Advertisement

ವಾಹನ ಬಿಡಿಸಿಕೊಳ್ಳಲು ಅಂಗಲಾಚಿದ ಸವಾರ: ಕರುಣೆ ತೋರದ ಟೋಯಿಂಗ್ ಸಿಬ್ಬಂದಿ; ವಿಡಿಯೋ ವೈರಲ್‌

12:37 PM Jan 30, 2022 | Team Udayavani |

ಬೆಂಗಳೂರು: ನಗರದಲ್ಲಿ ಸಂಚಾರ ವಿಭಾಗದ ಟೋಯಿಂಗ್‌ ಸಿಬ್ಬಂದಿಯ ಮತ್ತೂಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಈ ಕುರಿತ ವಿಡಿಯೋವೊಂದು ವೈರಲ್‌ ಆಗಿದ್ದು, ಸಂಚಾರ ಪೊಲೀಸರು ಹಾಗೂ ಟೋಯಿಂಗ್‌ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಇಂದಿರಾನಗರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಆನ್‌ಲೈನ್‌ ವಸ್ತುಗಳನ್ನು ಡೆಲಿವರಿ ಮಾಡುವ ಯುವಕನೊಬ್ಬ ತನ್ನ ವಾಹನ ನಿಲ್ಲಿಸಿ ವಸ್ತುಗಳನ್ನು ಕೊಡಲು ಹೋಗಿದ್ದರು. ವಾಪಸ್‌ ಬಂದಾಗ ಟೋಯಿಂಗ್‌ ಸಿಬ್ಬಂದಿ ದ್ವಿಚಕ್ರ ವಾಹನವನ್ನು ತಮ್ಮ ವಾಹನಕ್ಕೆ ತುಂಬಿಕೊಂಡಿದ್ದಾರೆ. ಅದನ್ನು ಕಂಡ ಆತ ಕೂಡಲೇ ವಾಹನ ಹಿಡಿದುಕೊಂಡು ನಿಲ್ಲಿಸುವಂತೆ ಗೋಳಾಡಿದ್ದಾನೆ. ಆದರೂ ಟೋಯಿಂಗ್‌ ಸಿಬ್ಬಂದಿ ವಾಹನ ನಿಲ್ಲಿಸಿಲ್ಲ. ವಾಹನ ಸವಾರ ವಾಹನ ಬಿಡಿಸಿಕೊಳ್ಳಲು ಓಡುತ್ತಿರುವ ದೃಶ್ಯ ಸಂಚಾರ ಪೊಲೀಸರ ಅಮಾನವೀಯ ವರ್ತನೆಗೆ ಸಾಕ್ಷಿಯಾಗಿದೆ. ಈ ವಿಡಿಯೋ ವೈರಲ್‌ ಆಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟೋಯಿಂಗ್‌ ರೌಡಿಗಳು ಎಂದು ನಮೂದಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟೋಯಿಂಗ್‌ಸಿಬ್ಬಂದಿ ಕಾರ್ಯವೈಖರಿ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದರೂ, ಟೋಯಿಂಗ್‌ ನಿಯಮವನ್ನು ಸಿಬ್ಬಂದಿ ಪಾಲಿಸುತ್ತಿಲ್ಲ. ಗಾಡಿ ತೆಗೆದುಕೊಳ್ಳುವ ಮೊದಲು ಧ್ವನಿವರ್ಧಕದಮೂಲಕ ಅನೌನ್ಸ್‌ ಮಾಡಬೇಕು. ಐದಾರು ನಿಮಿಷದವರೆಗೆ ಮಾಲೀಕ ಬಾರದಿದ್ದರೆಟೋಯಿಂಗ್‌ ಮಾಡಬೇಕು. ಆದರೆ, ಈಗಲೂ ಧ್ವನಿವರ್ಧಕದ ಮೂಲಕ ಅನೌನ್ಸ್‌ ಮಾಡದೆ ದ್ವಿಚಕ್ರ ವಾಹನಗಳನ್ನು ಟೋಯಿಂಗ್‌ ಮಾಡಲಾಗುತ್ತಿದೆ ಎಂದು ಬೇಸರ ಹೊರ ಹಾಕಿದ್ದಾರೆ.

ಮಹಿಳೆ ಮೇಲೆ ದೌರ್ಜನ್ಯ :

ಬೆಂಗಳೂರು: ಟೋಯಿಂಗ್‌ ವಿಚಾರವಾಗಿ ಜಗಳ ನಡೆದಿದ್ದು, ಪೊಲೀಸ್‌ಗೆ ಅಂಗವಿಕಲ ಮಹಿಳೆಯೊಬ್ಬರು ಕಲ್ಲಿನಿಂದ ಹೊಡೆದಿದ್ದಾರೆ. ಸಿಟ್ಟಾಹಲಸೂರು ಗೇಟ್‌ ಸಂಚಾರ ಠಾಣೆ ಎಎಸ್‌ಐ ನಾರಾಯಣ, ಅಂಗವಿಕಲ ಮಹಿಳೆಗೆ ಬೂಟುಗಾಲಿನಿಂದ ಒದ್ದಿದ್ದಾರೆ.

Advertisement

ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಜ. 24ರಂದು ನಡೆದಿರುವ ಈ ಘಟನೆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಎಎಸ್‌ಐ ವರ್ತನೆಗೆ ಆಕ್ರೋಶ ವ್ಯಕ್ತವಾಗಿದ್ದು,ಅವರನ್ನು ಅಮಾನತು ಮಾಡುವಂತೆ ಜನ ಒತ್ತಾಯಿಸುತ್ತಿದ್ದಾರೆ. ಟೋಯಿಂಗ್‌ ಪ್ರಶ್ನಿಸಿದ ಮಹಿಳೆಯನ್ನು ಎಳೆದಾಡಿ ಬೂಟುಗಾಲಿನಿಂದ ಒದ್ದಿದ್ದಾರೆ.

ನಂತರ, ಮಹಿಳೆಯನ್ನು ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿದ ಆರೋಪದಡಿ ಮಹಿಳೆಯನ್ನು ಬಂಧಿಸಿದ್ದಾರೆ. ಮಹಿಳೆ ಮೇಲಿನ ಹಲ್ಲೆ ದೃಶ್ಯವನ್ನುಹಂಚಿಕೊಂಡಿರುವ ಸಾರ್ವಜನಿಕರು ಎಎಸ್‌ಐ ಅಮಾನತಿಗೆ ಆಗ್ರಹಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next