವಾಗಿರಲಿ
ಯಾವುದೇ ಕಲಾಕೃತಿ, ವಿಶೇಷ ವಿನ್ಯಾಸಗಳಿಲ್ಲದ ಖಾಲಿ ಕೋಣೆಗಳು ನೋಡಲು ಆಷರ್ಕಕವಾಗಿರುವುದಿಲ್ಲ ಅಲ್ಲದೆ ಅಲ್ಲಿ ಕುಳಿತುಕೊಳ್ಳುವುದ ಕೂಡ ಬೋರಿಂಗ್‌. ಆದ್ದರಿಂದ ಕಲಾತ್ಮಕ ವಸ್ತುಗಳನ್ನು ಮತ್ತು ನಿಮ್ಮಿಷ್ಟದ ವರ್ಣಚಿತ್ರಗಳನ್ನು ಅಳವಡಿಸುವುದು ಉತ್ತಮ. ಅವುಗಳನ್ನು ಜೋಡಿಸಿಡುವ ವಿಧಾನವು ಕಲಾತ್ಮಕವಾಗಿದ್ದರೆ ಇನ್ನೂ ಸುಂದರ.

ಗಣೇಶ ಕುಳಮರ್ವ

Advertisement

Udayavani is now on Telegram. Click here to join our channel and stay updated with the latest news.

Next