Advertisement

ರೈತರಿಂದ ಟ್ರ್ಯಾಕ್ಟರ್‌ ಜನತಾ ಪರೇಡ್‌

04:57 PM Jan 27, 2021 | Nagendra Trasi |

ಆಳಂದ: ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ದೆಹಲಿಯಲ್ಲಿ ರೈತರು ನಡೆಸಿದ ಸತ್ಯಾಗ್ರಹಕ್ಕೆ ಬೆಂಬಲಿಸಿ ಪಟ್ಟಣದಲ್ಲಿ ಕಿಸಾನ್‌ ಸಂಘರ್ಷ ಸಮನ್ವಯ ಸಮಿತಿ ವತಿಯಿಂದ ಪಟ್ಟಣದಲ್ಲಿ ಟ್ರ್ಯಾಕ್ಟರ್‌ ಮೂಲಕ ಜನತಾ ಪರೇಡ್‌ ನಡೆಸಲಾಯಿತು.

Advertisement

ಪಟ್ಟಣದ ತಹಶೀಲ್ದಾರ್‌ ಕಚೇರಿಯಿಂದ ಆರಂಭಗೊಂಡ ಟ್ರ್ಯಾಕ್ಟರ್‌ ನಿಂದ ಜನತಾ ಪರೇಡ್‌ಅನ್ನು ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ತಹಸೀಲ್‌ ಹತ್ತಿರದ ಸತ್ಯಾಗ್ರಹ ಸ್ಥಳಕ್ಕೆ ತಲುಪಿದ ಮುಖಂಡರು ಮಾತನಾಡಿ, ರೈತರಿಗೆ ಬೇಡವಾದ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಕೇಂದ್ರ ಸರ್ಕಾರ ರೈತರ ವಿರೋಧಿ  ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಮುಖಂಡ ಮೌಲಾ ಮುಲ್ಲಾ, ರಮೇಶ ಲೋಹಾರ, ಸುಧಾಮ ಧನ್ನಿ, ಪಾಂಡುರಂಗ ಮಾವೀನಕರ್‌, ಪ್ರಕಾಶ  ಜಾನೆ, ಶಂಕಕರಾವ್‌ ದೇಶಮುಖ, ದಲಿತ ಸೇನೆ ಅಧ್ಯಕ್ಷ ಧರ್ಮಾ ಬಂಗರಗಾ, ಚಂದ್ರಕಾಂತ ಖೋಬ್ರೆ, ಆಶ್ಪಾಕ್‌ ಮುಲ್ಲಾ, ಫಕ್ರೋದ್ದೀನ್‌ ಗೋಳಾ ಇದ್ದರು.

ವಾಡಿಯಲ್ಲಿ ಡಿಎಸ್‌ಎಸ್‌ ನಿರಶನ ವಾಡಿ: ಗಣರಾಜ್ಯೋತ್ಸವದಂದು ದೇಶಾದ್ಯಂತ ಹೊಸ ಕೃಷಿ ನೀತಿಗಳನ್ನು ಖಂಡಿಸಿ ನಡೆದ ರೈತರ ಐತಿಹಾಸಿಕ ಚಳವಳಿ ಬೆಂಬಲಿಸಿ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪಟ್ಟಣದ ಅಂಬೇಡ್ಕರ್‌ ವೃತ್ತದಲ್ಲಿ ಜಮಾಯಿಸಿದ್ದ ದಸಂಸ ಮುಖಂಡರು, ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ನಂತರ ಕೃಷಿ ಮಸೂದೆಗಳ ವಿರುದ್ಧ ಭಿತ್ತಿಪತ್ರ ಪ್ರದರ್ಶಿಸಿದರು.ಕೇಂದ್ರ ಬಿಜೆಪಿ ಸರಕಾರದ ವಿರುದ್ಧ  ಧಿಕ್ಕಾರ ಕೂಗಿದ ಪ್ರತಿಭಟನಾಕಾರರು, ಮೂರು ಮರಣ ಶಾಸನಗಳು ಯಾವೂದೇ ಕಾರಣಕ್ಕೂ ಜಾರಿಗೆ
ಬರಬಾರದು ಎಂದು ಆಗ್ರಹಿಸಿದರು.

Advertisement

ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಶ್ರವಣಕುಮಾರ ಮೊಸಲಗಿ ಮಾತನಾಡಿ, ಸಂಸತ್ತಿನಲ್ಲಿ ಮಂಡಿಸಲಾದ ರೈತ ವಿರೋಧಿ  ಮೂರು ಕರಾಳ ಕಾಯ್ದೆಗಳ ಕುರಿತು ಪ್ರಜಾತಾಂತ್ರಿಕವಾಗಿ ಚರ್ಚೆಯಾಗದೆ ಏಕಾಏಕಿ ಜಾರಿಗೆ ತರಲು ಹಟತೊಟ್ಟಿರುವ ಬಿಜೆಪಿ ಸರಕಾರ ರೈತರ ಗೋರಿ ಕಟ್ಟಲು ಮುಂದಾಗಿದೆ ಎಂದು ಆರೋಪಿಸಿದರು. ಡಿಎಸ್‌ಎಸ್‌ ಮುಖಂಡರಾದ ರಾಘುವೀರ ಪವಾರ, ಉದಯಕುಮಾರ ಯಾದಗಿರಿ, ಹೋರಾಟವನ್ನು ಬೆಂಬಲಿಸಿ ಪಾಲ್ಗೊಂಡಿದ್ದ
ಕಾಂಗ್ರೆಸ್‌ ಮುಖಂಡರಾದ ಟೋಪಣ್ಣ ಕೋಮಟೆ, ದೇವಿಂದ್ರ ಕರದಳ್ಳಿ, ಚಂದ್ರಸೇನ ಮೇನಗಾರ, ಝರೀನಾಬೇಗಂ, ಮಹ್ಮದ್‌ ಗೌಸ್‌, ನಾಗೇಂದ್ರ
ಜೈಗಂಗಾ, ರಾಜಾ ಪಟೇಲ, ವಿಜಯಕುಮಾರ ಸಿಂಗೆ, ತಿಮ್ಮಯ್ಯ ಪವಾರ, ಬಶೀರ ಖುರೇಶಿ, ಮಲ್ಲಯ್ಯ ಗುತ್ತೇದಾರ, ಮರಗಪ್ಪ ಕಲಕುಟಗಿ, ಅಶ್ರಫ್‌ ಖಾನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next