Advertisement

Panamburu Beach ಬದಲು ಮೀನಕಳಿಯಕ್ಕೆ ಬರುವ ಪ್ರವಾಸಿಗರು! ದಾರಿ ತಪ್ಪಿಸುವ ಗೂಗಲ್‌

11:55 PM Jul 07, 2024 | Team Udayavani |

ಸುರತ್ಕಲ್‌: ಗೂಗಲ್‌ ಮೂಲಕ ದಾರಿ ಹುಡುಕಿಕೊಂಡು ನೀವು ಪಣಂಬೂರು ಬೀಚ್‌ಗೆ ಬರುತ್ತೀರಾ? ಹಾಗಾದರೆ ನೀವು ದಾರಿ ತಪ್ಪುವುದು ಖಚಿತ. ಪಣಂಬೂರು ಬೀಚ್‌ಗೆಂದು ಬರುವವರನ್ನು ಗೂಗಲ್‌ ಮ್ಯಾಪ್‌ ಕಿ.ಮೀ. ಗಟ್ಟಲೆ ಸುತ್ತಿಸಿ ಮೀನಕಳಿಯ ಡೆಡ್‌ ಎಂಡ್‌ ಪ್ರದೇಶದ ಅಪಾಯಕಾರಿ ಬೀಚ್‌ಗೆ ತಂದು ನಿಲ್ಲಿಸುತ್ತಿದೆ.

Advertisement

ಈ ಕಾರಣದಿಂದ ಈಗ ಹೋಮ್‌ ಗಾರ್ಡ್‌ ಒಬ್ಬರನ್ನು ಈ ಅಪಾಯಕಾರಿ ಸ್ಥಳದಲ್ಲಿ ನಿಯೋಜಿಸಿ ಪ್ರವಾಸಿಗರಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ. ಆದರೆ ಗೂಗಲ್‌ ಮ್ಯಾಪ್‌ನಲ್ಲಿ ಪಣಂಬೂರು ಬೀಚ್‌ ಪಾರ್ಕಿಂಗ್‌ ಎಂದು ಕೇಳಿದರೆ ಪಣಂಬೂರು ಬೀಚ್‌ ರಸ್ತೆಯನ್ನು ತೋರಿಸುತ್ತದೆ.

ಗೂಗಲ್‌ ಮ್ಯಾಪ್‌ ನಂಬಿ ಉಡುಪಿಯಿಂದ ಮಂಗಳೂರಿಗೆ ಹೋಗುವವರಿಗೆ ಹಳೆಯಂಗಡಿ ಬಳಿಯ ನಾರಾಯಣಗುರು ರಸ್ತೆಯನ್ನು ತೋರಿಸಿದರೆ, ಪಣಂಬೂರು ಬೀಚ್‌ ಎಂದರೆ ಮೀನಕಳಿಯ ಪ್ರದೇಶವನ್ನು ತೋರಿಸುತ್ತದೆ. ಬೆಂಗಳೂರು, ಕೋಲಾರ ಮುಂತಾದ ಹೊರ ಊರಿನ ನೋಂದಾಯಿತ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಅಪಾಯಕಾರಿ ಮೀನಕಳಿಯ ಪ್ರದೇಶಕ್ಕೆ ಬಂದಾಗ, ಅಲ್ಲಿದ್ದ ಹೋಮ್‌ ಗಾರ್ಡ್‌ ಸಿಬಂದಿ ಅಪಾಯದ ಎಚ್ಚರಿಕೆ ನೀಡಿ ವಾಪಸ್‌ ಕಳಿಸಿದ್ದಾರೆ.

ಪ್ರವಾಸೋದ್ಯಮ ಇಲಾಖೆ ಈ ಬಗ್ಗೆ ಗಮನಹರಿಸಿ ಪ್ರಸಿದ್ಧ ಸ್ಥಳಗಳ ಹೆಸರು, ನಕ್ಷೆಯನ್ನು ಸರಿಯಾಗಿ ನೋಂದಾಯಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಪ್ರವಾಸಿಗರ ಆಗ್ರಹ.

Advertisement

Udayavani is now on Telegram. Click here to join our channel and stay updated with the latest news.

Next