Advertisement

ಆಟಿಕೆ ಸ್ಕೂಟರಿನಲ್ಲಿ ಆಸ್ಪತ್ರೆಗೆ ಬಂದ!

03:50 AM Mar 18, 2017 | Team Udayavani |

ಹೈದರಾಬಾದ್‌: ಕೆಲವು ತಿಂಗಳ ಹಿಂದೆ ಒರಿಸ್ಸಾದಲ್ಲಿ ಪತ್ನಿಯ ಶವ ಹೊತ್ತು 10 ಕಿ.ಮೀ. ನಡೆದ ಪತಿಯ ಕಣ್ಣೀರ ಯಾತ್ರೆ­ಯನ್ನು ದೇಶ ಇನ್ನೂ ಮರೆತಿಲ್ಲ. ಅಷ್ಟರಲ್ಲಾ­ಗಲೇ ತೆಲಂಗಾಣದ ಪ್ರತಿಷ್ಠಿತ ಗಾಂಧಿ ಆಸ್ಪತ್ರೆಯಲ್ಲಿನ ಘಟನೆಯೊಂದು ಆಸ್ಪತ್ರೆಗಳ ಅಮಾನವೀಯ ಮುಖದ ದರ್ಶನ ಮಾಡಿಸಿದೆ. ವೀಲ್‌ಚೇರ್‌ಗೆ ಲಂಚ ನೀಡಲು ಹಣವಿಲ್ಲದೆ, ಮಗನ ಆಟದ ಸ್ಕೂಟರ್‌ನಲ್ಲಿ ಅಪ್ಪ ವೈದ್ಯರ ಕೊಠಡಿ ತಲುಪಿದ್ದಾನೆ!

Advertisement

33 ವರ್ಷದ ರಾಜು ಕಳೆದವರ್ಷದ ಆಗಸ್ಟ್‌­ನಲ್ಲಿ ಅಪಘಾತಕ್ಕೀಡಾಗಿ ತಲೆಗೆ, ಕಾಲಿಗೆ ಪೆಟ್ಟುಮಾಡಿಕೊಂಡಿದ್ದರು. ಎರಡು ತಿಂಗಳು ಆಸ್ಪತ್ರೆಯಲ್ಲಿ ದಾಖಲಾಗಿ, ಬಿಡು­ಗಡೆಯಾಗಿದ್ದ ಅವರು ತಲೆಯ ಸರ್ಜರಿಗಾಗಿ ಇನ್ನೂ ಕಾಯುತ್ತಲೇ ಇದ್ದಾರೆ. “4-5 ಪ್ಯಾಕೆಟ್‌ ರಕ್ತ ಹೊಂದಿಸುವ ತನಕ ಸರ್ಜರಿ ಮಾಡು­ವುದಿಲ್ಲ’ ಎಂದು ವೈದ್ಯರು ಹೇಳುತ್ತಿದ್ದಾರೆ. ಪ್ರತಿಸಲ ಆಸ್ಪತ್ರೆಗೆ ಬಂದಾಗಲೂ ವೀಲ್‌ಚೇರ್‌ಗೆ 150 ರೂ. ಲಂಚ ನೀಡಬೇಕಾಗಿತ್ತು.

ಆದರೆ, ಕಳೆದ 2-3 ಸಲದಿಂದ ಆಸ್ಪತ್ರೆಗೆ ಬರುತ್ತಿರುವ ರಾಜು ಬಳಿ ಲಂಚ ನೀಡಲು ಹಣವೇ ಇರುತ್ತಿರಲಿಲ್ಲ. ಮಗನ ಆಟಿಕೆಯ ಸ್ಕೂಟರ್‌ ಬಳಸಿ, ಆಸ್ಪತ್ರೆ ತಲುಪುತ್ತಿದ್ದಾರೆ.  “ಬಡ ಕುಟುಂಬ ನಮ್ಮದು. ಪ್ರತಿಸಲ ಆಸ್ಪತ್ರೆಗೆ ಬಂದಾಗಲೂ ಹೇಳಿದಷ್ಟು ರಕ್ತ ಪೂರೈಸಿ, ಆಸ್ಪತ್ರೆಯಲ್ಲಿ ಬೆಡ್‌ ಇಲ್ಲ ಎನ್ನುತ್ತಿದ್ದಾರೆ. ಹಳ್ಳಿ ಜನ ನಾವು. ಹೈದರಾಬಾದಿನಲ್ಲಿ ಯಾರೂ ಪರಿಚಯವಿಲ್ಲ’ ಎನ್ನುವುದು ರಾಜು ಪತ್ನಿಯ ಪ್ರಶ್ನೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಲೇ ಸಿಎಂ ಕೆ. ಚಂದ್ರಶೇಖರ ರಾವ್‌ ಈ ಕುರಿತು ತನಿಖೆ ನಡೆಸುವ ವಾಗ್ಧಾನ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next