Advertisement

ಯರಮರಸ್‌ ಬೈಪಾಸ್‌ನಲ್ಲಿ ಟೌನ್‌ಶಿಪ್‌ ನಿರ್ಮಾಣ

05:12 PM Jan 11, 2021 | Team Udayavani |

ರಾಯಚೂರು: ಸಮೀಪದ ಯರಮರಸ್‌ ಬೈಪಾಸ್‌ನಲ್ಲಿ ಹೊಸ ಟೌನ್‌ಶಿಪ್‌ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಸ್ಥಳೀಯ ಶಾಸಕ ಡಾ| ಶಿವರಾಜ ಪಾಟೀಲ್‌ ತಿಳಿಸಿದರು.

Advertisement

ನಗರದ ಬಿಜೆಪಿ ಕಚೇರಿಯಲ್ಲಿ ಕರೆದ ಮಾಧ್ಯಮಗೋಷ್ಠಿ ಉದ್ದೇಶಿಸಿ ರವಿವಾರ ಮಾತನಾಡಿದ ಅವರು, ರಾಷ್ಟ್ರೀಯ ರಾಜೀವ್‌ಗಾಂಧಿ ವಸತಿಯ ಜಿಪ್ಲೆಸ್‌ ಟ್ಯೂ ಯೋಜನೆಯಡಿ ಈ ಟೌನ್‌ಶಿಪ್‌ ಯೋಜನೆ ಜಾರಿಗೊಳಿಸುತ್ತಿದ್ದು, ಅದಕ್ಕಾಗಿ 43 ಎಕರೆ ಪ್ರದೇಶವನ್ನು ಇಲಾಖೆಗೆ ನೀಡಲಾಗಿದೆ. ಇದರಲ್ಲಿ 2,740
ಮನೆಗಳನ್ನು ನಿರ್ಮಿಸುತ್ತಿದ್ದು, ಅದಕ್ಕಾಗಿ ಸಾಮಾನ್ಯ ಜನರಿಂದ 4 ಲಕ್ಷ ಹಾಗೂ ಎಸ್ಸಿ-ಎಸ್ಟಿಯಿಂದ 2.50 ಲಕ್ಷ ರೂ. ಕಂತಿನ ಮೂಲಕ ಪಡೆಯಲು ಸಹ ಅವಕಾಶ
ಕಲ್ಪಿಸಲಾಗಿದೆ. ಈ ಟೌನ್‌ಶಿಪ್‌ನಲ್ಲಿ ಆಸ್ಪತ್ರೆ, ರಸ್ತೆ, ಕುಡಿವ ನೀರು, ಯುಜಿಡಿ, ಬೀದಿದೀಪ, ದೇವಸ್ಥಾನ ಸೇರಿ ಅಗತ್ಯ ಸವಲತ್ತು ಒದಗಿಸಲಾಗುವುದು ಎಂದು ಹೇಳಿದರು.

ಇನ್ನು ನಗರದಲ್ಲಿರುವ ಎಲ್ಲ 42 ಸ್ಲಂ ಬಡಾವಣೆಗಳ ನಿವಾಸಿಗಳಿಗೆ ಶೀಘ್ರದಲ್ಲಿಯೇ ಹಕ್ಕು ಪತ್ರ ವಿತರಿಸಲಾಗುವುದು. ಈಗಾಗಲೇ ಸ್ಲಂ ಬೋರ್ಡಿನಿಂದ 2,700 ಮನೆಗಳನ್ನು ಮಂಜೂರು ಮಾಡಲಾಗಿದೆ. ಸ್ಲಂ ಘೋಷಣೆಯಾದ ಬಡಾವಣೆಗಳಲ್ಲಿರುವ ಸ್ಥಳ ಕಂದಾಯ, ನಗರಸಭೆ ಸೇರಿದ್ದರೆ ಅವರಿಂದ ಸ್ಲಂ ಬೋಡ್‌
ಗೆ ಹಸ್ತಾಂತರಿಸಿ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲಾಗುವುದು. ಇಂತಹ ಕಾರ್ಯಕ್ರಮವನ್ನು ರಾಜ್ಯ ಸರ್ಕಾರವು ಮಾಡುತ್ತಿದ್ದು, ಸ್ಲಂ ನಿವಾಸಿಗಳಿಗೆಲ್ಲರಿಗೂ
ಸೂರು ಕಲ್ಪಿಸಿಕೊಡುವ ಉದ್ದೇಶ ಹೊಂದಲಾಗಿದೆ ಎಂದರು.

ವೈಟಿಪಿಎಸ್‌ ಸಮೀಪ ಏರ್‌ಪೋರ್ಟ್‌ ನಿರ್ಮಾಣಕ್ಕೆ ಕೆಕೆಆರ್‌ಡಿಬಿಯಿಂದ 49 ಕೋಟಿ ರೂ.ಮಂಜೂರಾಗಿದೆ. ಕೆಲಸ ಆರಂಭಕ್ಕೆ ಅನುಮತಿಯು ಸಿಕ್ಕಿದೆ. ಇನ್ನು ಆರ್‌ ಡಿಎಯಿಂದ 10 ಕೋಟಿ ವೆಚ್ಚದಲ್ಲಿ ಮಾವಿನ ಕೆರೆ ಸಮಗ್ರ ಅಭಿವೃದ್ಧಿ ಮಾಡಲಾಗುತ್ತಿದೆ. ಈಗಾಗಲೇ ನಗರದ 35 ವಾರ್ಡ್‌ಗಳಲ್ಲಿ ಬಹುತೇಕ ಎಲ್ಲಕಡೆ ರಸ್ತೆ
ಅಭಿವೃದ್ಧಿಗೆ ಭೂಮಿಪೂಜೆ ನೆರವೇರಿಸಿದ್ದು, ಕೆಲಸವೂ ಆರಂಭಗೊಂಡಿದೆ ಇನ್ನು 13 ವಾರ್ಡ್‌ಗಳಲ್ಲಿ ಕೆಲಸ ಆರಂಭಿಸಬೇಕಿದೆ.

ನಗರದಲ್ಲಿ ನಡೆಯುತ್ತಿರುವ ಯುಜಿಡಿ ಮತ್ತು ನಿರಂತರ ಕುಡಿವ ನೀರು ಪೂರೈಕೆ ಯೋಜನೆ ಹಂತ ಹಂತವಾಗಿ ಪೂರ್ಣಗೊಳ್ಳುತ್ತಿದ್ದು, ಮುಂದಿನ ಮಾರ್ಚ್‌ ವೇಳೆಗೆ 12 ಜೋನ್‌ಗಳಿಗೆ ನೀರು ಒದಗಿಸಿಕೊಡುವ ನಿಟ್ಟಿನಲ್ಲಿ ಕೆಲಸ ನಡೆಸಲಾಗುತ್ತಿದೆ. ನಗರದ ಹೊರವಲಯದಲ್ಲಿ ರಿಂಗ್‌ ರಸ್ತೆ ನಿರ್ಮಾಣ ವಿಚಾರವಾಗಿ ಸಿಎಂ ಮುಂದಿನ ದಿನಗಳಲ್ಲಿ ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ ಇದರೊಂದಿಗೆ  ರಾಜ್ಯ ಸರ್ಕಾರ 5ಎ ನಾಲೆ ಜಾರಿಗೊಳಿಸಲು ಸೂಕ್ತ ಕ್ರಮ ಜರುಗಿಸುತ್ತಿದೆ. ಏತ ನೀರಾವರಿ ಯೋಜನೆಯಿಂದ ನೀರನ್ನು ಪಡೆದು ರೈತರಿಗೆ ಕಾಳುವೆ ಮೂಲಕ ನೀರು ಒದಗಿಸುವುದರ ಕುರಿತು ಚರ್ಚೆ ನಡೆಸಿದ್ದು ಇದರ ಬಗ್ಗೆ ಅಧಿಕಾರಿಗಳು ವರದಿ ತಯಾರಿಸುತ್ತಿದ್ದಾರೆ. ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ 25 ಕೋಟಿ ರೂ. ನೀಡಿದ್ದು, ಅದರ ಹಂಚಿಕೆಯನ್ನು ಇಷ್ಟರಲ್ಲಿಯೇ ಮಾಡಲಾಗುವುದು.
ಇನ್ನು ನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳ ಚಾಲನೆಗೆ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next