Advertisement
ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌ನ ಶಿವಲಿಂಗೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೆಟ್ರೋ ಮಾರ್ಗದಲ್ಲಿ ಸರ್ಕಾರದ ಜಾಗ ಇರುವ ಕಡೆ ಟೌನ್‌ಶಿಫ್ ನಿರ್ಮಿಸಿ ನಗರದಲ್ಲಿನ ವಸತಿ ಬೇಡಿಕೆ ತಗ್ಗಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ಹೇಳಿದರು.
Related Articles
Advertisement
ಬಿಡಿಎ ವತಿಯಿಂದ ವಿವಿಧೆಡೆ ನಿರ್ಮಿಸಿರುವ 3512 ಪ್ಲ್ರಾಟ್ ಹಾಗೂ ವಿಲ್ಲಾಗಳ ಹಂಚಿಕೆಗೆ ಅರ್ಜಿ ಕರೆಯಲಾಗಿದ್ದು, 839 ಅರ್ಜಿ ಸಲ್ಲಿಕೆಯಾಗಿವೆ. ಅಲ್ಲದೆ, ಪ್ರಾಧಿಕಾರದ ವತಿಯಿಂದ ವಿವಿಧ ಸ್ಥಳಗಳಲ್ಲಿ ವಿವಿಧ ಮಾದರಿಯ 7809 ಪ್ಲಾಟ್‌ಗಳು/ವಿಲ್ಲಾಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತದೆ. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಈಗಾಗಲೇ ವಿವಿಧ ಅಳತೆಯ 5000 ನಿವೇಶನಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗಿದೆ. ಇನ್ನೂ 5000 ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಶಿವಲಿಂಗೇಗೌಡ, ಬೆಂಗಳೂರಿಗೆ ರಾಜ್ಯದ ವಿವಿಧ ಭಾಗಗಳಿಂದ ಬಡವರು ಉದ್ಯೋಗ ಅರಸಿ ಬಂದು ನೆಲೆಸುತ್ತಿದ್ದಾರೆ. ಆದರೆ, ಅವರು ಜೀವನವಿಡೀ ಬಾಡಿಗೆ ಕಟ್ಟುತ್ತಲೇ ಇರುತ್ತಾರೆ. ಅಂತವರಿಗೆ ಕೈಗೆಟಕುವ ದರದಲ್ಲಿ ವಸತಿ ಸಂಕೀರ್ಣ ನಿರ್ಮಿಸಿ ಕೊಡಿ ಎಂದು ಮನವಿ ಮಾಡಿದರು.
ಮೆಟ್ರೋಗೆ ಶೀಘ್ರ ಹೆಚ್ಚುವರಿ ಬೋಗಿ ಅಳವಡಿಕೆವಿಧಾನಸಭೆ: ಮೆಟ್ರೋ ಪ್ರಯಾಣಿಕರ ಸಂಖ್ಯೆ ಗಮನಿಸಿ ಒತ್ತಡ ತಗ್ಗಿಸಲು ಹೆಚ್ಚುವರಿ ಬೋಗಿ ಅಳವಡಿಕೆ ಮಾಡಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಸುರೇಶ್‌ಕುಮಾರ್ ಪ್ರಶ್ನೆಗೆ ಉತ್ತರಿಸಿದ ಅವರು, “ನಾವು ಈಗಾಗಲೇ ಬೆಮೆಲ್ ಸಂಸ್ಥೆಗೆ ಬೋಗಿ ಪೂರೈಕೆಗೆ 1400 ಕೋಟಿ ರೂ. ಪಾವತಿಸಿದ್ದು ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ಬೋಗಿ ಪೂರೈಕೆಯಾಗಲಿದೆ,’ ಎಂದು ಹೇಳಿದರು. “ಪ್ರಸ್ತುತ 6 ನಿಮಿಷಕ್ಕೊಂದು ಹಾಗೂ ಒತ್ತಡದ ಸಂದರ್ಭದಲ್ಲಿ 3 ನಿಮಿಷಕ್ಕೊಂದು ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದನ್ನು 2 ನಿಮಿಷಕ್ಕೆ ಇಳಿಸಬೇಕೆಂಬ ಬೇಡಿಕೆ ಇದೆ. ಆದರೆ, ಪ್ರಯಾಣಿಕರ ಸಂಖ್ಯೆ ಗಮನಿಸಿ ಆ ಬಗ್ಗೆ ಕ್ರಮ ಕೈಗೊಳ್ಳಲಾಗವುದು,’ ಎಂದು ತಿಳಿಸಿದರು. ದೆಹಲಿ ಮೆಟ್ರೋದಲ್ಲಿ ದರ ಕಡಿಮೆ ಇರುವ ಬಗ್ಗೆ ಸುರೇಶ್‌ಕುಮಾರ್ ಪ್ರಸ್ತಾಪಿಸಿದಾಗ, “ಆ ಬಗ್ಗೆ ಮಾಹಿತಿ ಪಡೆದುಕೊಂಡು ಪರಿಶೀಲಿಸಲಾಗುವುದು. ಆದರೆ, ಮೆಟ್ರೋ ಯೋಜನೆಗಾಗಿ ನಾವು ಖಾಸಗಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಿದ್ದೇವೆ. ಹೀಗಾಗಿ, ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪ್ರಯಾಣಿಕರಿಗೂ ಹೊರೆಯಾಗದಂತೆ ದರ ನಿಗದಿಪಡಿಸಲಾಗಿದೆ,’ ಎಂದು ಹೇಳಿದರು. ಮೆಟ್ರೋ ನಿಲ್ದಾಣಗಳಲ್ಲಿ ಕೆಲವೆಡೆ ನೀರು ಜಿನುಗುತ್ತಿರುವ ಪ್ರಕರಣಗಳ ಬಗ್ಗೆಯೂ ಗಮನ ಹರಿಸಲಾಗಿದ್ದು ಅದನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದರು.