ರಾಮನಗರ: ಕೋವಿಡ್ ಸೋಂಕು ನಿವಾರಣೆಗೆ ಆರೋಗ್ಯ ಕ್ಷೇತ್ರಕ್ಕೆ ಸಹಕಾರ ನೀಡುವುದನ್ನು ಮುಂದುವರಿಸಿರುವ ಬಿಡದಿ ಕೈಗಾರಿಕೆ ಪ್ರದೇಶದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್, 45 ಥರ್ಮಲ್‌ಸ್ಕ್ಯಾನರ್ ಮತ್ತು 45,000 ಹ್ಯಾಂಡ್ ಸ್ಯಾನಿಟೈಸರ್ ಬಾಟಲ್ ಸೇರಿದಂತೆ ವಿವಿಧ ಸೌಲಭ್ಯಗಳ ಕೊಡುಗೆ ನೀಡಿದೆ.
ಮಾನವನ ದೇಹದ ತಾಪಮಾನ ಪತ್ತೆಗೆ 45 ಥರ್ಮಲ್ ಸ್ಕ್ಯಾನರ್ ಕೊಡುಗೆ ನೀಡಿದ್ದು, ಬೆಂಗಳೂರು ಪೊಲೀಸರಿಗೆ 20 ಮತ್ತು ಕ್ವಾರೆಂಟೈನ್ ಆಸ್ಪತ್ರೆಗಳಿಗೆ 25 ಥರ್ಮಲ್ ಸ್ಕ್ಯಾನರ್ ಹಂಚಿಕೆಯಾಗಿವೆ. ಕೊರೊನಾ ಸೋಂಕಿನಿಂದ ನಾಗರಿಕರನ್ನು ರಕ್ಷಿಸುವ ಸಲುವಾಗಿ ಬಿಡದಿ ಪಟ್ಟಣದಲ್ಲಿ ಕ್ರಿಮಿನಾಶಕಕ್ಕಾಗಿ ಟಿಕೆಎಂ ಬಿಡದಿ ಪುರಸಭೆಗೆ 10 ಫ್ಯೂಮಿಗೇಶನ್ ಉಪಕರಣ ನೀಡಿದೆ ಎಂದು ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ನ ವಿದೇಶಾಂಗ ವ್ಯವಹಾರ, ಸಾರ್ವಜನಿಕ ಸಂಪರ್ಕ, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಮತ್ತು ಕಾರ್ಪೊರೇಟ್ ಆಡಳಿತದ ಹಿರಿಯ ಉಪಾಧ್ಯಕ್ಷ ವಿಕ್ರಂ ಗುಲಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅದಲ್ಲದೆ ತಮ್ಮ ಸಂಸ್ಥೆ ಇಲ್ಲಿಯರವರೆಗೆ 45,000 ಹ್ಯಾಂಡ್ ಸ್ಯಾನಿಟೈಸರ್, ಆಸ್ಪತ್ರೆಗಳಿಗೆ 100 ಹಾಸಿಗೆಗಳು, 100 ರೋಗಿಗಳಿಗಾಗುವಷ್ಟು ಆರೋಗ್ಯ ನಿರ್ವಹಣೆ ಯೋಗ್ಯ ವಸ್ತುಗಳು, 20 ಸೆಟ್ ಐ ಸ್ಟಾಂಡ್ ಮತ್ತು ಬಿಪಿ ಮಾನಿಟರ್ ಮತ್ತು 12,000 ಪರೀಕ್ಷೆ ಕೈಗವಸುಗಳು, 70,000 ಥ್ರಿ ಫ್ಲೆ ಫೇಸ್ ಮಾಸ್ಕ್, 7500 ಎನ್-95 ಮಾಸ್ಕ್ಗಳನ್ನು ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗಿದೆ. ಕೋವಿಡ್ ವಾರಿಯರ್ ಆರೋಗ್ಯ ರಕ್ಷಣೆಗೆ ಸಕಲ ನೆರವು ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2 ಕೋಟಿ ರೂ. ಮೊತ್ತ ಮತ್ತು 3,000 ಹಜ್ಮತ್ ಸೂಟ್‌ಗಳನ್ನು ಕರ್ನಾಟಕ ಸರ್ಕಾರದ ಆರೋಗ್ಯ ಸ್ವಯಂ ಸೇವಕರಿಗೆ ನೀಡಿದೆ. ರಾಮನಗರ ಜಿಲ್ಲೆಯಲ್ಲಿ ಕಾರ್ಮಿಕರಿಗೆ ವಿತರಿಸಲು 3,500 ಆಹಾರ ಕಿಟ್‌ಗಳನ್ನು ಕೊಡುಗೆ ನೀಡಲಾಗಿದೆ. 14 ಬಸ್‌ಗಳನ್ನು ಆರೋಗ್ಯ ಸೇವೆಗೆಂದು ಮೀಸಲಿರಿಸಿದೆ. ಕೊರೊನಾ ವಿರುದ್ಧದ ಈ ಯುದ್ಧದಲ್ಲಿ ಮುಂಚೂಣಿಯಲ್ಲಿ ರುವ ಆರೋಗ್ಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಸೇರಿದಂತೆ
ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಶ್ಲಾಘಿಸಿದೆ ಎಂದು ವಿಕ್ರಂ ಗುಲಾಟಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.