Advertisement

ಕುತುಬ್‌ ಮೀರಿಸುವ ತ್ಯಾಜ್ಯ

06:00 AM Sep 01, 2018 | Team Udayavani |

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ 73 ಮೀಟರ್‌ ಎತ್ತರವಿರುವ ಐತಿಹಾಸಿಕ ಕುತುಬ್‌ ಮಿನಾರ್‌ ಅನ್ನು ಮೀರಿಸುವ ಆಕೃತಿ ಏನಾದರೂ ಇದೆಯೇ? ಖಂಡಿತಾ ಇದೆ. ಅದೇನೆಂದರೆ, ದೆಹಲಿ ಹೊರವಲಯದ ಗಾಜಿಪುರದಲ್ಲಿರುವ ಕಸದ ರಾಶಿ. ಅದೀಗ 65 ಮೀಟರ್‌ ಎತ್ತರಕ್ಕೆ ಏರಿದೆ. ಈ ಕಸದ ಪ್ರಮಾಣ ಇನ್ನು ಎಂಟು ಮೀಟರ್‌ಗಳಷ್ಟು ಎತ್ತರಕ್ಕೇರಿದರೆ ಐತಿಹಾಸಿಕ ಕಟ್ಟಡದ ಎತ್ತರಕ್ಕೆ ಸರಿಸಮನಾಗುತ್ತದೆ.

Advertisement

ಅಂದ ಹಾಗೆ ಪೂರ್ವ ದೆಹಲಿ ಮುನಿಸಿಪಲ್‌ ಕಾರ್ಪೊರೇಷನ್‌ (ಇಡಿಎಂಸಿ)ಬಳಿಯೇ ಕಸದ  ಎತ್ತರದ ಕುರಿತ ಸಾಂಖೀಕ ಮಾಹಿತಿಗಳಿವೆ ಎಂದು “ದ ಹಿಂದುಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ. ಕಳೆದ ವರ್ಷ ಸೆ.1ರಂದು ಗಾಜಿಪುರದ ಕಸದ ರಾಶಿ ಕುಸಿದು ಬಿದ್ದು, ಇಬ್ಬರು ಅಸುನೀಗಿದ್ದರು. ಮಾರ್ಚ್‌ನಲ್ಲಿ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂಕೋರ್ಟ್‌, ಗಾಜಿಪುರದಲ್ಲಿನ ಕಸದ ರಾಶಿ ಕುತುಬ್‌ಮಿನಾರ್‌ ಮೀರಿಸುವ ದಿನಗಳು ದೂರವಿಲ್ಲ ಎಂದು ಟೀಕಿಸಿತ್ತು. 

ಪೂರ್ವ ದೆಹಲಿ ವ್ಯಾಪ್ತಿಯಲ್ಲಿ ಉಂಟಾಗು ತ್ತಿರುವ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಬದಲಿ ವ್ಯವಸ್ಥೆ ಇಲ್ಲ. ಜತೆಗೆ ಹಣಕಾಸಿನ ಮುಗ್ಗಟ್ಟೂ ಇದೆ ಎಂದು ಇ.ಡಿ.ಎಂ.ಸಿ. ಪರಿಸರ ನಿರ್ವಹಣಾ ವಿಭಾಗದ ಮುಖ್ಯ ಎಂಜಿನಿಯರ್‌ ಪ್ರದೀಪ್‌ ಖಂಡೇಲ್ವಾಲ್‌ ತಿಳಿಸಿದ್ದಾರೆ. ಗಮನಾರ್ಹ ಅಂಶವೆಂದರೆ, 15 ವರ್ಷಗಳ ಹಿಂದೆಯೇ ಗಾಜಿಪುರಕ್ಕೆ ಕಸ ಸಾಗಣೆ ನಿಷೇಧಿಸಲಾಗಿತ್ತು. ಹೀಗಿದ್ದರೂ, ಪೂರ್ವ ದೆಹಲಿ ವ್ಯಾಪ್ತಿಯ ಶೇ.55-70ರಷ್ಟು ತ್ಯಾಜ್ಯಗಳನ್ನು ಅಲ್ಲಿಗೇ ಸಾಗಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next