Advertisement
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ರಘುಪತಿ ಭಟ್ ಪ್ರಶ್ನೆಗೆ ಉತ್ತರಿಸಿದ ಅವರು, ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳಿಗೆ 19.83 ಕೋಟಿ ರೂ. ಅನುದಾನ ನಿಗದಿಪಡಿಸಿ ಇದುವರೆಗೂ 4.51 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು. ಕಡಲ ತೀರದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಕಾಯಂ ನಿರ್ಮಾಣದ ಪ್ರವಾಸಿ ಸೌಲಭ್ಯ ಕಲ್ಪಿಸಲು ಸಿಆರ್‌ಝಡ್ ನಿಯಮಗಳ ಪ್ರಕಾರ ಅವಕಾಶ ಇರುವುದಿಲ್ಲ. ಹೀಗಾಗಿಕೇಂದ್ರ ಪ್ರವಾಸೋದ್ಯಮ ಇಲಾಖೆ ಹಾಗೂ ಅರಣ್ಯ ಇಲಾಖೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆಯು ತನ್ನ ಇತಿಮಿತಿಯಲ್ಲಿ ಕಡಲತೀರ ಸಂಪರ್ಕಿಸುವ ರಸ್ತೆ ಅಭಿವೃದ್ಧಿ, ಶೌಚಾಲಯ, ವಾಹನ ನಿಲುಗಡೆ, ವೀಕ್ಷಣಾ ಗೋಪುರ ಸೌಲಭ್ಯ
ಒದಗಿಸುತ್ತಿದೆ ಎಂದು ತಿಳಿಸಿದರು.
ಪಟ್ಟದಕಲ್ಲು, ಹಂಪಿ, ಆನೆಗೊಂದಿ, ನಂದಿಬೆಟ್ಟ, ಶ್ರೀರಂಗಪಟ್ಟಣ ಕೋಟೆ, ಮೈಸೂರು ಚಾಮುಂಡಿಬೆಟ್ಟ, ಮೇಲುಕೋಟೆ, ಶ್ರವಣಬೆಳಗೊಳ, ಬೇಲೂರು-ಹಳೇ ಬೀಡು, ಚೌಡದಾನಾಪುರ, ದೇವನಹಳ್ಳಿ ಕೋಟೆ, ಮಾಗಡಿ, ಬನವಾಸಿ, ಲಕ್ಕುಂಡಿ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.