Advertisement

Nandi Hills: ವಿಶ್ವ ವಿಖ್ಯಾತ ನಂದಿಬೆಟ್ಟಕ್ಕೆ ಪ್ರವಾಸಿಗರ ಪ್ರವಾಹ

02:51 PM Sep 27, 2024 | Team Udayavani |

ಚಿಕ್ಕಬಳ್ಳಾಪುರ: ತನ್ನ ಪ್ರಾಕೃತಿಕ ಸೌಂದರ್ಯದ ಮೂಲಕ ದೇಶ, ವಿದೇಶಿಗರ ಗಮನ ಸೆಳೆದಿರುವ ಜಿಲ್ಲೆಯ ಮುಕುಟ ಮಣಿ ವಿಶ್ವ ವಿಖ್ಯಾತ ನಂದಿಗಿರಿ ಧಾಮಕ್ಕೆ ಪ್ರವಾಸಿಗರ ಭೇಟಿ ವರ್ಷದಿಂದ ವರ್ಷಕ್ಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ.

Advertisement

ಹೌದು, ಜಿಲ್ಲೆಯ ಹಿರಿಮೆ, ಗರಿಮೆಯನ್ನು ಹೆಚ್ಚಿಸಿ ಗಮನ ಸೆಳೆದಿರುವ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮ ಬಡವರ ಪಾಲಿನ ಊಟಿ, ಸುಮಾರು ಸಮುದ್ರ ಮಟ್ಟದಿಂದ ಬರೋಬ್ಬರಿ 4200 ಅಡಿಯಷ್ಟು ಎತ್ತರದಲ್ಲಿರುವ ಗಿರಿಧಾಮದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಂಧೀಜಿ ರವರ ವಿಶ್ರಾಂತಿಗೆ ಪ್ರಾಶಸ್ತ್ಯವಾಗಿತ್ತು ಎನ್ನುವುದು ವಿಶೇಷ.

ಹಲವು ವರ್ಷಗಳಿಂದ ಈಚೆಗೆ ನಂದಿಗಿರಿಧಾಮ ಪ್ರತಿ ವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುವ ಮೂಲಕ ಪ್ರತಿ ವಾರಾಂತ್ಯದಲ್ಲಿ ಗಿರಿಧಾಮ ವೀಕ್ಷಣೆಗೆ ವಿದೇಶಿಗರು ಸೇರಿದಂತೆ ಪ್ರವಾಸಿಗರು ಪ್ರವಾಹ ದಂತೆ ಹರಿದು ಬರುತ್ತಿದ್ದಾರೆ. ಕಳೆದ 2023 ರಲ್ಲಿ ನಂದಿಗಿರಿಧಾಮಕ್ಕೆ 14,62,755 ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ.

ಈ ವರ್ಷ ಜನವರಿಂದ ಜೂನ್‌ವರೆಗೂ ಒಟ್ಟು 11,49,682 ಮಂದಿ ಭೇಟಿ ನೀಡಿದ್ದು, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ನೀಡಿರುವ ಪ್ರಕಾರ ಈ ವರ್ಷಾಂತ್ಯಕ್ಕೆ ನಂದಿಗರಿಧಾಮಕ್ಕೆ ಪ್ರವಾಸಿಗರ ಭೇಟಿ 23 ಲಕ್ಷದಷ್ಟು ದಾಟುವ ಸಾಧ್ಯತೆ ಇದೆ ಎನ್ನುತ್ತಾರೆ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಯಶವಂತ್‌ ಕುಮಾರ್‌. 2023 ರಲ್ಲಿ ಒಟ್ಟು 3027 ಮಂದಿ ವಿದೇಶಿಗರು ನಂದಿಗಿರಿಧಾಮಕ್ಕೆ ಆಗಮಿಸಿದ್ದರು. ಈ ವರ್ಷ ಜೂನ್‌ ವರೆಗೂ 3015 ಮಂದಿ ವಿದೇಶಿಗರು ನಂದಿಬೆಟ್ಟಕ್ಕೆ ಆಗಮಿಸಿದ್ದಾರೆ.

ಇನ್ನೂ ನಂದಿಬೆಟ್ಟಕ್ಕೆ ಮಳೆಗಾಲದಲ್ಲಿ ಹೆಚ್ಚು ಪ್ರವಾಸಿಗರು ಹಾಗೂ ವಿದೇಶಿಗರು ಆಗಮಿಸುತ್ತಾರೆ. ನಂದಿಬೆಟ್ಟದಲ್ಲಿ ಸೆಪ್ಪೆಂಬರ್‌ನಿಂದ ಡಿಸೆಂಬರ್‌ ವರೆಗೂ ಹೆಚ್ಚು ಪ್ರವಾಸಿಗರು ಬರುತ್ತಾರೆ. ಕಾರಣ ಈ ಅವಧಿಯಲ್ಲಿ ನಂದಿಯಲ್ಲಿ ಹವಮಾನ ಭಿನ್ನವಾಗಿರುತ್ತದೆ. ಅದರಲ್ಲೂ ಬೆಳ್ಳಿ ಮೋಡಗಳು ಕಲರವ ಹೆಚ್ಚಿರುತ್ತದೆ. ಕಣ್ಣಂಚಿನಲ್ಲಿ ಫಾಗ್‌ ಚಲಿಸುವುದರಿಂದ ಸುರ್ಯೋದಯ ವೀಕ್ಷಣೆ ನೋಡುವುದೇ ಇಲ್ಲಿ ಒಂದು ಅದ್ಬುತ ಎನ್ನಬಹುದು.

Advertisement

ಜಿಲ್ಲೆಗೆ ವರ್ಷ ಒಟ್ಟು 38.42 ಲಕ್ಷ ಪ್ರವಾಸಿಗರು ಭೇಟಿ: ಜಿಲ್ಲೆಯಲ್ಲಿನ ನಂದಿಗಿರಿಧಾಮ, ಮುದ್ದೇನಹಳ್ಳಿ, ನಂದಿ ಬೋಗನಂದೀಶ್ವರ, ರಂಗಸ್ಥಳ, ಅವಲಬೆಟ್ಟ, ಗೌರಬಿದನೂರಿನ ವಿದುರಾಶ್ವತ್ಥ, ಗುಡಿಬಂಡೆ ಅಮಾನಿ ಬೈರಸಾಗರ ಕೆರೆ, ಗುಮ್ಮನಾಯಕನಪಾಳ್ಯ, ಮುರಗಮಲ್ಲ ದರ್ಗಾ, ಕೈವಾರ, ಗಡಿದಂ, ಎಲ್ಲೋಡು, ತಲಕಾಯಲಬೆಟ್ಟ, ಮಿಣಕನಗುರ್ಕಿ ಮಹೇಶ್ವರಿ ಸೇರಿ ಒಟ್ಟು 14 ಪ್ರವಾಸಿ ತಾಣಗಳಿಗೆ ಕಳೆದ 2023 ರಲ್ಲಿ ಒಟ್ಟು 60.31 ಲಕ್ಷ ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ ವರ್ಷ 2024 ರಲ್ಲಿ ಜನವರಿಯಿಂದ ಜೂನ್‌ ವರೆಗೂ 38.42 ಲಕ್ಷ ಮಂದಿ ಭೇಟಿ ನೀಡಿದ್ದಾರೆ. ವಷಾìಂತ್ಯಕ್ಕೆ 70 ಲಕ್ಷ ಪ್ರವಾಸಿಗರು ಭೇಟಿ ನೀಡುವ ನಿರೀಕ್ಷೆ ಇದೆ.

ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next