Advertisement

ನಾಡಿನ ಒಳಿತಿಗಾಗಿ ಗೊಂಬೆಗಳ ಮದುವೆ 

06:00 AM Jun 18, 2018 | Team Udayavani |

ಹುಬ್ಬಳ್ಳಿ: ಇಲ್ಲಿನ ಬಾಣಿ ಓಣಿಯ ಶ್ರೀ ಶಕ್ತಿ ದೇವಸ್ಥಾನದಲ್ಲಿ ಭಾನುವಾರ ಮಂಗಳ ವಾದ್ಯ ಮೊಳಗಿತು. ಮಧ್ಯಾಹ್ನ 12:15ಕ್ಕೆ. 

Advertisement

ಸೇರಿದವರು ನೂತನ ದಂಪತಿಗೆ ಶುಭ ಕೋರಿದರು. ತಮ್ಮ ಮಗ ಅಥವಾ ಮಗಳ ಮದುವೆ ಎನ್ನುವಂತೆ ಎಲ್ಲರೂ ಸಂಭ್ರಮಪಟ್ಟರು. ಇಷ್ಟಕ್ಕೂ ಅಲ್ಲಿ ಆಗಿದ್ದು ಗೊಂಬೆಗಳ ಮದುವೆ.

ನಾಡು ಹಾಗೂ ಓಣಿಯ ಒಳಿತಿಗೆ, ಸಮೃದ್ಧ ಮಳೆ-ಬೆಳೆಗಾಗಿ ಈ ಗೊಂಬೆಗಳ ಮದುವೆ ಮಾಡಲಾಗಿದ್ದು, ನಮ್ಮ
ಪೂರ್ವಜರ ಸಂಸ್ಕೃತಿ-ಸಂಪ್ರದಾಯ ನೆನಪಿಸುವಂತಿತ್ತು.

ಶನಿವಾರ ಸಂಜೆ ಗೊಂಬೆಗಳನ್ನು ಮೆರವಣಿಗೆ ಮೂಲಕ ಮಂಟಪಕ್ಕೆ ತರುವ ಮೂಲಕ ನಿಶ್ಚಿತಾರ್ಥ ನಡೆಸಲಾಗಿತ್ತು.
ಭಾನುವಾರ ಬೆಳಗ್ಗೆ ಅರಿಷಿಣ ಕಾರ್ಯಕ್ರಮ, ಸುರಗಿ ಕಾರ್ಯಕ್ರಮ ಮುಗಿಸಿ, ಮಾಂಗಲ್ಯ ಧಾರಣೆ ನಡೆಸಲಾಯಿತು. ಗೋಪನಕೊಪ್ಪದ ಸಿದ್ದೇಶ್ವರ ದೇವಸ್ಥಾನದ ಶ್ರೀ ಶಿವಬಸಯ್ಯ ಶಾಸಿOಉಗಳು ಮದುವೆ ಶಾಸOಉ ನಡೆಸಿಕೊಟ್ಟರು.ಸುಮಾರು ಎರಡು ಸಾವಿರಕ್ಕೂ ಅಧಿಕ ಜನರು ಮದುವೆ ಸಮಾರಂಭದಲ್ಲಿ ಭಾಗಿಯಾಗಿ ಭೋಜನ ಸವಿದರು.

Advertisement

Udayavani is now on Telegram. Click here to join our channel and stay updated with the latest news.

Next