Advertisement
ನಿರ್ಬಂಧಸಾಂಪ್ರದಾಯಿಕ ಮೀನುಗಾರರನ್ನು ಹೊರತುಪಡಿಸಿ ಇತರ ಯಾವುದೇ ಪ್ರವಾಸಿಗರು ಹಾಗೂ ಸಾರ್ವಜನಿಕರು ಸಮುದ್ರಕ್ಕೆ ಇಳಿಯುವುದನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ಈಗಾಗಲೇ ಮಲ್ಪೆಯಲ್ಲಿ ತಡೆಬೇಲಿ ಹಾಕಿದ್ದು, ಕೆಂಪು ಬಾವುಟ ನೆಡಲಾಗಿದೆ. ಇದನ್ನು ದಾಟದಂತೆ ಸೂಚನೆ ನೀಡಲಾಗುತ್ತಿದೆ.
ಪ್ರವಾಸಿಗರು ತೀರದತ್ತ ತೆರಳಬಹುದಾದರೂ, ನೀರಿಗಿಳಿಯದಂತೆ ಗಮನಿಸಲು ಲೈಫ್‌ಗಾರ್ಡ್, ಹೋಮ್‌ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ಜತೆಯಲ್ಲಿ ಸ್ಥಳೀಯ ಜೀವರಕ್ಷಕರು ಕಾರ್ಯಾಚರಿಸುತ್ತಿದ್ದು, ಪ್ರವಾಸಿಗರನ್ನು ಎಚ್ಚರಿಸುವ ಜತೆಗೆ ಅಪಾಯದಲ್ಲಿ ಸಿಲುಕಿದವರನ್ನು ರಕ್ಷಿಸುವ ಕೆಲಸ ಮಾಡುತ್ತಾರೆ. ಪೊಲೀಸರಿಗೊಪ್ಪಿಸುವ ಅಧಿಕಾರ
ಸಾರ್ವಜನಿಕರು ಕಡಲ ಕಿನಾರೆಗಳಲ್ಲಿ ನಿಯೋಜಿಸಿರುವ ಪ್ರವಾಸಿ ಮಿತ್ರರ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು. ಅಪಾಯಕಾರಿ ಪ್ರದೇಶಗಳನ್ನು ಪ್ರವೇಶಿಸುವಂತಿಲ್ಲ. ಆದೇಶ ಉಲ್ಲಂ ಸಿದರೆ ಪೊಲೀಸ್ ಠಾಣೆಗೆ ಒಪ್ಪಿಸಲು ಕಡಲ ಕಿನಾರೆಯಲ್ಲಿ ನಿಯೋಜಿಸಿದ ಲೈಫ್‌ಗಾರ್ಡ್, ಪ್ರವಾಸಿ ಮಿತ್ರರಿಗೆ ಅಧಿಕಾರವಿದೆ ಎನ್ನುತ್ತಾರೆ ಮಂಗಳೂರು ಹೋಂಗಾರ್ಡ್ ಡೆಪ್ಯುಟಿ ಕಮಾಂಡೆಂಟ್ ರಮೇಶ್.
Related Articles
ಉಡುಪಿ ಜಿಲ್ಲೆಯಲ್ಲಿ ಈಗಾಗಲೇ 10 ಮಂದಿ ಪ್ರವಾಸಿ ಮಿತ್ರರಿದ್ದು, ಮಳೆಗಾಲದಲ್ಲಿ ಇವರ ಸಂಖ್ಯೆಯನ್ನು 20ಕ್ಕೇರಿಸಲಾಗಿದೆ. ಇವರು ಬೆಳಗ್ಗೆ 10ರಿಂದ ಸಂಜೆ 7ಗಂಟೆಯ ವರೆಗೆ ಕಾರ್ಯಾಚರಿಸುತ್ತಾರೆ. ಪ್ರವಾಸಿಗರು ನೀರಿಗಿಳಿಯದಂತೆ ನೋಡಿಕೊಳ್ಳುತ್ತಾರೆ.
Advertisement
ಎಚ್ಚರಿಕೆ ವಹಿಸಬೇಕು ಮಳೆಗಾಲದಲ್ಲಿ ಸಮುದ್ರಕ್ಕೆ ಇಳಿಯದಂತೆ ಪದೇ ಪದೇ ಸೂಚನೆಯನ್ನು ನೀಡಲಾಗುತ್ತದೆ. ಆದರೆ ಇದನ್ನು ಮೀರಿ ಪ್ರವಾಸಿಗರು ಪ್ರಾಣಕ್ಕೆ ಕುತ್ತು ತರುತ್ತಾರೆ. ಆದ್ದರಿಂದ ಮುನ್ನೆಚ್ಚರಿಕೆಯಾಗಿ ಲೈಫ್‌ಗಾರ್ಡ್, ಹೋಂಗಾರ್ಡ್‌ಗಳೊಂದಿಗೆ ಸಹಕರಿಸಬೇಕು.
-ಡಾ| ಪ್ರಶಾಂತ್ ಶೆಟ್ಟಿ , ಹೋಂಗಾರ್ಡ್ ಜಿಲ್ಲಾ ಕಮಾಂಡೆಂಟ್, ಉಡುಪಿ ಸೂಚನೆ
ಕಡ್ಡಾಯ ಪಾಲಿಸಿ
ಮಳೆಗಾಲದ ಸಮಯದಲ್ಲಿ ಸಮುದ್ರ ಅಲೆಗಳು ದೊಡ್ಡದಾಗಿದ್ದು, ಅಪಾಯಕಾರಿಯಾಗಿರುವುದರಿಂದ ಪ್ರವಾಸಿಗರು ಲೈಫ್‌ಗಾರ್ಡ್ ಮತ್ತು ಹೋಮ್‌ಗಾರ್ಡ್ ಸಿಬಂದಿ ನೀಡುವ ಸೂಚನೆಯನ್ನು ರಕ್ಷಣೆಯ ಹಿತದೃಷ್ಟಿಯಿಂದ ಪಾಲಿಸತಕ್ಕದ್ದು .
-ನಿಶಾ ಜೇಮ್ಸ್,
ಪೊಲೀಸ್ ವರಿಷ್ಠಾಧಿಕಾರಿ ಉಡುಪಿ -ನಟರಾಜ್ ಮಲ್ಪೆ