Advertisement
ಹೊಸ ವರ್ಷಾಚರಣೆ, ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದ ಪ್ರವಾಸಿಗರುಜಿಲ್ಲೆಗೆ ಆಗಮಿಸಿದ್ದಾರೆ. ಆದರೆ, ಪ್ರವಾಸಿಗರನೆಚ್ಚಿನ ತಾಣ ಮುಳ್ಳಯ್ಯನಗಿರಿ ಸುತ್ತಮುತ್ತಲಪ್ರವಾಸಿ ತಾಣಗಳಿಗೆ ದತ್ತ ಜಯಂತಿ ಹಿನ್ನೆಲೆಯಲ್ಲಿಜಿಲ್ಲಾಡಳಿತ ನಿರ್ಬಂಧ ವಿಧಿಸಿದ್ದರಿಂದ ಬಹುತೇಕ ಪ್ರವಾಸಿಗರು ಮುತ್ತೋಡಿ ವನ್ಯಜೀವಿ ತಾಣವನ್ನು ಆಯ್ಕೆ ಮಾಡಿಕೊಂಡಿದ್ದರು. ಜಿಲ್ಲೆಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡ ಬಳಿಕ ಮುತ್ತೋಡಿ ಪ್ರವಾಸಿ ತಾಣದಲ್ಲಿ ಸಫಾರಿಗೆ ನಿರ್ಬಂಧ ವಿಧಿಸಲಾಗಿತ್ತು. ಮತ್ತೋಡಿವನ್ಯಜೀವಿ ತಾಣದಲ್ಲಿ ಪ್ರವಾಸಿರ ದಂಡುಇಲ್ಲದೇ ವಾಹನ ಭರಾಟೆ ಇಲ್ಲದೆ. ಪ್ರಾಣಿಗಳು ಸ್ವತ್ಛಂದವಾಗಿ ವಿಹರಿಸುತ್ತಿದ್ದವು. ಸದ್ಯ ಕೋವಿಡ್ ಕಡಿಮೆಯಾಗುತ್ತಿರುವುದರಿಂದ ಇತ್ತೀಚೆಗಷ್ಟೇ ಸಫಾರಿಗೆ ಅರಣ್ಯ ಇಲಾಖೆ ಅವಕಾಶ ಕಲ್ಪಿಸಿಕೊಟ್ಟಿದೆ. ಶುಕ್ರವಾರದಿಂದ ಭಾನುವಾರದವರೆಗೂಸಾಲು ಸಾಲು ರಜೆ ಹಾಗೂ ಹೊಸ ವರ್ಷದಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸಿದ್ದ ಪ್ರವಾಸಿಗರು ಮುತ್ತೋಡಿಯನ್ನು ಆಯ್ಕೆ ಮಾಡಿಕೊಂಡಿದ್ದರು.ಮುತ್ತೋಡಿ ವನ್ಯಜೀವಿ ತಾಣಕ್ಕೆ ಭಾರೀ ಪ್ರಮಾಣದ ಪ್ರವಾಸಿಗರು ವನ್ಯಜೀವಿ ದರ್ಶನ ಪಡೆದುಕೊಳ್ಳಲು ಕಾತುರದಿಂದ ಸಫಾರಿಗೆತೆರಳಿದ್ದರು. ಭಾರೀ ಪ್ರಮಾಣದ ಪ್ರವಾಸಿಗರುಹಾಗೂ ವಾಹನ ಭರಾಟೆಯಿಂದ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ನಿರಾಸೆ ಉಂಟು ಮಾಡಿತು.
Advertisement
ಮುತ್ತೋಡಿ ವನ್ಯಜೀವಿ ತಾಣಕ್ಕೆ ಹರಿದು ಬಂದ ಪ್ರವಾಸಿಗರ ದಂಡು
05:06 PM Dec 28, 2020 | Suhan S |
Advertisement
Udayavani is now on Telegram. Click here to join our channel and stay updated with the latest news.