Advertisement
1979ರಲ್ಲಿ ನಾಗರಾಜರಾವ್ ಅವರು ಸುಜಾತ ಹೆಸರಿನ ಹೋಟೆಲ್ ಆರಂಭಿಸಿದ್ದರು. ಆಂಧ್ರದ ಬಡಿಕಾಯನಪಲ್ಲಿ ಇವರ ಮೂಲ ಸ್ಥಳ. ಇವರ ತಂದೆ ಸೀತರಾಮಯ್ಯ ಬಂಗಾರಪೇಟೆ ತಾಲೂಕಿನ ಹುದುಕುಲ ಸಮೀಪದ ವಟ್ರಾಕುಂಟೆಯ ಗೌರಮ್ಮ ಅವರನ್ನು ಮದುವೆಯಾಗಿ ಇಲ್ಲಿಯೇ ನೆಲೆಸಿದ್ದರು. ಸೀತಾರಾಮಯ್ಯ ಹುದುಕುಲ ರೈಲ್ವೆ ನಿಲ್ದಾಣದ ಬಳಿ ಪುಟ್ಟದಾದ ಹೋಟೆಲ್ ಮಾಡಿಕೊಂಡು ಇಡ್ಲಿ, ವಡೆ, ಚಿತ್ರಾನ್ನ ಹೀಗೆ ಎರಡು ಮೂರು ಬಗೆಯ ತಿಂಡಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇವರಿಗೆ ನಾಲ್ವರು ಪುತ್ರರು, ಪುತ್ರಿ ಇದ್ದು, ಇವರಲ್ಲಿ ಸುಜಾತ ಹೋಟೆಲ್ ಮಾಲೀಕ ನಾಗರಾಜರಾವ್ ಕೂಡ ಒಬ್ಬರು.
Related Articles
ಹೋಟೆಲ್‌ನ ಜವಾಬ್ದಾರಿ ವಹಿಸಿಕೊಂಡ ನಂತರ ಎನ್.ಸೀತಾರಾಮ, 10 ವರ್ಷ ನಾಮಫಲಕವಿಲ್ಲದೇ ನಡೆಯುತ್ತಿದ್ದ ಸುಜಾತ ಹೋಟೆಲ್‌ಗೆ “ನ್ಯೂ’ ಅನ್ನು ಸೇರಿಸಿದ್ದಾರೆ. ಆದ್ರೆ, ಕಟ್ಟಡ, ಕುರ್ಚಿ, ಚೇರು, ಅಡುಗೆ ರುಚಿಯನ್ನು ಹಾಗೇ ಉಳಿಸಿಕೊಂಡು ಬರುತ್ತಿದ್ದಾರೆ. ಹೊಸದಾಗಿ ಬರುವ ಗ್ರಾಹಕರಿಗೆ ಗೊತ್ತಾಗಲಿ ಎಂಬ ಕಾರಣಕ್ಕೆ ಹೊಸದಾಗಿ ನೇಮ್ ಬೋರ್ಡ್ ಬರೆಸಿದ್ದೇನೆ ಎನ್ನುತ್ತಾರೆ ಸೀತಾರಾಮ.
Advertisement
ಈಗಲೂ ಬಾಳೆ ಎಲೆ ಬಳಕೆಸಣ್ಣಪುಟ್ಟ ಹೋಟೆಲ್‌ಗಳಲ್ಲೂ ಈಗ ಪ್ಲಾಸ್ಟಿಕ್ ಬಳಕೆ ಮಾಡ್ತಾರೆ. ಆದರೆ, ಸುಜಾತ ನ್ಯೂ ಹೋಟೆಲ್‌ನಲ್ಲಿ ಬಾಳೆ ಎಲೆಯಲ್ಲೇ ಊಟ ಹಾಕ್ತಾರೆ. ಒಮ್ಮೆಗೆ 20 ಜನ ಕೂತು ಊಟ ಮಾಡುತ್ತಾರೆ. ಒಂದು ರೀತಿಯಲ್ಲಿ ಮದುವೆ ಮನೆಯಲ್ಲಿ ಊಟ ಮಾಡಿದ ಅನುಭವ ಆಗುತ್ತದೆ ಎನ್ನುತ್ತಾರೆ ಗ್ರಾಹಕರು. ಮಧ್ಯಾಹ್ನ 1.30ರಿಂದ 3ಗಂಟೆವರೆಗೂ ಗ್ರಾಹಕರು ಕಾದು ನಿಂತು ಊಟ ಮಾಡುತ್ತಾರೆ. — ಭೋಗೇಶ ಆರ್.ಮೇಲುಕುಂಟೆ / ಎಂ.ಸಿ.ಮಂಜುನಾಥ್