Advertisement

ನ್ಯಾಯಾಲಯದ ಮೆಟ್ಟಿಲೇರಿದ ಪಟ್ಟಣ ಪಂಚಾಯಿತಿ ಮೀಸಲಾತಿ

04:04 PM Oct 18, 2020 | Suhan S |

ಹೊನ್ನಾವರ: ಬಿಜೆಪಿ ಅಭ್ಯರ್ಥಿಗಳು, ಬೆಂಬಲಿಗರು ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಜಯಗಳಿಸಿದ್ದರೂ ಮೀಸಲಾತಿ ಪ್ರಕಟವಾದ ಮೇಲೆ ಕೆಲವು ಅತೃಪ್ತ ಇದನ್ನುಪ್ರಶ್ನಿಸಿ ಉಚ್ಚ ನ್ಯಾಯಾಲದ ಮೆಟ್ಟಿಲೇರಿದ್ದಾರೆ.

Advertisement

ಸೋಮವಾರ, ಮಂಗಳವಾರದವರೆಗೆ ವಿಚಾರಣೆಗೆ ಬರಬಹುದಾಗಿದ್ದು ಈ ಮಧ್ಯೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆಅ.22 ನಿಗದಿಪಡಿಸಿ ಚುನಾವಣಾಧಿಕಾರಿ ತಹಶೀಲ್ದಾರ್‌ ವಿವೇಕ ಶೇಣ್ವಿ ನೋಟಿಸ್‌ ಮುಟ್ಟಿಸಿದ್ದಾರೆ. ಚುನಾವಣಾ ದಿನಾಂಕ ನಿಗದಿಯಾದ ಕಾರಣ ನ್ಯಾಯಾಲಯ ತಡೆಯಾಜ್ಞೆ ಕೊಡದಿದ್ದರೆ ಮೀಸಲಾತಿಯಂತೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ. ತಡೆಯಾಜ್ಞೆ ಕೊಟ್ಟರೆ ಒಂದೂವರೆವರ್ಷದ ನಂತರ ನಡೆಯಬೇಕಾಗಿದ್ದ ಆಯ್ಕೆ ಇನ್ನಷ್ಟು ವಿಳಂಬವಾಗಲಿದೆ.

ರಿಕ್ಷಾ ಯೂನಿಯನ್‌ ಅಧ್ಯಕ್ಷರೂ, ಮದ್ಯವರ್ಜನ ಸಂಘಟನೆಸದಸ್ಯರೂ ಆಗಿರುವ ಶಿವರಾಜ ಮೇಸ್ತ ತಮ್ಮ ನೇತೃತ್ವದಸಂಘಟನೆಗಳನ್ನು ತೃಪ್ತಿಕರವಾಗಿ ನಡೆಸಿದ್ದಾರೆ. ಇವರ ಕುರಿತು ಸಾರ್ವಜನಿಕರಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಇನ್ನೊಬ್ಬಆಕಾಂಕ್ಷಿ ವಿಜಯ್‌ ಕಾಮತ್‌ ಆಗಿದ್ದರು, ಮೀಸಲಾತಿಯಿಂದ ಇವರಿಗೆ ಅವಕಾಶ ತಪ್ಪಿದೆ. ಪಕ್ಷೇತರವಾಗಿ ಆಯ್ಕೆಯಾದಇವರ ಅತ್ತೆ ತಾರಾ ಕುಮಾರಸ್ವಾಮಿ ನ್ಯಾಯಾಲಯಕ್ಕೆಹೋಗಿದ್ದಾರೆ. ಅಂದ ಮೇಲೆ ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಹೇಳಬೇಕಾಗಿಲ್ಲ.

ಒಂದು ಪಕ್ಷದ ಬಹುಮತ ಬಂದು ಮೀಸಲಾತಿಯನ್ನು ಅದೇ ಪಕ್ಷದ ಸರ್ಕಾರ ಪ್ರಕಟಿಸಿದ ಮೇಲೆ ಅದರ ವಿರುದ್ಧ ಸ್ವರ ಎತ್ತುವುದು ಪಕ್ಷವಿರೋಧಿ ಚಟುವಟಿಕೆಯಾಗುತ್ತದೆ. ಶಿಸ್ತಿನ ಪಕ್ಷ ಬಿಜೆಪಿ ಅಧ್ಯಕ್ಷರೂ, ಶಾಸಕರೂ ಇಲ್ಲಿಮೌನವಾಗಿದ್ದಾರೆ. ಮೀಸಲಾತಿ ಬರುವ ಮೊದಲು ಪೈಪೋಟಿ ಸರಿ. ಬಂದ ಮೇಲೆ ಆ ಪ್ರಕಾರ ವಿಪ್‌ ಹೊರಡಿಸಬೇಕಾದದ್ದು ಪಕ್ಷದ ಕರ್ತವ್ಯವಾಗಿತ್ತು. ಈ ಒಳರಾಜಕೀಯವನ್ನುಹಿಂದುಳಿದ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ತಪ್ಪಿಸುವ ಪಿತೂರಿ ಇದೆ ಎಂದು ಶಿವರಾಜ ಮೇಸ್ತ ಬಹಿರಂಗ ಹೇಳಿಕೆ ನೀಡಿದ್ದಾರೆ.

ದಿ|ಡಾ| ವಿಕೆಬಿ ಬಳಕೂರ, ಡಾ| ಎಂ.ಪಿ. ಕರ್ಕಿ, ಹಿರಿಯನ್ಯಾಯವಾದಿ ದಿನಕರ ಕಾಮತ ಮೊದಲಾದವರು ಪಪಂಅಧ್ಯಕ್ಷರಾಗಿದ್ದಾಗ ರಾಜ್ಯದಲ್ಲಿ ಹೊನ್ನಾವರಕ್ಕೆ ಒಳ್ಳೆಯ ಹೆಸರಿತ್ತು. ಇವರ ಕಾಲದ ಸಭೆಗಳಲ್ಲಿ ಭಾಗವಹಿಸುತ್ತಿರುವವರು ಹೇಳುವಂತೆ ಜಗಳ, ವಿವಾದ ಇರಲಿಲ್ಲ, ಎಲ್ಲಿ ಯಾವ ಕೆಲಸ ಆಗಬೇಕು, ಒಟ್ಟಾಗಿ ಮಾಡಿಸುತ್ತಿದ್ದರು. ಭ್ರಷ್ಟಾಚಾರದ ವಾಸನೆಯೂ ಇರಲಿಲ್ಲ. ಒಂದೂವರೆ ದಶಕಗಳಿಂದ ಪಕ್ಷ, ಜಾತಿ, ರಾಜಕೀಯ ಮಾತ್ರವಲ್ಲ ಪಕ್ಷದೊಳಗೇ ಒಳಜಗಳ, ಪರ್ಸಂಟೇಜ್‌ ರಾಜಕೀಯ ಗುಂಪುಗಾರಿಕೆಯಿಂದ ಪಪಂ ರಣಾಂಗಣವಾಗಿ ಅಬ್ಬರದಲ್ಲೇ ಕಳೆದು ಹೋಗುತ್ತಿತ್ತು. ಪತ್ರಕರ್ತರು ಹೋದ ಕೂಡಲೇ ಸದಸ್ಯರೂ ಎದ್ದುನಡೆಯುತ್ತಿದ್ದರು. ಠರಾವು ಬರೆಯುವವರೆಗೆ ಇರುವ ಸಹನೆ ಇರಲಿಲ್ಲ. ನಂತರ ಮೀಟಿಂಗ್‌ನಲ್ಲಿ ಹಿಂದಿನ ಮೀಟಿಂಗ್‌ ಠರಾವು ಓದಿ ಹೇಳುವಾಗಲೇ ಗದ್ದಲ ಆರಂಭವಾಗುತ್ತಿತ್ತು. ಮುಖ್ಯಾಧಿಕಾರಿಗಳನ್ನು ಕೈಗೊಂಬೆ ಮಾಡಿಕೊಂಡು ಅಥವಾ ಹೆದರಿಸಿ ಪ.ಪಂ ಆಡಳಿತನಡೆಸಲಾಗುತ್ತಿತ್ತು. ನಗರ ನಾರಿದರೂ, ಸಂಚಾರ ದಿಕ್ಕೆಟ್ಟರೂ ಮೂಲಭೂತ ಸೌಲಭ್ಯದ ಕೊರತೆಯಿದ್ದರೂ ಕೇಳುವವರಿರಲಿಲ್ಲ.

Advertisement

ಈ ಕೆಟ್ಟ ಸಂಪ್ರದಾಯವನ್ನು ಮೀರಿಸುವಂತೆ ಅಧ್ಯಕ್ಷರ ಆಯ್ಕೆ ಮೀಸಲಾತಿ ನೆಪದಲ್ಲಿ ಒಳಜಗಳ ತಾರಕಕ್ಕೇರಿದೆ. ತೀರ್ಪು ಏನೇ ಬಂದರೂ ಹೊರಗೆ ನಡೆಯುತ್ತಿರುವ ಒಳಜಗಳ ಸಭಾಂಗಣಕ್ಕೂ ಬರಲಿದೆ. ಈಗಲೇ ಹೀಗಾದರೆ ಇವರು ಏನು ಮಾಡಬಹುದು ಎಂದು ಜನ ಪ್ರಶ್ನಿಸುತ್ತಿದ್ದಾರೆ.

 

-ಜೀಯು, ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next