Advertisement

Tokottu ಒಳಪೇಟೆ ರಸ್ತೆ ವಿಸ್ತರಣೆಗೆ ವರ್ತಕರು ಸಹಕರಿಸಿ: ಖಾದರ್‌

12:18 PM Jul 30, 2024 | Team Udayavani |

ಉಳ್ಳಾಲ: ತೊಕ್ಕೊಟ್ಟು ಒಳಪೇಟೆ ಮತ್ತು ಜಂಕ್ಷನ್‌ ಉಳ್ಳಾಲ ನಗರದ ಹೃದಯಭಾಗ ಶಾಲಾ ಕಾಲೇಜು ಸೇರಿದಂತೆ ಹಲವು ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುವ ಒಳಪೇಟೆ ರಸ್ತೆ ಅಭಿವೃದ್ಧಿ ಮತ್ತು ವಿಸ್ತರಣೆ ಈಗಾಗಲೇ ನೀಲನಕಾಶೆ ತಯಾರಿಸಿದ್ದು, ಸ್ಥಳೀಯ ಜನಪ್ರತಿನಿಧಿಗಳು, ಸಾರ್ವಜನಿಕರು ಮತ್ತು ವರ್ತಕರೊಂದಿಗೆ ಚರ್ಚಿಸಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಯೋಜನೆಯಡಿ ರಸ್ತೆ ವಿಸ್ತರಣೆಗೆ ಚಾಲನೆ ನೀಡಲಾಗುವುದು ಎಂದು ಮಂಗಳೂರು ಶಾಸಕ, ವಿಧಾನಸಭಾ ಸ್ಪೀಕರ್‌ ಯು.ಟಿ. ಖಾದರ್‌ ತಿಳಿಸಿದರು.

Advertisement

ಅವರು ತೊಕ್ಕೊಟ್ಟು ಒಳಪೇಟೆಯಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ವಿವಿಧ ಯೋಜನೆಯಡಿ ರಸ್ತೆ ವಿಸ್ತರಣೆ, ಸುಂದರಗೊಳಿಸಲು ಮತ್ತು ಅಭಿವೃದ್ಧಿ ಕುರಿತು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ನೀಲನಕಾಶೆ ವೀಕ್ಷಿಸಿ ಮಾತನಾಡಿ ಒಳಪೇಟೆಯಲ್ಲಿ ಬೆಳಗ್ಗೆ ಮತ್ತು ಸಂಜೆಯ ಅವಧಿಗೆ ಸಂಚಾರ ಅಸ್ತವ್ಯಸ್ತದಿಂದ ಜನರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ರಸ್ತೆ ವಿಸ್ತರಣೆ ಇಂದಿನ ಆವಶ್ಯಕತೆಗಳಲ್ಲಿ ಒಂದಾಗಿದ್ದು, ಇದರೊಂದಿಗೆ ಜಂಕ್ಷನ ಅಭಿವೃದ್ಧಿ ಮಾಡಲಾಗುವುದು ಎಂದರು.

ವರ್ತಕರೇ ಒತ್ತುವರಿ ತೆರವು ಮಾಡಿ

ಹಲವು ದಶಕಗಳಿಂದ ವ್ಯಾಪಾರ ನಡೆಸುತ್ತಿರುವ ವರ್ತಕರು ತಮ್ಮ ಅಂಗಡಿ ಕಟ್ಟಡಗಳ ಎದುರು ಹೆಚ್ಚುವರಿ ಜಾಗವನ್ನು ಒತ್ತುವರಿ ಮಾಡಿ ವ್ಯಾಪಾರ ನಡೆಸುತ್ತಿದ್ದಾರೆ. ಈವರೆಗೆ ಯಾರು ಕೂಡ ಈ ವಿಚಾರದಲ್ಲಿ ವರ್ತಕರಿಗೆ ಸಮಸ್ಯೆ ಮಾಡಿಲ್ಲ. ಆದರೆ ವಿಸ್ತರಣೆ ಹಿನ್ನೆಲೆಯಲ್ಲಿ ರಸ್ತೆ ಬದಿಯ ಹೆಚ್ಚುವರಿ ಒತ್ತುವರಿಯನ್ನು ವರ್ತಕರೇ ಮುಂದೆ ಬಂದು ತೆರವು ಮಾಡಿ ವಿಸ್ತರಣೆಗೆ ಬೆಂಬಲ ನೀಡಬೇಕು ಎಂದು ಸ್ಪೀಕರ್‌ ಯು.ಟಿ. ಖಾದರ್‌ ಮನವಿ ಮಾಡಿದರು.

ಮುಂದಿನ ಹಲವು ವರುಷಗಳ ಮುಂದಾಲೋಚನೆಯಿಂದ ಒಳಪೇಟೆಯನ್ನು ಅಬಿವೃದ್ಧಿ ನಡೆಸಲು ಯೋಜನೆ ರೂಪಿಸಿದ್ದು, ಹಂತ ಹಂತವಾಗಿ ಈ ಪ್ರದೇಶವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಸ್ಪೀಕರ್‌ ಯು.ಟಿ. ಖಾದರ್‌ ತಿಳಿಸಿದರು.

Advertisement

ಸಹಾಯಕ ಆಯುಕ್ತ ಹರ್ಷವರ್ಧನ್‌, ತಹಶೀಲ್ದಾರ್‌ ಪುಟ್ಟರಾಜು, ಉಳ್ಳಾಲ ತಾಲೂಕು ಕಂದಾಯ ಅಧಿಕಾರಿ ಪ್ರಮೋದ್‌ ಕುಮಾರ್‌, ಮೂಡಾ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್‌, ಆಯುಕ್ತೆ ನೂರ್‌ ಝಹರಾ ಖಾನಂ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಅಕºರ್‌ ಪಾಷಾ ಅಫ್ತಾರ್‌, ಉಳ್ಳಾಲ ನಗರಸಭಾ ಕಮಿಷನರ್‌ ವಾಣಿ ವಿ. ಆಳ್ವ, ಅಭಿಯಂತ ತುಳಸಿದಾಸ್‌, ಕಂದಾಯ ಅಧಿಕಾರಿ ಚಂದ್ರಹಾಸ್‌, ಧಾರ್ಮಿಕ ಪರಿಷತ್‌ ಸದಸ್ಯ ಸುರೇಶ್‌ ಭಟ್ನಗರ, ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಮೇಶ್‌ ಶೆಟ್ಟಿ, ಮಾಜಿ ಅಧ್ಯಕ್ಷ ಈಶ್ವರ ಉಳ್ಳಾಲ, ಮಾಜಿ ಉಪಾಧ್ಯಕ್ಷರಾದ ಆಯೂಬ್‌ ಮಂಚಿಲ, ರಝೀಯಾ ಇಬ್ರಾಹಿಂ, ಕೌನ್ಸಿಲರ್‌ಗಳಾದ ಅಝೀಝ್ ಕೋಡಿ, ಖಲೀಲ್‌ ಇಬ್ರಾಹಿಂ, ರವಿಚಂದ್ರ ಗಟ್ಟಿ, ಅಬ್ದುಲ್‌ ಜಬ್ಟಾರ್‌, ನಾಮನಿರ್ದೇಶಿತ ಸದಸ್ಯರಾದ ರಶೀದ್‌ ಕೋಡಿ, ಚಂದ್ರಹಾಸ, ರವಿ ಗಾಂಧಿನಗರ, ಕಿಶೋರ್‌ ತೊಕ್ಕೊಟ್ಟು, ಮನ್ಸೂರು ಮಂಚಿಲ, ರಾಜಾ ಬಂಡಸಾಲೆ, ವಿಶಾಲ್‌ ಕೊಲ್ಯ ಮತ್ತಿತರರು ಉಪಸ್ಥಿತರಿದ್ದರು.

ರೈಲ್ವೇ ಕ್ರಾಸ್‌ ರೈಲ್ವೇ ಸಚಿವರಿಗೆ ಮನವಿ

ಉಳ್ಳಾಲ ಒಳಪೇಟೆಯಲ್ಲಿ ವಾಹನ ದಟ್ಟಣೆಗೆ ರೈಲ್ವೇ ಹಳಿ ಬಳಿ ತಡೆ ಬೇಲಿ ಹಾಕಿರುವುದು ಒಂದು ಕಾರಣವಾಗಿದ್ದು, ಇಲ್ಲಿ ಅನೇಕ ಅವಘಡಗಳು ಸಂಭವಿಸಿದ್ದರಿಂದ ರೈಲ್ವೇ ಇಲಾಖೆ ಕಾನೂನು ಬದ್ಧವಾಗಿ ತಡೆ ಬೇಲಿ ಹಾಕಿದೆ. ಪ್ರತೀ ದಿನ ಸಂಚರಿಸುವ ಸಾರ್ವಜನಿಕರ ಉಪಯೋಗಕ್ಕಾಗಿ ಫೂಟ್‌ ಬ್ರಿಡ್ಜ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೈಲ್ವೇ ಸಚಿವ ಸೋಮಣ್ಣ ಅವರಿಗೆ ಮನವಿ ಮಾಡಿದ್ದು, ಈ ವಿಚಾರದಲ್ಲಿ ಸಂಸದ ಕ್ಯಾ| ಬ್ರಿಜೇಶ್‌ ಚೌಟ ಅವರೊಂದಿಗೆ ಚರ್ಚಿಸಿ ಶಾಶ್ವತ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪೀಕರ್‌ ಯು.ಟಿ. ಖಾದರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next