Advertisement

ಟಾಟಾಗೆ ಸಿಕ್ಕಿತು ಭರ್ಜರಿ ಹೂಡಿಕೆ

12:26 AM Oct 14, 2021 | Team Udayavani |

ಮುಂಬಯಿ: ಟಾಟಾ ಮೋಟಾರ್ ಸಂಸ್ಥೆಯ ಎಲೆಕ್ಟ್ರಿಕ್‌ ವಾಹನಗಳ ಉದ್ಯಮಕ್ಕೆ ಅಮೆರಿಕ ಮತ್ತು ಅಬುದಾಬಿಯ ಖಾಸಗಿ ಈಕ್ವಿಟಿ ಸಂಸ್ಥೆಗಳಾದ ಟಿಪಿಜಿ ಮತ್ತು ಎಡಿಕ್ಯೂ 7,500 ಕೋಟಿ ರೂ.  ಹೂಡಿಕೆ ಮಾಡಲಿವೆ.

Advertisement

ಹೂಡಿಕೆಗೆ ಬದಲಾಗಿ ಟಾಟಾ ಸಂಸ್ಥೆಯು ಎಲೆಕ್ಟ್ರಿಕ್‌ ವಾಹನಗಳ ಶೇ.11ರಿಂದ ಶೇ.15 ಷೇರನ್ನು ಈ ಸಂಸ್ಥೆಗಳಿಗೆ ಕೊಡಲಿದೆ. ಅಮೆರಿಕದ ಟಿಪಿಜಿ ಸಂಸ್ಥೆಯು ಮುಂದಿನ ಮಾರ್ಚ್‌ ಒಳಗೆ ಅರ್ಧ ಹೂಡಿಕೆ ಮಾಡಲಿದ್ದು, ಇನ್ನರ್ಧವನ್ನು ಮುಂದಿನ ಡಿಸೆಂಬರ್‌ನೊಳಗೆ ಹೂಡಿಕೆ ಮಾಡಲಿದೆ.

ಈ ಹಣವನ್ನು ಟಾಟಾ ಸಂಸ್ಥೆಯು ದೇಶದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಸಂಖ್ಯೆ ಹೆಚ್ಚಿಸಲು ಹಾಗೂ ಚಾರ್ಜಿಂಗ್‌ ಕೇಂದ್ರ ಮತ್ತು ಬ್ಯಾಟರಿಗಳ ಅಭಿವೃದ್ಧಿಗಾಗಿ ಬಳಸಲಿದೆ.

ಹೂಡಿಕೆ ವಿಚಾರ ಹೊರಬೀಳುತ್ತಿದ್ದಂತೆ ಬಿಎಸ್‌ಇನಲ್ಲಿ ಟಾಟಾ ಮೋಟರ್ಸ್‌ ಷೇರುಗಳ ಬೆಲೆ ಶೇ.20 ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next