Advertisement

ಐಫೋನ್‌ನಲ್ಲಿ ಪಟ್ಟಣ

11:58 AM May 22, 2017 | |

ಹೊಸಬರು ಹೊಸ ಪ್ರಯೋಗ ಮಾಡುತ್ತಲೇ ಇರುತ್ತಾರೆ. ಈಗ “ಈ ಪಟ್ಟಣಕ್ಕೆ ಏನಾಗಿದೆ’ ಚಿತ್ರತಂಡ ಕೂಡಾ ಅಂತಹ ಒಂದು ಪ್ರಯೋಗಕ್ಕೆ ಮುಂದಾಗಿದೆ. ಅದು ಐಫೋನ್‌ನಲ್ಲಿ ಇಡೀ ಸಿನಿಮಾವನ್ನು ಚಿತ್ರೀಕರಿಸುವ ಮೂಲಕ. ಕ್ರಿಕೆಟ್‌ ಬೆಟ್ಟಿಂಗ್‌ ಮಾಫಿಯಾವನ್ನೇ ಕೇಂದ್ರವಾಗಿಟ್ಟುಕೊಂಡು, ಅದರ ಸುತ್ತ ಕಥೆ ಹೆಣೆದಿರುವ ಈ ಚಿತ್ರವನ್ನು  ಆ್ಯಪಲ್‌ ಐಫೋನ್‌ 7+ ಬಳಸಿ ಚಿತ್ರೀಕರಿಸಲಾಗುತ್ತಿದೆ.

Advertisement

ಈ ಮೂಲಕ ಹೊಸ ಪ್ರಯೋಗ ಮಾಡುತ್ತಿದೆ ಚಿತ್ರತಂಡ. ಯಾವ ಕ್ಯಾಮೆರಾದಲ್ಲಿ ಶೂಟ್‌ ಮಾಡುತ್ತೀವಿ ಅನ್ನೋದಕ್ಕಿಂದ ಯಾವ ರೀತಿಯ ಕಂಟೆಂಟ್‌ ಕೊಡುತ್ತೀವಿ ಅನ್ನೋದು ಮುಖ್ಯ. ಕಥೆಯಲ್ಲಿ ಶಕ್ತಿ ಇದ್ದರೆ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತದೆ. ಇಷ್ಟಕ್ಕೂ ಇದು ಡಿಜಿಟಲ್‌ ಯುಗ. ಮೇಲಾಗಿ ಈ ಸಿನಿಮಾ ಬಹುತೇಕ ರಗಡ್‌ ಆಗಿರುವ ಸ್ಥಳಗಳಲ್ಲಿ, ಕ್ಯಾಂಡಿಡ್‌ ಆಗಿ ಚಿತ್ರೀಕರಣಗೊಳ್ಳಲಿದೆ. ಹಾಗಾಗಿ ಈ ಹೊಸ ಟೆಕ್ನಿಕ್‌ ಅನ್ನು ಬಳಸುತ್ತಿದ್ದೇವೆ ಎನ್ನುವುದು ಚಿತ್ರತಂಡ ಮಾತು.

ರವಿ ಸುಬ್ಬರಾವ್‌ ಅವರೇ ಕತೆ, ನಿರ್ಮಾಣ, ನಿರ್ದೇಶನದ ಜೊತೆಗೆ ನಾಯಕನಟನಾಗಿ ಕೂಡಾ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿಯರಾಗಿ ಡಿಂಪಿ ಫಾದ್ಯ ಖಾನ್‌ ಮತ್ತು ಸಂಧ್ಯಾ ವೇಣು ಪಾತ್ರ ನಿರ್ವಹಿಸಲಿದ್ದಾರೆ. ಪ್ರಮೋದ್‌ ಭಾರತೀಯ ಛಾಯಾಗ್ರಹಣ, ಕ್ರೇಜಿಮೈಂಡ್ಸ್‌ ಶ್ರೀ ಸಂಕಲನ, ಮ್ಯಾರಿಯೋ ಸಂಗೀತ ಈ ಚಿತ್ರಕ್ಕಿದೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next