Advertisement

Tourist Place: ಪ್ರವಾಸೋದ್ಯಮ ಇಲಾಖೆಯ ಪ್ರೋತ್ಸಾಹವಿಲ್ಲದೆ ಸ್ವರಗುತ್ತಿರುವ ಪ್ರವಾಸಿ ತಾಣಗಳು

07:45 AM Sep 28, 2023 | Team Udayavani |

ಗಂಗಾವತಿ: ವಿಜಯನಗರ ಸಾಮ್ರಾಜ್ಯದ ಮೂಲ ರಾಜಧಾನಿ ಆನೆಗೊಂದಿ ಹಾಗೂ ಕಿಷ್ಕಿಂಧಾ ಅಂಜನಾದ್ರಿ, ಏಳು ಗುಡ್ಡ ಪ್ರದೇಶ ಪ್ರಾಕೃತಿಕವಾಗಿ ಸೌಂದರ್ಥನ ಹೊಂದಿದೆ. ಇದನ್ನು ತಿಳಿದಿರುವ ದೇಶ ವಿದೇಶದ ಪ್ರವಾಸಿಗರು ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಈ ಭಾಗಕ್ಕೆ ಆಗಮಿಸುತ್ತಾರೆ. ಪ್ರವಾಸೋದ್ಯಮ ಇಲಾಖೆ ಕೊಪ್ಪಳ ಜಿಲ್ಲೆಯಲ್ಲಿ ಇದ್ದರೂ ಗಂಗಾವತಿ ತಾಲೂಕಿನ ಆನೆಗುಂದಿ ಭಾಗ ಸೇರಿದಂತೆ ಇಲಿಯ ಐತಿಹಾಸಿಕ ಮತ್ತು ಪ್ರವಾಸಿ ತಾಣಗಳನ್ನು ನಿರ್ಲಕ್ಷ ಮಾಡಿದೆ. ಪ್ರವಾಸಗರಿಗೆ ಅಗತ್ಯ ಮಾಹಿತಿ ತಿಳಿಸುವ ಪ್ರವಾಸೋದ್ಯಮ ಇಲಾಖೆಯ ಯಾವುದೇ ನೋಟಿಸ್ ಬೋರ್ಡ್ ಗಳು ಮತ್ತು ಫಲಕಗಳು ಇಲ್ಲಿ ನಿರ್ಮಾಣವಾಗಿಲ್ಲ.

Advertisement

ಆನೆಗುಂದಿ ಭಾಗದಲ್ಲಿ ಐತಿಹಾಸಿಕ ಪ್ರಸಿದ್ಧವಾದ 9 ಯತಿಗಳ ನವ ಬೃಂದಾವನ ಗಡ್ಡಿ,ಚಿಂತಾಮಣಿ, ವಾಲಿ ಸುಗ್ರೀವರು ಯುದ್ಧ ಮಾಡಿದ ಸ್ಥಳ,ವಾಲಿ ಬಂಡಾರ,ವಾಲೀಕಿಲ್ಲಾ, ಪಂಪ ಸರೋವರ, ಚಿಂಚನ ಕೋಟೆ ,ತಳವಾರ ಘಟ್ಟ ಸೂರ್ಯನಾರಾಯಣ ದೇವಾಲಯ, ಶ್ರೀಕೃಷ್ಣದೇವರಾಯರ ಸಮಾಧಿ ಎಂದು ಕರೆಯಲ್ಪಡುವ 60 ಕಾಲಿನ ಮಂಟಪ, ಸಾಣಾಪೂರ ಲೇಖ್, ಸಾಣಾಪೂರ ಫಾಲ್ಸ್, ವಿಜಯನಗರ ಕಾಲದಲ್ಲಿ ನಿರ್ಮಿಸಿದ ಅಕ್ವಾಡೆಕ್ಟ್,(ಸೇತುವೆ), ಹಿರೇಬೆಣಕಲ್ ಬೆಟ್ಟದಲ್ಲಿರುವ ಶಿಲಾಯುಗದ ಜನಾಂಗದ ಮನೆಗಳು,ಶಿಲಾಸಮಾಧಿಗಳು ಮತ್ತು ಕುಮ್ಮಟದುರ್ಗದ ಗಂಡುಗಲಿ ಕುಮಾರರಾಮಕೋಟೆ ಹಾಗೂ ಜಟ್ಡಂಗಿ ರಾಮೇಶ್ವರ ದೇಗುಲ ಸೇರಿ ಹಲವು ಸ್ಮಾರಕಗಳಿವೆ. ಇಲ್ಲಿಗೆ ಹೋಗಿ ಬರಲು ಸರಿಯಾದ ರಸ್ತೆಗಳಿಲ್ಲ. ಎಲ್ಲಾ ಪ್ರವಾಸಿತಾಣಗಳು ಮತ್ತು ಸ್ಮಾರಕಗಳ ಕುರಿತು ಪ್ರವಾಸೋದ್ಯಮ ಇಲಾಖೆ ಸಾರ್ವಜನಿಕರಿಗೆ ಮಾಹಿತಿ ನೀಡುವಲ್ಲಿ ವಿಫಲವಾಗಿದೆ.

ಗಂಗಾವತಿ, ಕಂಪ್ಲಿ,ಕಮಲಾಪೂರ,ಹೊಸಪೇಟೆ, ಕೊಪ್ಪಳ, ಆನೆಗೊಂದಿ ಮಾರ್ಗಕ್ಕೆ ಬರಲು ಹಿಟ್ನಾಳ ಮತ್ತು ಶಿವಪೂರ ಮತ್ತು ಬುಕ್ಕಸಾಗರ ಗ್ರಾಮಗಳ ಹತ್ತಿರ ಮಾರ್ಗಸೂಚಿ ಫಲಕಗಳಲಿಲ್ಲ. ಪ್ರವಾಸೋದ್ಯಮ ಇಲಾಖೆ ಪ್ರತಿ ವರ್ಷ ಆನೆಗೊಂದಿಯಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಆಚರಿಸಿ ಕೈ ತೊಳೆದುಕೊಳ್ಳುತ್ತದೆ. ಇದನ್ನು ಬಿಟ್ಡರೆ ಪ್ರವಾಸೋದ್ಯಮ ಕ್ಕೆ ಪೂರಕವಾಗಿ ಇರುವ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆಂಬ ಆರೋಪವನ್ನು ಸ್ಥಳೀಯರು ಮಾಡುತ್ತಾರೆ.

– ಕೆ.ನಿಂಗಜ್ಜ

Advertisement

ಇದನ್ನೂ ಓದಿ: ಜಲಪ್ರಳಯದ ಮನಕಲಕುವ ಕಥಾಹಂದರದ “2018” ನಮ್ಮ ಬದುಕಿನ ಚಿತ್ರ!

Advertisement

Udayavani is now on Telegram. Click here to join our channel and stay updated with the latest news.

Next