ಸಂಪೂರ್ಣ ಎಥೆನಾಲ್ ಇಂಧನದಿಂದ ಕಾರ್ಯನಿರ್ವಹಿಸುವ ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ ಕಾರು ಮಂಗಳವಾರ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಎಲೆಕ್ಟ್ರಿಫೈಯಡ್ ಫ್ಲೆಕ್ಸ್-ಪ್ಯುಯೆಲ್ ಇನ್ನೋವಾ ವಿಶ್ವದ ಮೊದಲ ಬಿಎಸ್-6 (ಭಾರತ್ ಸ್ಟೇಜ್ 6) ಕಾರು ಆಗಿದೆ. ಜತೆಗೆ ಇ100 ಅಂದರೆ ಶೇ.100ರಷ್ಟು ಎಥೆನಾಲ್ ಇಂಧನದಿಂದ ಕಾರ್ಯಚಲಿಸುವ ಸಾಮರ್ಥಯ ಹೊಂದಿದೆ. ಇದೇ ವೇಳೆ ಕಾರು ಲಿಥಿಯಮ್-ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಇವಿ (ಎಲೆಕ್ಟ್ರಿಕ್ ವೆಹಿಕಲ್) ಮೋಡ್‌ನಲ್ಲಿ ಕೂಡ ಕಾರ್ಯಚಲಿಸಲಿದೆ.
2.0 ಲೀಟರ್ ಎಂಜಿನ್ ಅನ್ನು ಇನ್ನೋವಾ ಎಂಪಿವಿ ಹೊಂದಿದೆ. ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಕಾರನ್ನು ಅನಾವರಣಗೊಳಿಸಿದರು ಎಂದು ಇನ್ನೋವಾ ಮೋಟಾರ್ ತಿಳಿಸಿದೆ.
– ಸಂಪೂರ್ಣ ಎಥೆನಾಲ್ ಇಂಧನದಿಂದ ಕಾರ್ಯಾಚಲಿಸಲಿದೆ.
– ಲಿಥಿಯಮ್-ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದೆ.