Advertisement

Toxic: ಯಶ್ ಸಿನಿಮಾದಿಂದ ಹೊರಹೋದ ಕರೀನಾ ಕಪೂರ್?

05:45 PM May 03, 2024 | Team Udayavani |

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಿರುವ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಚಿತ್ರ ‘ಟಾಕ್ಸಿಕ್’ ನಿಂದ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅವರು ಹೊರ ಹೋಗಿದ್ದಾರೆ ಎಂದು ವರದಿಯಾಗಿದೆ.

Advertisement

ಆಕ್ಷನ್-ಪ್ಯಾಕ್ಡ್ ಥ್ರಿಲ್ಲರ್ ಇತ್ತೀಚೆಗೆ ಬೆಂಗಳೂರಿನಲ್ಲಿ ಚಿತ್ರೀಕರಣ ಪ್ರಾರಂಭಿಸಿದ್ದು, ಟಾಕ್ಸಿಕ್‌ ನಲ್ಲಿ ಯಶ್ ಅವರ ನಾಯಕಿ ಯಾರು ಎನ್ನುವುದನ್ನ ಚಿತ್ರ ತಂಡ ಇನ್ನೂ ಅಧಿಕೃತವಾಗಿ ಘೋಷಿಸದಿದ್ದರೂ, ಕಿಯಾರಾ ಅಡ್ವಾಣಿ ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರೆ ಎಂದು ಊಹಿಸಲಾಗಿದೆ.

ಚಿತ್ರದಲ್ಲಿ ಯಶ್ ಅವರ ಸಹೋದರಿಯ ಪಾತ್ರಕ್ಕೆ ಕರೀನಾ ಕಪೂರ್ ಖಾನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಈಗ ಬೆಬೋ ಚಿತ್ರದ ಭಾಗವಾಗಿಲ್ಲ ಎಂದು ಕೇಳಿ ಬಂದಿದೆ. ‘ಟಾಕ್ಸಿಕ್’ ಬಲವಾದ ಒಡಹುಟ್ಟಿದ ಸಂಬಂಧ ತೋರುವ ಕಥಾ ಹಂದರ ಹೊಂದಿದ್ದು ಸಹೋದರಿಯ ಪಾತ್ರ, ನಿರೂಪಣೆಗೆ ಬಹಳ ನಿರ್ಣಾಯಕವಾಗಿದ್ದು, ದೊಡ್ಡ ಮಟ್ಟದ ತಾರೆಯಿಂದ ಆ ಪಾತ್ರ ಮಾಡಿಸುವ ಇರಾದೆ ಚಿತ್ರ ತಂಡದ್ದಾಗಿತ್ತು.

ಗೀತು ಮೋಹನ್‌ದಾಸ್ ನಿರ್ದೇಶನದ, ‘ಟಾಕ್ಸಿಕ್’ ಚಿತ್ರವನ್ನು ಡಿಸೆಂಬರ್ 8, 2023 ರಂದು ಅಧಿಕೃತವಾಗಿ ಘೋಷಿಸಲಾಗಿತ್ತು.ಇತ್ತೀಚಿನ ಪಿಂಕ್ ವಿಲ್ಲಾ ವರದಿ ಪ್ರಕಾರ ಡೇಟ್ ಹೊಂದಾಣಿಕೆ ಕಾರಣದಿಂದಾಗಿ ನಿರೀಕ್ಷಿತ ಯೋಜನೆಯಿಂದ ಕರೀನಾ ಹೊರ ಹೋಗಿದ್ದಾರೆ. ಯಶ್ ಅವರ ಡೇಟ್ ನೊಂದಿಗೆ ಹೊಂದಿಕೆಯಾಗದ ನಂತರ ಚಿತ್ರ ತಂಡದಿಂದ ಸೌಹಾರ್ದಯುತವಾಗಿ ದೂರವಾಗಿದ್ದಾರೆ” ಎಂದು ಹೇಳಲಾಗಿದೆ. ಕರೀನಾ ಅವರ ಬದಲಿಗೆ ಸ್ಟಾರ್ ನಟಿಯರನ್ನು ಕರೆತರಲು ಚಿತ್ರ ತಂಡ ಮುಂದಾಗಿದೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next