Advertisement
ರಾಜಧಾನಿ ಬೆಂಗಳೂರಿಗೆ ಸಮೀಪವಿರುವ ಪ್ರಾಕೃತಿಕ ಸೌಂದರ್ಯ ತನ್ನ ಮಡಿಲಲ್ಲಿಟ್ಟು ಕೊಂಡಿರುವ ನಂದಿಗಿರಿ ಧಾಮದ ಅಭಿವೃದ್ಧಿಗೆ ಈಗಾಗಲೇ ಉಸ್ತುವಾರಿ ಸಚಿವಡಾ.ಕೆ.ಸುಧಾಕರ್ ಮುಂದಾಗಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ,ಸರ್ಕಾರದಿಂದ ಅನುದಾನವನ್ನೂ ಬಿಡುಗಡೆ ಮಾಡಿಸಿರುವುದಾಗಿ ತಿಳಿಸಿದ್ದಾರೆ.
Related Articles
Advertisement
ಅದೇ ಮಾದರಿಯಲ್ಲಿಮಂಚೇನಹಳ್ಳಿ ಬಳಿ ಇರುವ ದಂಡಿಗಾನಹಳ್ಳಿಜಲಾಶಯ, ಚಿಂತಾಮಣಿ ತಾಲೂಕಿನ ಐತಿಹಾಸಿಕಕೈವಾರ, ಗುಡಿಬಂಡೆ ಮತ್ತು ಬಾಗೇಪಲ್ಲಿ ತಾಲೂಕಿನಕೋಟೆ ಕೊತ್ತಲಗಳು, ಬೆಟ್ಟ-ಗುಡ್ಡ, ಧಾರ್ಮಿಕಸ್ಥಳಗಳನ್ನು ಅಭಿವೃದ್ಧಿಗೊಳಿಸಿದರೆ ಭಕ್ತರ ದರ್ಶನಕ್ಕೆಅನುಕೂಲ ಆಗುತ್ತದೆ. ಜೊತೆಗೆ ಪ್ರವಾಸಿ ತಾಣಗಳಾಗಿಅಭಿವೃದ್ಧಿಗೊಳಿಸಲು ಸಹ ಸಹಕಾರಿಯಾಗಲಿದೆ.ಎರಡು ದಿನ ಚಿಕ್ಕಬಳ್ಳಾಪುರ ಜಿಲ್ಲಾ ಪ್ರವಾಸಕೈಗೊಂಡಿರುವ ರಾಜ್ಯ ಪ್ರವಾಸೋದ್ಯಮ ಸಚಿವಸಿ.ಪಿ.ಯೋಗೇಶ್ವರ್, ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆಪೂರಕ ಯೋಜನೆ ಜಾರಿಗೊಳಿಸುವ ಬಗ್ಗೆ ಜಿಲ್ಲೆಯಜನರು ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.
ಕರ್ನಾಟಕದ ಊಟಿ ಎಂದು ಖ್ಯಾತಿ ಹೊಂದಿರುವಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮದಲ್ಲಿರೋಪ್‌ವೇ ನಿರ್ಮಿಸುವ ಸಲುವಾಗಿ ಸಚಿವರು ಸ್ಥಳಪರಿಶೀಲನೆಗಾಗಿ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಹಲವುವರ್ಷಗಳ ಕನಸು ನನಸಾಗುವ ಜೊತೆಗೆ ಹೊಸಯೋಜನೆಗಳ ನಿರೀಕ್ಷೆಗೆ ಚಾಲನೆ ದೊರೆಯುವುದೇಎಂಬ ಆಶಾಭಾವನೆ ಜಿಲ್ಲೆಯ ಜನರಲ್ಲಿ ಇದೆ.
ಎಂ.ಎ.ತಮೀಮ್ ಪಾಷ