Advertisement
ಗೋಕಾಕ: ಮಳೆಗಾಲದಲ್ಲಿ ಮಾತ್ರ ತುಂಬಿ ಧುಮ್ಮಿಕ್ಕಿ ಪ್ರವಾಸಿಗರನ್ನು ಆಕರ್ಷಿಸುವ ಗೋಕಾಕ ಜಲಪಾತ, ಧುಪದಾಳ ಹಾಗೂ ಗೊಡಚಿನಮಲ್ಕಿ ಜಲಪಾತಗಳಿಗೆ ವಾರಾಂತ್ಯ, ರಜಾ ದಿನಗಳಲ್ಲಿ ಪ್ರವಾಸಿಗರ ಆಗಮನಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದ್ದು ಪ್ರವಾಸಿಗರಿಗೆ ನೋವುಂಟು ಮಾಡಿದೆ.
Related Articles
Advertisement
ಕರ್ನಾಟಕ ಎರಡನೇ ಅತಿ ದೊಡ್ಡ ಈ ಜಲಪಾತವನ್ನು ಬ್ರಿಟಿಷರು ಕೆನಡಾದ ನಯಾಗಾರಕ್ಕೆ ಹೊಲಿಸಿದ್ದಾರೆ. ಇದನ್ನು ಭಾರತದ ನಯಾಗರ ಎಂದಿದ್ದಾರೆ. ಪ್ರವಾಸಿಗರು ಈ ಜಲಪಾತವನ್ನು ಎಲ್ಲ ಬದಿಯಿಂದಲೂ ವೀಕ್ಷಿಸಬಹುದು. ಪ್ರಕೃತಿ ಸೌಂದರ್ಯದ ಜೊತೆಗೆ ಜಲಪಾತದ ಸೌಂದರ್ಯ ಪ್ರವಾಸಿಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ.
ವಿದ್ಯುತ್ ಉತ್ಪಾದನೆ: ಗೋಕಾಕ ಜಲಪಾತ ಹಾಗೂ ಗೋಕಾಕ ಮಿಲ್Éಗೆ ತನ್ನದೇ ಆದ ವೈಶಿಷ್ಠÂತೆಯ ಜೊತೆಗೆ ಐತಿಹಾಸಿಕ ದಾಖಲೆ ಸಹ ಇದೆ. ಜೂನ್ ತಿಂಗಳಿನಿಂದ ಅಕ್ಟೋಬರ್ ವರೆಗೆ ತುಂಬಿ ಹರಿಯುವ ಈ ಜಲಪಾತದ ಕೆಳಗೆ ವಿದ್ಯುತ್ ಉತ್ಪಾದನೆ ಘಟಕವಿದೆ. ಈ ವಿದ್ಯುತ್ ಘಟಕವನ್ನು ಬ್ರಿಟಿಷರ ಕಾಲದಲ್ಲಿ ಅಂದರೆ 1885, 87ರಲ್ಲಿ ವಿದ್ಯುತ್ ಉತ್ಪಾದನೆ ಆರಂಭಿಸಿದ ಇತಿಹಾಸವಿದೆ. ಏಷ್ಯಾ ಖಂಡದಲ್ಲೆ ಪ್ರಪ್ರಥಮ ಬಾರಿಗೆ ಇಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಈ ಜಲಪಾತದ ವಿದ್ಯುತ್‌ನ್ನು ಗೋಕಾಕ ಫಾಲ್ಸ್ ಟàಕ್ಸಟೆ„ಲ್ ಮಿಲ್ಲ, ಹೆಸ್ಕಾಂ ಸೇರಿದಂತೆ ಸ್ಥಳೀಯ ಫಾಲ್ಸ್‌ನಲ್ಲಿ ನೆಲೆಸಿರುವ ಕಾರ್ಮಿಕರ ಮನೆಗಳಿಗೆ ಸರಬರಾಜು ಮಾಡಲಾಗುತ್ತದೆ.
ತೂಗು ಸೇತುವೆ: ಗೋಕಾಕ ಫಾಲ್ಸ್‌ನ ಮತ್ತೂಂದು ವಿಶೇಷತೆ ಎಂದರೆ ತೂಗು ಸೇತುವೆ. ಬ್ರಿಟಿಷರ ಕಾಲದಲ್ಲಿ ಇದನ್ನು ಮರ ಮತ್ತು ಕಬ್ಬಿಣದ ಸರಳುಗಳಿಂದ ಕಟ್ಟಲಾಗಿದೆ. ಜಲಪಾತ ಮೈದುಂಬಿ ಹರಿಯುತ್ತಿರುವಾಗ ಈ ತೂಗು ಸೇತುವೆಯ ಮೇಲೆ ನಡೆದಾಡುವದೇ ಒಂದು ಅದ್ಭುತ ರೊಮಾಂಚಕ ಅನುಭವ. ಪ್ರವಾಸಿಗರಿಗೆ ಜಲಪಾತದ ಸುಂದರ ದೃಶ್ಯ ಕಣ್ತುಂಬಿಕೊಳ್ಳಲು ಹಾಗೂ ಕ್ಯಾಮೆರಾದಲ್ಲಿ ಸೆರೆಹಿಡಿಯಲು ಈ ತೂಗು ಸೇತುವೆ ಸಹಾಯಕಾರಿಯಗಿದೆ. ರಾಜ್ಯದಲ್ಲಿಯೇ ಅತಿದೊಡ್ಡ ತೂಗು ಸೇತುವೆ. ಇಂತಹ ಅದ್ಭುತ ಅನುಭವ ನೀಡುವ ತೂಗು ಸೇತುವೆಯ ಮೋಜು ಅನುಭವಿಸದೇ ಯಾವೊಬ್ಬ ಪ್ರವಾಸಿಗನೂ ಹೋಗುವುದಿಲ್ಲ. ಈ ಫಾಲ್ಸ್‌ನ ಪಕ್ಕದಲ್ಲೇ ಹಸಿರಿನಿಂದ ಕಂಗೊಳಿಸುವ ಕೆಂಪಲ್ ಪಾರ್ಕ ಇದ್ದು ಪ್ರವಾಸಿಗರಿಗೆ ವಿಶ್ರಾಂತಿ ತಾಣವಾಗಿದೆ.