Advertisement
ವರ್ಚುವಲ್ ಮೀಟ್‌ನಲ್ಲಿ ಮಾತನಾಡಿದ ಪ್ರಧಾನಿ, ಕೋವಿಡ್ -19 ಬಿಕ್ಕಟ್ಟಿನ ಎರಡನೇ ಅಲೆಯನ್ನು ನಿವಾರಿಸುವ ಏಕೈಕ ಮಾರ್ಗವೆಂದರೆ ಟೆಸ್ಟ್, ಟ್ರ್ಯಾಕ್, ಮತ್ತು ಟ್ರೀಟ್ ಮಹತ್ವವನ್ನು ಒತ್ತಿ ಹೇಳಿದರು.
Related Articles
Advertisement
ಕೋವಿಡ್ 19 ಪ್ರಕರಣಗಳು ದಾಖಲೆಯ ಗರಿಷ್ಠ ಮಟ್ಟಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ವೆಂಟಿಲೇಟರ್ ಗಳು, ಆಮ್ಲಜನಕ ಮತ್ತು ಔಷಧಿಗಳ ಲಭ್ಯತೆ ಮತ್ತು ಪೂರೈಕೆಯನ್ನು ನಿಭಾಯಿಸುವ ಸಿದ್ಧತೆಯನ್ನು ಶನಿವಾರ ಪ್ರಧಾನಿ ಪರಿಶೀಲಿಸಿದ್ದಾರೆ.
ಒಗ್ಗಟ್ಟಿನಿಂದ ಭಾರತವು ಕಳೆದ ವರ್ಷ ಕೋವಿಡ್ 19 ನನ್ನು ಸೋಲಿಸುವಲ್ಲಿ ಯಶಸ್ವಿಯಾಗಿತ್ತು ಮತ್ತು ಭಾರತವು ಮತ್ತೆ ಅದೇ ತತ್ವಗಳೊಂದಿಗೆ ಕಾರ್ಯ ನಿರ್ವಹಿಸಬೇಕಿದೆ. “ಎಂದು ಅವರು ಹೇಳಿದ್ದಾರೆ.
‘ಟೆಸ್ಟ್, ಟ್ರ್ಯಾಕಿಂಗ್ ಮತ್ತು ಟ್ರೀಟ್’ಗೆ ಪರ್ಯಾಯ ವ್ಯವಸ್ಥೆ ಇಲ್ಲ ಮತ್ತು ಆರಂಭಿಕ ಪರೀಕ್ಷೆ ಮತ್ತು ಸರಿಯಾದ ಟ್ರ್ಯಾಕಿಂಗ್ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಪ್ರಮುಖ ಪಾತ್ರವಹಿಸಲಿದೆ ಎಂದು ಪಿಎಂ ಮೋದಿ ತಮ್ಮ ಹೇಳಿಕೆಯನ್ನು ಪ್ರಧಾನಿ ಪುನರುಚ್ಚರಿಸಿದ್ದಾರೆ.
ಇನ್ನು, ವರ್ಚುವಲ್ ಮೀಟಿಂಗ್ ನಲ್ಲಿ ಪ್ರಸ್ತಾಪಿಸಿದ ವಿಷಯವನ್ನು ಮೋದಿ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.