Advertisement
ಬಾರೆತ್ಯಾರು ನಿವಾಸಿ ಸುಜಾನಂದ ರೈ ಅವರ ಭೂಮಿಯಲ್ಲಿ ಈ ಕುರುಹು ಗಳಿದ್ದು, ಸುತ್ತಲೂ ಪೊದೆಗಳಿರು ವುದರಿಂದ ಮೇಲ್ನೋಟಕ್ಕೆ ಯಾವುದೂ ಕಾಣದಿದ್ದರೂ ಪೊದೆಗಳನ್ನು ಸರಿಸಿ ನೋಡಿದಾಗ ಆಶ್ಚರ್ಯಕರ ರೀತಿಯ ನಿರ್ಮಾಣಗಳು ಗೋಚ ರಿಸುತ್ತವೆ. ಕಳೆದ ಹಲವು ಸಮಯಗಳ ಹಿಂದೆ ಇಂತಹ ಕುರುಹು ಪತ್ತೆಯಾಗಿದ್ದು, ಸ್ಥಳೀಯವಾಗಿ ಯಾವುದೇ ಕ್ಷೇತ್ರದಲ್ಲಿ ಪ್ರಶ್ನೆ ಇಟ್ಟರೂ ಶಿಥಿಲಾವಸ್ಥೆಯಲ್ಲಿರುವ ಈ ದೇಗುಲ ಕುರಿತು ಪ್ರಸ್ತಾವ ಆಗಿಯೇ ಆಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.
ಕುರುಹುಗಳು ಪತ್ತೆಯಾದ ಸ್ಥಳ ದಲ್ಲಿ ಶತಮಾನಗಳ ಹಿನ್ನೆಲೆಯನ್ನು ಸಾದರಪಡಿಸುವ ಅಗಲವಾದ ಮುರಕಲ್ಲಿನಿಂದ ಕಟ್ಟಲಾದ ಪಂಚಾಂಗ ಗಳ ಕಲ್ಲುಗಳು ಪೊದೆಯ ಮಧ್ಯ ಭಾಗದಲ್ಲಿ ಅಲ್ಲಿಲ್ಲಿ ಕಾಣಿಸುತ್ತಿವೆ. ಜತೆಗೆ ಅಲ್ಲೇ ಪಕ್ಕದಲ್ಲಿ ಬಾವಿಯೊಂದಿದ್ದು, ಗಿಡಗಂಟಿಗಳ ಮಧ್ಯೆ ಇರುವ ಬಾವಿ ಈಗಲೂ ಸುಸ್ಥಿತಿಯಲ್ಲಿದೆ. ಸುಜಾನಂದ ರೈ ಅವರ ಮನೆ ಸಮೀಪ ಹಲವು ಚಪ್ಪಡಿ ಕಲ್ಲುಗಳಿದ್ದು, ಅವೆಲ್ಲವೂ ದೇಗುಲದ ಕಿಟಕಿ ದಾರಂದಗಳಾಗಿರುವ ಸಾಧ್ಯತೆಯ ಕುರಿತು ಅಭಿಪ್ರಾಯಿಸಲಾಗುತ್ತಿದೆ.
Related Articles
Advertisement
ಕುರುಹುಗಳ ಕುರಿತು ಪ್ರಶ್ನಾಚಿಂತನೆ ಇಡಲು ನಾವು ಶಕ್ತರಾಗಿಲ್ಲ, ಆ ಜಾಗದಲ್ಲಿ ದೇವಾಲಯ ನಿರ್ಮಾಣವಾಗಬೇಕು ಎಂದು ದೇವರು ಬಯಸಿದರೆ ಆ ಜಾಗ ದೇವರಿಗೆ ಸೇರಲಿ. ಪ್ರಸ್ತುತ ಸಾಕಷ್ಟು ಮಂದಿ ಇಲ್ಲಿಗೆ ಆಗಮಿಸಿ ಕುರುಹುಗಳನ್ನು ವೀಕ್ಷಿಸಿ ಪ್ರಾರ್ಥನೆ ಸಲ್ಲಿಸಿ ತೆರಳುತ್ತಿದ್ದಾರೆ.– ಸುಜಾನಂದ ರೈ, ಕುರುಹು ಪತ್ತೆಯಾಗಿರುವ ಜಾಗದ ಮಾಲಕ