ಸಿಂಧನೂರು: ಕೇಂದ್ರ ಸರ್ಕಾರ ಘೋಷಿಸಿರುವ ಬೆಂಬೆಲೆಗಿಂತಲೂ ಕಡಿಮೆ ಬೆಲೆಗೆ ಜೋಳ ಕೇಳುತ್ತಿರುವುದರಿಂದ ನೊಂದ ರೈತರು ಕೊನೆಗೂ ಹೋರಾಟದ ಮಾರ್ಗ ತುಳಿದಿದ್ದಾರೆ. 2021-22ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ನಿಗದಿಪಡಿಸಿದ ಪ್ರತಿ ಎಕರೆಗೆ 20 ಕ್ವಿಂಟಲ್ ಜೋಳ ಖರೀದಿ ಎಂಬ ಷರತ್ತು ತೆಗೆಯುವಂತೆ ಆಡಳಿತದ ವರ್ಗದ ದುಂಬಾಲು ಬಿದ್ದಿದ್ದಾರೆ.
ಕಳೆದ ವರ್ಷ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆ ಸದುಪಯೋಗ ಪಡೆದಿದ್ದ ರೈತರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ವರ್ಷ ರೈತರ ಖಾತೆಗಳಿಗೆ 110 ಕೋಟಿ ರೂ. ಮೊತ್ತ ಜಮೆಯಾಗಿತ್ತು. ಮುಕ್ತ ಮಾರುಕಟ್ಟೆಯ ಬದಲು ಸರ್ಕಾರದಿಂದಲೇ ತೆಗೆದ ಖರೀದಿ ಕೇಂದ್ರಕ್ಕೆ ಜೋಳ ಮಾರಾಟ ಮಾಡಿ, ಹಣ ವಿಳಂಬವಾದರೂ ಉತ್ತಮ ಬೆಲೆಗಾಗಿ ಸಹಿಸಿಕೊಂಡಿದ್ದರು.
ಈ ವರ್ಷ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ 1,200 ರೂ. ಕುಸಿತವಾದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಹೋರಾಟಕ್ಕೆ ಮುಂದಾಗಿದ್ದಾರೆ. ರೈತ ನಿಯೋಗ: ಬೂದಿಹಾಳ ವಿಎಸ್‌ಎಸ್ ಎನ್ ಅಧ್ಯಕ್ಷ ಮಲ್ಲಯ್ಯ ಮಾಡಸಿರವಾರ, ರೈತ ಮುಖಂಡ ಶ್ರೀನಿವಾಸ್ ಗೋಮರ್ಸಿ, ಬಸವರಾಜಗೌಡ ಮಾಡಸಿರವಾರ, ಮೌಲಾಸಾಬ್, ವೀರೇಶ, ಮಾತಾಂಗಪ್ಪ, ಸಿದ್ದಪ್ಪ, ಗ್ರಾಪಂ ಸದಸ್ಯ ನಿರುಪಾದೆಪ್ಪ ನೇತೃತ್ವದ ನಿಯೋಗ ಬುಧವಾರ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಿದೆ. ಮಾರುಕಟ್ಟೆಯಲ್ಲಿ 1,400ರಿಂದ 1,600 ರೂ.ಗೆ ಕೇಳುತ್ತಿದ್ದಾರೆ. ಬೆಂಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್‌ಗೆ 2,738 ರೂ. ದರವಿದೆ. ಪ್ರತಿ ಕ್ವಿಂಟಲ್‌ಗೆ 1,300 ರೂ.ಗಿಂತಲೂ ಕಡಿಮೆ ದರಕ್ಕೆ ಜೋಳ ಕೇಳುತ್ತಿರುವುದರಿಂದ ರೈತರ ನೆರವಿಗೆ ಧಾವಿಸುವಂತೆ ಸರ್ಕಾರದ ಮೊರೆ ಇಟ್ಟಿದ್ದಾರೆ.
ದಿನದಿಂದ ದಿನಕ್ಕೆ ಬೆಲೆ ಕುಸಿತ: ಬೆಂಬೆಲೆ ಯೋಜನೆಯಡಿ ಖರೀದಿ ಕೇಂದ್ರ ತೆರೆದಾಗ ಮಾರುಕಟ್ಟೆಯಲ್ಲಿ ಬೆಲೆ ಜಿಗಿತ ಸಾಮಾನ್ಯ. ಜೋಳದ ವಿಷಯಕ್ಕೆ ಬಂದಾಗ ಕಳೆದ 10 ದಿನಗಳಿಂದಲೂ ಬೆಲೆ ಕುಸಿತದ ಹಾದಿ ಹಿಡಿದಿದ್ದು, ಇದು ರೈತರನ್ನು ಕಂಗೆಡಿಸಿದೆ. 1,600ರಿಂದ 1,700 ರೂ. ಇದ್ದ ಬೆಲೆ ಕೂಡ 500 ರೂ. ತಗ್ಗಿಸಲಾಗಿದೆ. ಜೋಳ ಕೊಯ್ಲು ಮಾಡಿ ಬೆಲೆ ನಿರೀಕ್ಷೆಯಲ್ಲಿದ್ದ ರೈತರು ಮಾರುಕಟ್ಟೆ ಸ್ಥಿತಿ ಕಂಡು ಆಕ್ರೋಶಭರಿತರಾಗಿದ್ದು, ಈಗಾಗಲೇ ಜನಪ್ರತಿನಿಧಿ ಗಳ ದುಂಬಾಲು ಬಿದ್ದಿದ್ದಾರೆ. ಮುಂದುವರಿದ ಭಾಗವಾಗಿ ಸರ್ಕಾರದ ಗಮನ ಸೆಳೆಯಲು ಹೋರಾಟಕ್ಕೆ ಮುಂದಾಗಿದ್ದಾರೆ. ರೈತರು ತಾಲೂಕು ಆಡಳಿತಕ್ಕೆ ಆಗಮಿಸಲಾರಂಭಿಸಿದ್ದು, ಈ ಬಗ್ಗೆ ಸರ್ಕಾರದ ಗಮನ ಸೆಳೆಯುವಂತೆ ತಾಲೂಕು ದಂಡಾಧಿ ಕಾರಿಯನ್ನು ಒತ್ತಾಯಿಸುತ್ತಿದ್ದಾರೆ. ಮನವಿ ಸ್ವೀಕರಿಸಿದ ಅ ಧಿಕಾರಿಗಳು ರಾಜ್ಯ ಸರ್ಕಾರಕ್ಕೆ ರವಾನೆ ಮಾಡುವುದಾಗಿ ಹೇಳುತ್ತಿದ್ದು, ಜಿಲ್ಲಾ ಧಿಕಾರಿಗೆ ವರದಿ ಒಪ್ಪಿಸುತ್ತಿದ್ದಾರೆ