Advertisement

ಗೋವಾದ ಮಾಪ್ಸಾದಲ್ಲಿ ಹಾಡಹಗಲೇ ಪ್ರವಾಸಿಗರ ಲೂಟಿ

05:12 PM Jun 02, 2022 | Team Udayavani |

ಪಣಜಿ: ಗೋವಾದ ಮಾಪ್ಸಾ ನಗರದಲ್ಲಿ ಹಾಡು ಹಗಲೇ ಮಹಾರಾಷ್ಟ್ರ ಪ್ರವಾಸಿಗರ ಲೂಟಿ ಮಾಡಿದ ಘಟನೆ ಇತ್ತೀಚೆಗಷ್ಟೇ ನಡೆದಿದೆ. ಇದರಿಂದಾಗಿ ಗೋವಾಕ್ಕೆ ಆಗಮಿಸುವ ಪ್ರವಾಸಿಗರ ಸುರಕ್ಷತೆಗೆ ಸಂಬಂಧಿಸಿದಂತೆ ಪ್ರಶ್ನೆ ಹುಟ್ಟಿಕೊಂಡಿದೆ.

Advertisement

ಮಹಾರಾಷ್ಟ್ರದ ಚಂದಗಡದ ಪ್ರವಾಸಿಗರಿಂದ ಲೂಟಿ ಮಾಡಿದ ಆರೋಪಿಗಳನ್ನು ಗೋವಾ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೋವಾಕ್ಕೆ ದೇಶ ವಿದೇಶಿಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಗೋವಾದ ಪ್ರಸಿದ್ಧ ಬೀಚ್‍ಗಳಾದ ಕಲಂಗುಟ್, ಬಾಗಾ, ಸೇರಿದಂತೆ ಹಲವು ಬೀಚ್‍ಗಳಿಗೆ ಭೇಟಿ ನೀಡುತ್ತಾರೆ. ಆದರೆ ಇಲ್ಲಿ ಇರುವ ಕೆಲವರು ಪ್ರವಾಸಿಗರ ದಿಕ್ಕುತಪ್ಪಿಸುತ್ತಿರುವುದು ಆತಂಕಕರ ಸಂಗತಿಯಾಗಿದೆ. ಈ ಮೂಲಕವಾಗಿ ಪ್ರವಾಸಿಗರನ್ನು ವಂಚಿಸುವ ಮತ್ತು ದರೋಡೆ ಮಾಡಲಾಗುತ್ತಿರುವುದು ಗೋವಾಕ್ಕೆ ಆಗಮಿಸುವ ಪ್ರವಾಸಿಗರಲ್ಲಿ ಆತಂಕ ಹೆಚ್ಚುವಂತಾಗಿದೆ.

ರಾಜ್ಯದಲ್ಲಿ ಕಿನಾರಿ ಭಾಗದ ಹಲವು ಪ್ರದೆಶಗಳು ಅನೈತಿಕ ಚಟುವಟಿಕೆಯ ಕೇಂದ್ರವಾಗಿದೆ. ಜೂಜು,ಮಟ್ಕಾ,ಕ್ರಿಕೆಟ್ ಬೆಟ್ಟಿಂಗ್, ಮಾದಕ ವಸ್ತುಗಳ ಸಾಗಾಟ, ವೇಶ್ಯಾವಾಟಿಕೆ, ಹೀಗೆ ಅಕ್ರಮ ಚಟುವಟಿಕೆ ನಡೆಯುತ್ತದೆ. ಇಂತಹ ಅಕ್ರಮ ಚಟುವಟಿಕೆಗಳನ್ನು ನಡೆಸುವವರ ವಿರುದ್ಧ ಪೋಲಿಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಗೋವಾಕ್ಕೆ ಆಗಮಿಸುವ ಪ್ರವಾಸಿಗರು ಇಂತಹ ಅಕ್ರಮ ದಂಧೆಯ ಜಾಲದಲ್ಲಿ ಸಿಲುಕಿ ಹಣ ಕಳೆದುಕೊಳ್ಳುವ ಘಟನೆ ಮರುಕಳಿಸುವ ಸಾಧ್ಯತೆ ಹೆಚ್ಚಾಗಿದೆ.

ಗೋವಾ ರಾಜ್ಯವು ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು ರಾಜ್ಯದ ಹೆಸರಿಗೆ ಮಸಿ ಬಳಿಯುವ ಇಂತಹ ಅಕ್ರಮ ಚಟುವಟಿಕೆ ನಡೆಸುವವರ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಗೋವಾಕ್ಕೆ ಆಗಮಿಸುವ ಪ್ರವಾಸಿಗರಿಗೆ ಸುರಕ್ಷತೆ ನೀಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next