Advertisement

ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆಕ್ರಮ : ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ರಮೇಶ್‌

11:18 AM Oct 01, 2020 | sudhir |

ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಪರಿಶೀಲಿಸಲು ಬುಧವಾರ ರಾಜ್ಯ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಕೆ.ಎನ್‌.ರಮೇಶ್‌ ಅವರು ಜಿಲ್ಲೆಯಲ್ಲಿ ವಿವಿಧ ಪ್ರವಾಸಿಗಳ ತಾಣಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

Advertisement

ಮೊದಲಿಗೆ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಹೋಬಳಿಯ ದಂಡಿಗಾನಹಳ್ಳಿ ಕೆರೆಗೆ ಭೇಟಿ ನೀಡಿ ಅಲ್ಲಿನ ಪ್ರಾಕೃತಿಕ ಸೌಂದರ್ಯ ಕಂಡು ಸಂತಸಗೊಂಡರು. ಬೆಟ್ಟಗುಡ್ಡಗಳ ಮಧ್ಯೆ ಕೆರೆ ಮತ್ತು ಸುತ್ತಮುತ್ತಲು ಸಮೃದ್ಧವಾಗಿ ಬೆಳೆದಿರುವ
ಮರಗಿಡಗಳನ್ನು ನೋಡಿ ಇದನ್ನು ಪ್ರವಾಸಿ ತಾಣವನ್ನು ಅಭಿವೃದ್ಧಿಗೊಳಿಸಲು ಇಂಗಿತ ವ್ಯಕ್ತಪಡಿಸಿದರು.

ಕೋಡಿ ವೀಕ್ಷಿಸಿ ಆನಂದ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕೆರೆಯ ಸೌಂದರ್ಯ ವೀಕ್ಷಿಸಲು ಜಿಲ್ಲಾದ್ಯಂತ ಸಹಸ್ರಾರು ಮಂದಿ ನಾಗರಿಕರು ಭೇಟಿ ನೀಡಿರುವುದನ್ನು ಕಂಡ ಪ್ರವಾಸೋದ್ಯಮ ಇಲಾ ಖೆಯ ನಿರ್ದೇಶಕರು, ಕೆರೆಯ ಪ್ರದೇಶ ವೀಕ್ಷಿಸಿ ಕೆರೆ ಕೋಡಿ ಹರಿಯುತ್ತಿ¨ನು‌ª ° ಕಂಡು ಹರ್ಷ ವ್ಯಕ್ತಪಡಿಸಿ ದರು. ನಿರ್ದೇಶಕರು ಭೇಟಿ ನೀಡುವ ವೇಳೆಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ನಾಗರಿಕರು, ಮಹಿಳೆಯರು, ಮಕಳು‌ ಕೆರೆಯಲ್ಲಿ ಇಳಿದು ಕೋಡಿ
ವೀಕ್ಷಿಸಿ ಆನಂದಿಸುತ್ತಿದ್ದರು.

ಇದನ್ನೂ ಓದಿ :ನ.4ರಿಂದ 9ರವರೆಗೆ ಯುಎಇನಲ್ಲಿ ನಡೆಯಲಿದೆ ಕಿರು ಮಹಿಳಾ ಐಪಿಎಲ್‌

Advertisement

ಸಮಗ್ರ ಮಾಹಿತಿ: ದಂಡಿಗಾನಹಳ್ಳಿ ಕೆರೆಯ ನಂತರ ಜಿಲ್ಲೆಯ ಐತಿಹಾಸಿಕ ನಂದಿ ಬೆಟ್ಟದಲ್ಲಿ ರೋಪ್‌ವೇ ನಿರ್ಮಿಸಲು ಮತ್ತು ನಂದಿಗಿರಿಧಾಮ ಅಭಿವೃದ್ಧಿ ಗೊಳಿಸಲು ಸಿದ್ಧಪಡಿಸಿರುವ ಯೋಜನೆ ಮತ್ತು ನಕ್ಷೆ ವೀಕ್ಷಿಸಿದರು. ಜಿಲ್ಲೆಯ ಪ್ರವಾಸೋದ್ಯಮ ಕೇಂದ್ರ ಗಳನ್ನು ಅಭಿವೃದ್ಧಿಗೊಳಿಸಲು ಆಸಕ್ತಿ ಹೊಂದಿರುವ ಜಿಲ್ಲಾಧಿಕಾರಿ ಆರ್‌.ಲತಾ ಅವರು ಜಿಲ್ಲೆಯ ಪ್ರವಾಸಿ ತಾಣಗಳ ಕುರಿತು ಸಮಗ್ರವಾಗಿ ಮಾಹಿತಿ ನೀಡಿ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುವ ಜೊತೆಗೆ ಜಿಲ್ಲೆ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.

ನಿರ್ದೇಶಕರ ಆಸಕ್ತಿ: ಜಿಲ್ಲೆಯ ಪ್ರಮುಖ ಸ್ಥಳಗಳನ್ನು ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಗೊಳಿಸಲು ರಾಜ್ಯ
ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಕೆ.ಎನ್‌. ರಮೇಶ್‌ ಅವರು ವಿಶೇಷಆಸಕ್ತಿ ತೋರಿಸಿದರು.ಯಾವ ಯಾವ ಪ್ರದೇಶಗಳನ್ನು ಪ್ರವಾಸಿ ಕೇಂದ್ರಗಳಾಗಿ ಅಭಿವೃದ್ಧಿಗೊಳಿಸಲು ಅನುಕೂಲವಾಗುತ್ತದೆ ಎಂದು ಜಿಲ್ಲಾಧಿಕಾರಿಗಳೊಂದಿಗೆ ಸುದೀರ್ಘ‌ವಾಗಿಚರ್ಚೆನಡೆಸಿದರು.

ಇದನ್ನೂ ಓದಿ :ಕದನ ವಿರಾಮ ಉಲ್ಲಂಘಿಸಿ ಪಾಕ್ ನಿಂದ ಗುಂಡಿನ ದಾಳಿ: ಭಾರತದ ಯೋಧ ಹುತಾತ್ಮ

ದಂಡಿಗಾನಹಳ್ಳಿ ಕೆರೆ ವೀಕ್ಷಣೆ ವೇಳೆಯಲ್ಲಿ ಚಿಕ್ಕಬಳ್ಳಾ ಪುರಜಿಲ್ಲೆಯಮಲೆನಾಡುಎಂದುಖ್ಯಾತಿಹೊಂದಿರುವ ಈ ಪ್ರದೇಶವನ್ನು ಪ್ರವಾಸಿಗರ ತಾಣವಾಗಿ ಅಭಿವೃದ್ಧಿಗೊಳಿಸಿ ಕೆರೆಯಲ್ಲಿ ಭದ್ರತಾ ಕ್ರಮಗಳನ್ನು ಕೈಗೊಂಡು ಬೋಟಿಂಗ್‌ ವ್ಯವಸ್ಥೆ ಕಲ್ಪಿಸಬೇಕೆಂದು ನಾಗರಿಕರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಎಸ್ಪಿ ಮಿಥುನ್‌ಕುಮಾರ್‌, ಜಿಲ್ಲಾ ನಗರಾಭಿವೃದ್ಧಿ ಕೋಶದ
ಯೋಜನಾ ನಿರ್ದೇಶಕಿ ರೇಣುಕಾ, ಚಿಕ್ಕಬಳ್ಳಾಪುರ ನಗರಸಭೆಯ ಪೌರಾಯುಕ್ತ ಡಿ.ಲೋಹಿತ್‌, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ನರೇಶ್‌, ಪ್ರವಾಸೋದ್ಯಮ ಇಲಾಖೆವಿಶೇಷಅಧಿಕಾರಿಗೋಪಾಲ್‌, ಚಿಕ್ಕಬಳ್ಳಾಪುರ ತಹಶೀಲ್ದಾರ್‌ ನಾಗಪ್ರಶಾಂತ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next